CONNECT WITH US  

ರಾಜ್ಯದಲ್ಲಿ ತೈಲ ದರ ಶೀಘ್ರ ಇಳಿಕೆ 

ಹೊಳೆನರಸೀಪುರ: ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಸುವ ಸಂಬಂಧ ಪೂರಕ ತೀರ್ಮಾನವನ್ನು ಮುಖ್ಯಮಂತ್ರಿ ಕುಮಾರಸ್ವಾಮಿ ಸದ್ಯದಲ್ಲೇ
ಪ್ರಕಟಿಸಲಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌. ಡಿ.ದೇವೇಗೌಡ ತಿಳಿಸಿದರು. ನಗರದಲ್ಲಿ ಮಂಗಳವಾರ "ನಮ್ಮೂರ ದ್ಯಾವಪ್ಪ' ಪುಸ್ತಕ ಬಿಡುಗಡೆ ಮಾಡಿದ ನಂತರ ಸುದ್ದಿಗಾರಗೊಂದಿಗೆ ಅವರು ಮಾತನಾಡಿದರು. ಪೆಟ್ರೋಲ್‌, ಡಿಸೇಲ್‌ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಿಂದ
ಶ್ರೀಸಾಮಾನ್ಯರು ಜೀವನ ನಡೆಸುವುದು ಕಷ್ಟವಾಗಿದೆ. ಈ ಅಂಶವನ್ನು ಕೇಂದ್ರ ಸರ್ಕಾರಕ್ಕೆ ಮನಮುಟ್ಟಿಸುವ ಸಲುವಾಗಿ ಸೋಮವಾರ ಭಾರತ್‌ ಬಂದ್‌ ಸಹ ನಡೆಸಲಾಗಿದೆ. ಈಗಾಗಲೆ ಕೆಲವು ರಾಜ್ಯಗಳು ಪೆಟ್ರೋಲ್‌, ಡಿಸೇಲ್‌ ಮತ್ತು ಅಡುಗೆ ಅನಿಲದ ಬೆಲೆ ಇಳಿಸುವ ನಿರ್ಧಾರ ಕೈಗೊಂಡಿವೆ. ಕರ್ನಾಟಕದಲ್ಲಿಯೂ ಕುಮಾರಸ್ವಾಮಿ ಅವರು ತೈಲ ದರ ಇಳಿಸುವ ನಿಟ್ಟಿನಲ್ಲಿ ತೆರಿಗೆ ಇಳಿಸುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು. ರೈತರ ಸಾಲ ಮನ್ನಾಕ್ಕಾಗಿ 46 ಸಾವಿರ ಕೋಟಿ ರೂ.  ಹೊಂದಿಸಿಕೊಳ್ಳುವ ದೊಡ್ಡ ಜವಾಬ್ದಾರಿ ರಾಜ್ಯಸರ್ಕಾರದ ಮೇಲಿದೆ. ಹಾಗಾಗಿ ಪೆಟ್ರೋಲ್‌, ಡೀಸೆಲ್‌ ದರ ಇಳಿಸುವ ನಿರ್ಧಾರವನ್ನು ಏಕಾಏಕಿ ಕೈಗೊಳ್ಳುವುದು ಮುಖ್ಯಮಂತ್ರಿಯವರಿಗೆ ಕಷ್ಟವಾಗಿದೆ ಎಂದರು.

ಅತಿವೃಷ್ಟಿಯಿಂದ ಹಾನಿಯಾಗಿರುವ ಪ್ರದೇಶಗಳಲ್ಲಿನ ಪರಿಹಾರ ಕಾರ್ಯ ಗಳಿಗೆ ನೆರವು ನೀಡಬೇಕೆಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಎರಡು ತಂಡಗಳು ರಾಜ್ಯಕ್ಕೆ ಆಗಮಿಸಿ, ಪರಿಶೀಲನೆ ನಡೆಸಲಿವೆ. ಬಳಿಕ, ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡಲಿದೆ.
● ಎಚ್‌.ಡಿ.ಎಚ್‌.ಡಿ.ದೇವೇಗೌಡ ಮಾಜಿ ಪ್ರಧಾನಿ


Trending videos

Back to Top