CONNECT WITH US  

86 ತಾಲೂಕುಗಳಲ್ಲಿ ಬರ ಪರಿಹಾರ ಶುರು

ಕೇಂದ್ರದ ನಿಯಮ ಪ್ರಕಾರ ಘೋಷಣೆ

ಸಾಂದರ್ಭಿಕ ಚಿತ್ರ

ಬೆಂಗಳೂರು: ತೀವ್ರ ಮಳೆ ಕೊರತೆ ಕಾಣಿಸಿಕೊಂಡಿರುವ 23 ಜಿಲ್ಲೆಗಳ 86 ತಾಲೂಕುಗಳನ್ನು ಬರಪೀಡಿತ ಎಂದು ರಾಜ್ಯ ಸರ್ಕಾರ ಘೋಷಿಸಿದ್ದು, ತತಕ್ಷಣದಿಂದಲೇ ಬರ ಪರಿಹಾರ ಕಾಮಗಾರಿಗೆ ಚಾಲನೆ ನೀಡಿದೆ. ತಕ್ಷಣಕ್ಕೆ ಕುಡಿಯುವ ನೀರು ಪೂರೈಕೆಗೆ ತಲಾ 50 ಲಕ್ಷ ರೂ.ನಂತೆ 43 ಕೋಟಿ ರೂ., ಗೋವುಗಳಿಗೆ ಮೇವು ಪೂರೈಸಲು 86 ತಾಲೂಕುಗಳಿಗೆ 15 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣದಿಂದ ಪ್ರತಿ ತಾಲೂಕಿಗೆ 50 ಲಕ್ಷ ರೂ. ಪರಿಹಾರ ಕಾಮಗಾರಿ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ, ಮಂಗಳವಾರ ನಡೆದ ಸಂಪುಟ ಉಪ ಸಮಿತಿಯ ಸಭೆಯಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರವೇ 86 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ತೀರ್ಮಾನಿಸಲಾಯಿತು ಎಂದರು. ವಾಡಿಕೆಯ ಪ್ರಕಾರ ಶೇ.60 ಕ್ಕಿಂತ ಕಡಿಮೆ ಮಳೆ, ಸತತ 3 ವಾರ ಶುಷ್ಕ ವಾತಾವರಣ, ಶೇ.75 ಕ್ಕಿಂತ ಕಡಿಮೆ ಬಿತ್ತನೆ, ಉಪಗ್ರಹ ಆಧಾರಿತ ಬೆಳೆ ವಿಶ್ಲೇಷಣೆ, ಶೇ.50 ಕ್ಕಿಂತ ಹೆಚ್ಚಿನ ತೇವಾಂಶ ಕೊರತೆ ಆಧರಿಸಿ ಬರ ಪೀಡಿತ ಎಂದು ಘೋಷಿಸಲಾಗಿದೆ ಎಂದು ಹೇಳಿದರು.

ಈ ವರ್ಷದ ಮೇ 30 ಕ್ಕೆ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿ ಜೂನ್‌ ವೇಳೆಗೆ ಇಡೀ ರಾಜ್ಯ ವ್ಯಾಪಿಸಿ ಕೊಂಡರೂ ಮಲೆನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಯಿತು. ಉಳಿದಂತೆ ಉತ್ತರ ಒಳನಾಡು, ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಬರದ ಕರಾಳ ಛಾಯೆ
ಕಾಣಿಸಿಕೊಂಡಿದೆ ಎಂದು ಹೇಳಿದರು.

8 ಸಾವಿರ ಕೋಟಿ ನಷ್ಟ: ಪ್ರಧಾನಿ ಮೋದಿ ಅವರನ್ನು ಭೇಟಿ ಸಂದರ್ಭದಲ್ಲಿಯೂ ಬರ ಪರಿಸ್ಥಿತಿ ಕುರಿತು ವಿವರಣೆ ನೀಡಲಾಗಿದೆ. 15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಒಣಗಿ ಹೋಗಿ ದ್ದು 8 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದರು. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಬರ ಪ್ರದೇಶಗಳಲ್ಲಿ ಜಂಟಿ ಸಮೀಕ್ಷೆ ನಡೆಸಲು ಸೂಚನೆ ನೀಡಲಾಗಿದ್ದು, ವರದಿ ಬಂದ ಬಳಿಕ ಕೇಂದ್ರಕ್ಕೆ ಮಾಹಿತಿ ನೀಡಲಾಗು ವುದು ಎಂದರು.

ಇಂದು ನಾಳೆ ಸಮೀಕ್ಷೆ
ಆರು ಸದಸ್ಯರ ಕೇಂದ್ರದ 2 ತಂಡಗಳು ನಗರಕ್ಕೆ ಆಗಮಿಸಿದ್ದು ಬುಧವಾರ ಮತ್ತು ಗುರುವಾರ ಅಧ್ಯಯನ ನಡೆಸಲಿವೆ. ಅನಿಲ್‌ ಮಲಿಕ್‌ ಅವರ ತಂಡ ಕೊಡಗು, ಬತೇಂದ್ರ ಕುಮಾರ್‌ ಸಿಂಗ್‌ ಅವರ ತಂಡ ಕರಾವಳಿ ಭಾಗದಲ್ಲಿ ಅಧ್ಯಯನ ಮಾಡಲಿದೆ. ಕೊಡಗಿನಲ್ಲಿ ಪ್ರವಾಹದಿಂದ ಪ್ರಾಣ ಕಳೆದು ಕೊಂಡವರ ಕುಟುಂಬಗಳಿಗೆ ಕೇಂದ್ರದಿಂದಲೂ ನೆರವು ನೀಡು ವುದಾಗಿ ಪ್ರಧಾನಿಯವರು ಭರವಸೆ ನೀಡಿದ್ದಾರೆ. ಬರಪೀಡಿತ ಜಿಲ್ಲೆಗಳಿಗೆ 247 ಕೋಟಿ
ರೂ., ಕೊಡಗು, ಉಡುಪಿ, ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರಿಗೆ 200 ಕೋಟಿ ರೂ., ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಹಾಗೂ ಗ್ರಾಮೀಣಾ
ಭಿವೃದಿಟಛಿ ಪಂಚಾಯತ್‌ ರಾಜ್‌ ಇಲಾಖೆಯಿಂದ 200 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ದೇಶಪಾಂಡೆ ವಿವರಿಸಿದರು.


Trending videos

Back to Top