CONNECT WITH US  

ಸಿಎಂ ವಿರುದ್ಧವೇ ದಂಗೆ ಎದ್ದ ಬಿಜೆಪಿ;ಭಾರಿ ಹೋರಾಟ ಗವರ್ನರ್‌ಗೆ ದೂರು!

ಬೆಂಗಳೂರು: ಬಿಜೆಪಿ ವಿರುದ್ದ ದಂಗೆ ಏಳಲು ಕರೆ ನೀಡುತ್ತೇನೆ ಎಂದು ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ  ಬಿಜೆಪಿ ಭಾರಿ ಹೋರಾಟ ನಡೆಸುತ್ತಿದೆ. ಶುಕ್ರವಾರ ಭಾರೀ ಪ್ರತಿಭಟನೆ ನಡೆಸಿ ತೀವ್ರ ವಾಗ್ದಾಳಿ ನಡೆಸಿದೆ. ಮಾತ್ರವಲ್ಲದೆ ರಾಜ್ಯಪಾಲ ವಜುಭಾಯಿವಾಲಾ ಅವರಿಗೆ ದೂರು ನೀಡಿದ್ದಾರೆ. 

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಮಾಜಿ ಡಿಸಿಎಂ ಆರ್‌.ಅಶೋಕ್‌ , ಸಂಸದ ಪಿ.ಸಿ.ಮೋಹನ್‌, ಅರವಿಂದ ಲಿಂಬಾವಳಿ, ಸುರೇಶ್‌ ಕುಮಾರ್‌ ಸೇರಿ ಹಲವರು ರಾಜ್ಯಭವನಕ್ಕೆ ತೆರಳಿದ ನಿಯೋಗದಲ್ಲಿದ್ದರು. ಸಂವಿಧಾನದ ಅತ್ಯುನ್ನತ ಸ್ಥಾನಕ್ಕೆ ಅವಮಾನ ಎಸಗಿದ್ದಾರೆ. ಅವರು ಹುದ್ದೆಯಲ್ಲಿ ಮುಂದುವರಿಯುವ ಯಾವ ಅರ್ಹತೆಯನ್ನು  ಹೊಂದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬೆಳಗ್ಗೆ ಡಿಜಿಪಿ ನೀಲಮಣಿ ರಾಜು ಅವರನ್ನು ಭೇಟಿಯಾಗಿದ್ದ  ಬಿಜೆಪಿ ನಿಯೋಗ ಸಿಎಂ ಅವರ ವಿರುದ್ಧ ದೂರು ನೀಡಿತ್ತು. ಬಿಜೆಪಿ ರಾಜ್ಯಾಧ್ಯಂತ ಬೀದಿಗಿಳಿದು ಪ್ರತಿಭಟನೆ ನಡೆಸಿತ್ತು. 


Trending videos

Back to Top