ಲಂಬಾಣಿಗರ ಜೀವನದ ವಿವರ ರಾಜ್ಯ ದಾಖಲೆ ಭಂಡಾರಕ್ಕೆ

Team Udayavani, Oct 8, 2018, 6:20 AM IST

lambani-community.jpg

ಹಾವೇರಿ: ಬಹುವೈಶಿಷ್ಟ್ಯತೆಗಳಿಂದ ಕೂಡಿದ ಲಂಬಾಣಿ ಸಮುದಾಯದ ಭಾಷೆ, ಸಾಹಿತ್ಯ, ಸಂಪ್ರದಾಯ, ಆಚರಣೆ ಸೇರಿ ಸಮುದಾಯದ ಜೀವನದ ಸಮಗ್ರ ವಿವರ ದಾಖಲೀಕರಿಸುವ ಕಾರ್ಯ ನಡೆದಿದ್ದು, ಶೀಘ್ರವೇ ಇದು ರಾಜ್ಯದ ದಾಖಲೆ ಭಂಡಾರ ಸೇರಲಿದೆ.

ಲಂಬಾಣಿಗರ ಸಮಗ್ರ ಆಚರಣೆ, ಸಂಪ್ರದಾಯ, ಹಬ್ಬದಾಚರಣೆ, ವೇಷಭೂಷಣ, ಮೌಖೀಕ ಸಾಹಿತ್ಯವನ್ನು ಅ ಧಿಕೃತವಾಗಿ ದಾಖಲೀಕರಿಸುವ ಕಾರ್ಯ ಈವರೆಗೆ ಆಗಿರಲಿಲ್ಲ. ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು ಲಂಬಾಣಿ ಸಮುದಾಯದ ಸಮಗ್ರ ವಿವರವನ್ನು ಆಡಿಯೋ, ವಿಡಿಯೋ ಹಾಗೂ ಲೇಖೀ ಮೂಲಕ ದಾಖಲಿಸಲು ಮುಂದಾಗಿದೆ. ದಾಖಲೀಕರಣ ಕಾರ್ಯವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ನಿರ್ವಹಿಸುತ್ತಿದೆ.

ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮವು “ಲಂಬಾಣಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಬಹುಮುಖೀ ದಾಖಲೀಕರಣ ಯೋಜನೆ’ಯಡಿ ಮೂರು ಕೋಟಿ ರೂ.ವೆಚ್ಚ ಮಾಡುತ್ತಿದೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಎರಡು ವರ್ಷಗಳಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕ್ಷೇತ್ರ ಪ್ರತಿನಿಧಿ ಗಳು, ವಿಶೇಷ ತಂಡಗಳ ಮೂಲಕ ಲಂಬಾಣಿಗರ ಸಮಗ್ರ ಅಧ್ಯಯನ ನಡೆಸಿದೆ. ಈಗ ಮಾಹಿತಿ ದಾಖಲಿಸಿ ಅವುಗಳನ್ನು ಪ್ರತ್ಯೇಕ ಕೃತಿಗಳಾಗಿ ಸಿದ್ಧಪಡಿಸುವ ಕಾರ್ಯ ನಡೆದಿದೆ.

ಏನೆಲ್ಲ ದಾಖಲೆಯಾಗುತ್ತಿದೆ?:
ಲಂಬಾಣಿ ಗಾದೆಗಳು (ಕನ್ನಡ ಅರ್ಥಸಹಿತ), ಲಂಬಾಣಿಗರ ಒಗಟುಗಳು, ಭೀಮಾಸತಿ ಖಂಡ ಕಾವ್ಯ, ಹೂನಾಸತಿ ಖಂಡಕಾವ್ಯ, ಸಿತಾಸತಿ ಖಂಡಕಾವ್ಯ, ಸೇವಾಲಾಲರ ಮಹಾಕಾವ್ಯ, ಸೇವಾಲಾಲ್‌ ಬಯಲಾಟ, ಸಾಮಕಮಾತಾ ಬಯಲಾಟ ಕೃತಿಗಳು ಪ್ರಕಟಣೆಗೆ ಸಿದ್ಧಗೊಂಡಿವೆ.

ರಥನ ಗೀತೆಗಳು, ಸೇವಾಲಾಲರ ಕುರಿತ ಹಾಡುಗಳು, ಲಂಬಾಣಿ ಮಹಿಳೆಯರ ನೃತ್ಯದ ಹಾಡುಗಳು, ಲಂಬಾಣಿಗರ ವಿಶಿಷ್ಟ ಹೋಳಿ ಹಾಡುಗಳು, ಪ್ರಕೃತಿ ಕುರಿತ ಹಾಡುಗಳು, ಮೋಜಿನ ಹಾಗೂ ಇತರ ಹಾಡುಗಳು, ಲಂಬಾಣಿ ಕಥೆಗಳು ಪ್ರಕಟಣೆಗೆ ಸಿದ್ಧಗೊಳ್ಳುತ್ತಿವೆ. ಇವುಗಳ ಜತೆಗೆ ಲಂಬಾಣಿಗರ ವಿಶಿಷ್ಟ ದೀಪಾವಳಿ ಆಚರಣೆ, ಶಿತಳಾ (ಶಿತ್ಲಾ) ಹಬ್ಬ ಆಚರಣೆಗಳ ಸಾಕ್ಷ Âಚಿತ್ರಗಳು ಈಗಾಗಲೇ ಸಿದ್ಧಗೊಂಡಿವೆ. ಲಂಬಾಣಿಗರ ಶೈಲಿಯಲ್ಲಿನ ರಾಮಾಯಣ ಹಾಗೂ ಮಹಾಭಾರತ, ಲಂಬಾಣಿಗರ ವಿಶಿಷ್ಯ ತೀಜ್‌ ಆಚರಣೆಗಳ ಸಾಕ್ಷ ಚಿತ್ರಗಳು ಸಿದ್ಧಗೊಳ್ಳುತ್ತಿವೆ. ಲಂಬಾಣಿ ಸಮುದಾಯದ ಸಮಗ್ರ ಜನಪದ ಸಾಹಿತ್ಯ ಹಾಗೂ ಬಹುಮುಖೀ ದಾಖಲೀಕರಣ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇದು ಮುಂದೆ ರಾಜ್ಯದಲ್ಲಿ ಲಂಬಾಣಿಗರ ಜೀವನದ ಮೇಲೆ ಬೆಳಕು ಚೆಲ್ಲುವ ಅ ಧಿಕೃತ ದಾಖಲೆಯಾಗಿ ಮಾರ್ಪಾಡಾಗಲಿದೆ.

ಲಂಬಾಣಿ ಜನಪದ ಸಾಹಿತ್ಯ ಸಂಗ್ರಹ ಹಾಗೂ ಬಹುಮುಖೀ ದಾಖಲೀಕರಣ ಕಾರ್ಯ ಅಂತಿಮ ಹಂತದಲ್ಲಿದೆ. ಇನ್ನು ಎರಡೂ¾ರು ತಿಂಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಸಮಗ್ರ ಸಂಪುಟಕ್ಕೆ ಬದಲಾಗಿ ವೈಶಿಷ್ಟÂತೆಗೆ ತಕ್ಕಂತೆ ಪ್ರತ್ಯೇಕ ಕೃತಿಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಇದು ಮುಂದೆ ಲಂಬಾಣಿಗರ ಸಮಗ್ರ ಜೀವನದ ಅ ಧಿಕೃತ ದಾಖಲೆಯಾಗಲಿದೆ.
– ಡಿ.ಬಿ.ನಾಯಕ, ಕುಲಪತಿಗಳು, ಕಜಾವಿವಿ.

– ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.