CONNECT WITH US  

1 ಪಾನ್‌ ಮೂವ್‌ ಮಾಡಿ ನೋಡಿ ; ಬಿಜೆಪಿಗೆ ಸವಾಲೆಸೆದ ಸಚಿವ ಡಿಕೆಶಿ 

ಬೆಂಗಳೂರು: ಬಿಜೆಪಿಯವರು ಒಂದು  ಪಾನ್‌ ಮೂವ್‌ ಮಾಡಿ ಆಮೇಲೆ ನೋಡಲಿ, ನಮಗೂ ರಾಜಕಾರಣ ಮಾಡಲು ಬರುತ್ತದೆ ಎನ್ನುವ ಮೂಲಕ ಸಚಿವ ಡಿ.ಕೆ.ಶಿವಕುಮಾರ್‌ ಅವರು ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ. 

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ  ನಮಗೂ ರಾಜಕಾರಣ ಮಾಡಲು ಗೊತ್ತಿದೆ. ಚೆಸ್‌ ಗೇಮ್‌ ಆಡುತ್ತೇವೆ. ಅವರು ಒಬ್ಬ ನಮ್ಮ ಶಾಸಕರನ್ನು ಮುಟ್ಟಲಿ,ನಾನು ಚೆಕ್‌ ಕೊಡುತ್ತೇನೆ ಎಂದಿದ್ದಾರೆ. 

ಇದೇ ವೇಳೆ ತನ್ನ ಸಂಪರ್ಕದಲ್ಲಿರುವ ಬಿಜೆಪಿ ಶಾಸಕರ ಹೆಸರನ್ನು ಬಹಿರಂಗ ಪಡಿಸಿ ಅವರಿಗೆ ಹಾನಿ ಮಾಡಲು ಇಷ್ಟಪಡುವುದಿಲ್ಲ ಎಂದರು. 

ಜಾರಕಿಹೊಳಿ ಸಹೋದರರ ದೂರು
ಇನ್ನೊಂದೆಡೆ ಜಾರಕಿಹೊಳಿ ಸಹೋದರರು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ಡಿಕೆಶಿ ವಿಚಾರದಲ್ಲಿ ಅಸಮಾಧಾನ ಹೊರ ಹಾಕಿದ್ದಾರೆ. 

Trending videos

Back to Top