ಶಾಲಾ ಸವಾಲು, ಪರಿಹಾರ ಅಧ್ಯಯನಕ್ಕೆ ವೇದಿಕೆ


Team Udayavani, Oct 8, 2018, 6:15 AM IST

ban08101806medn.jpg

ಬೆಂಗಳೂರು: ಕಳಪೆ ಸಾಧನೆಯ ಸರ್ಕಾರಿ ಶಾಲೆಗಳ ಪಟ್ಟಿ ಸಿದ್ಧಪಡಿಸಿ ಅಂತಹ ಶಾಲೆಗಳ ಸುಧಾರಣೆಗೆ ಕ್ರಿಯಾ ಯೋಜನೆ ಸಿœಪಡಿಸುವ ಕಾರ್ಯಕ್ರಮ ಕೇಂದ್ರ ಸರ್ಕಾರ ರೂಪಿಸಿದ್ದು, ರಾಜ್ಯದಲ್ಲೂ ಅನುಷ್ಠಾನಕ್ಕೆ ಸಿದ್ಧತೆ ನಡೆದಿದೆ.

ತಾಲೂಕು ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುವ ಶಾಲೆಗಳ ಜತೆಗೆ ಕಳಪೆ ಸಾಧನೆಯ ಶಾಲೆಗಳ ಪಟ್ಟಿ ಸಿದ್ಧಪಡಿಸಲಿದ್ದು  ಆ ಶಾಲೆಗಳ ಸುಧಾರಣೆಗೆ ಅಧ್ಯಯನ ನಡೆಸಿ ರೂಪು-ರೇಷೆ ರಚಿಸುವುದು ಇದರ ಉದ್ದೇಶವಾಗಿದೆ.

ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸವಾಲುಗಳು ಹಾಗೂ ಅವುಗಳಿಗೆ ಕಂಡುಕೊಂಡ ಪರಿಹಾರದ ಯಶಸ್ಸು ಆಧರಿಸಿ ಶಾಲಾ ನಾಯಕತ್ವ ಗುರುತಿಸಲು ಕೇಂದ್ರ ಸರ್ಕಾರ ಹೊಸ ಕಾರ್ಯಕ್ರಮ ಸಿದ್ಧಪಡಿಸಿದೆ.ಶಾಲಾ ಹಂತ, ಮೇಲಿcಚಾರಕರ ಹಂತ, ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ  ಈ ಕಾರ್ಯಕ್ರಮ ನಡೆಯಲಿದ್ದು ಶಾಲೆಯೊಂದರ ಸಾಧನೆ ಅದು ಇನ್ನೊಂದು ಶಾಲೆಗೆ ಪ್ರೇರಣೆ, ಶಾಲೆಯ ಸಮಗ್ರ ಅಭಿವೃದ್ಧಿ, ಶೈಕ್ಷಣಿಕ ಪ್ರಗತಿ ಎಲ್ಲದರ ಮೌಲ್ಯಮಾಪನವೂ ಈ ಕಾರ್ಯಕ್ರಮದಡಿ ಆಗಲಿದೆ.

ಶಾಲಾ ನಾಯಕತ್ವದ ಬಲವರ್ಧನೆಗೆ ರೂಪಿಸಿರುವ ಈ ಕಾರ್ಯಯೋಜನೆಯಲ್ಲಿ ಶಾಲಾ ಮುಖ್ಯಶಿಕ್ಷಕರು, ಆಸಕ್ತ ಸಂಶೋಧಕರು, ಶಿಕ್ಷಣ ತಜ್ಞರು, ಆಡಳಿತಗಾರರು ಅಥವಾ ಸರ್ಕಾರೇತರ ಸಂಘಟನೆಗಳು ಭಾಗವಹಿಸಬಹುದಾಗಿದೆ.

ಕಳಪೆ ಸಾಧನೆಯ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯಮಿತ ಭೇಟಿ ನೀಡಿ ಸುಧಾರಣೆಗೆ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಅದೇ ವ್ಯಾಪ್ತಿಯಲ್ಲಿ  ಅತ್ಯುತ್ತಮ ಕಾರ್ಯನಿರ್ವಹಣೆಯ ಶಾಲೆಗಳ ಮುಖ್ಯಸ್ಥರ ಕಾರ್ಯಕ್ಷಮತೆ, ಕಾರ್ಯನಿರ್ವಹಣೆ ಸೇರಿದಂತೆ ಉತ್ತಮ ಅಂಶಗಳನ್ನು ಕ್ರೋಢಿಕರಿಸಬೇಕು. ಅಂತಹ ಎಲ್ಲ ಅಧ್ಯಯನ ವರದಿಗಳ  ಬಗ್ಗೆ ವಾರಕ್ಕೊಮ್ಮೆ ಸಿಆರ್‌ಪಿ, ಬಿಆರ್‌ಪಿ, ಇಸಿಒ, ಬಿಆರ್‌ಸಿ ಮೊದಲಾದ ಅಧಿಕಾರಿಗಳೊಂದಿಗೆ ಚರ್ಚಿಸಬೇಕು. ಶಾಲಾ ನಾಯಕತ್ವದ ಪರಿಕಲ್ಪನೆ, ಮಹತ್ವ ಮತ್ತು ನಡವಳಿಕೆಗಳನ್ನು ಗಮನಿಸಿ ತಾಲೂಕಿಗೆ ಕನಿಷ್ಠu ಎರಡು ಅಧ್ಯಯನ ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರಿಗೆ ನೀಡಬೇಕು ಶಾಲೆ ಎದುರಿಸುತ್ತಿರುವ ಸವಾಲು ಹಾಗೂ ಅವುಗಳ ಪರಿಹಾರಕ್ಕೆ ಕಂಡುಕೊಂಡ ಮಾರ್ಗಗಳ ಸಮೇತ ಶಾಲಾ ಇತಿಹಾಸವನ್ನು ಸಂಕ್ಷಪ್ತವಾಗಿ ಬರೆದು  ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಬೇಕು. ಅಂತಹ ಶಾಲೆಗೆ ಭೇಟಿ ನೀಡಿದ ವಿದ್ವಾಂಸರು ಅಥವಾ ಪರಿಣಿತರು ಶಾಲಾ ನಾಯಕತ್ವದ ಪ್ರಾಮುಖ್ಯತೆಗೆ ಸಂಬಂಧಿಸಿದ ದಾಖಲೆ ಸಂಗ್ರಹಿಸಬೇಕು.  ತರಗತಿ ಕೊಠಡಿಯಲ್ಲಿ ಶಿಕ್ಷಕರ ಬೋಧನೆ, ಮಕ್ಕಳ ಕಲಿಕೆ ಪ್ರಕ್ರಿಯೆ, ಸಮುದಾಯದ ಪಾಲ್ಗೊಳ್ಳುವಿಕೆ, ಶಾಲೆಯ ನಿರ್ವಹಣೆ, ಶಾಲೆಯ ಒಳಗೆ ಮತ್ತು ಹೊರಗೆ ಅಂತರ್‌ ವ್ಯಕ್ತಿಗಳ ಸಂಬಂಧ, ಸಂಶೋಧನೆ, ತಂಡದ  ಕೆಲಸ, ಶಾಲೆಯ ಅಭಿವೃದ್ಧಿ ತಂತ್ರಾಂಶ ಬಳಕೆ ಇತ್ಯಾದಿ ಅಂಶಗಳು ಮೇಲ್ವಿಚಾರಕರ ಅಧ್ಯಯನದಲ್ಲಿ ಒಳಗೊಂಡಿರುತ್ತದೆ.

ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು, ಪ್ರಾಂಶುಪಾಲರು ಶಾಲೆಗಳಿಗೆ ಆದ್ಯತೆ ಮೇರೆಗೆ ಭೇಟಿ ನೀಡಿ, ಗುಣಮಟ್ಟ ಸುಧಾರಣೆಗೆ ಮಾರ್ಗದರ್ಶನ ನೀಡಬೇಕು. ಜಿಲ್ಲಾ ಮಟ್ಟದ ಅತ್ಯುತ್ತವಾಗಿ ಕಾರ್ಯನಿರ್ವಹಿಸುವ ಶಿಕ್ಷಕರು, ಶಾಲೆಗಳನ್ನು ಗುರುತಿಸಿ ಶಾಲಾ ನಾಯಕತ್ವ ಪರಿಚಯಿಸುವ ಹೊಸ ಆಯಾಮಗಳನ್ನು ಅವರಿಂದ ಪಡೆಯುವುದು. ಜಿಲ್ಲೆಗೆ ಕನಿಷ್ಠ ಒಂದು ಅತ್ಯುತ್ತಮ ಸರ್ಕಾರಿ ಶಾಲೆಯ ಅಧ್ಯಯನ ವರದಿ ರಾಜ್ಯದ ಕೇಂದ್ರ ಕಚೇರಿಗೆ ಸಲ್ಲಿಸಬೇಕು.

ವಿಭಿನ್ನ ಪ್ರಯೋಗ :
ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸುವ ಜತೆಗೆ ಮಕ್ಕಳು ಉಲ್ಲಾಸದಾಯಕವಾಗಿ ಕಲಿಯಲು ಪ್ರೇರಣೆ ನೀಡುವ ಗುಣಮಟ್ಟದ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ಈ ರೀತಿಯ ವಿಭಿನ್ನ ಪ್ರಯೋಗ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಪ್ರತಿ ಶೈಕ್ಷಣಿಕ ವಲಯದ ಅತ್ಯುತ್ತಮ, ಎರಡು ಶಾಲೆಗಳ ಯಶಸ್ವಿ ಕಥನಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧ್ಯಯನ ರೂಪದಲ್ಲಿ ಸಿದ್ಧಪಡಿಸಿ ಜಿಲ್ಲಾ ಉಪನಿರ್ದೇಶಕರಿಗೆ ಸಲ್ಲಿಸಬೇಕು. ಜಿಲ್ಲಾ ಉಪನಿರ್ದೇಶಕರು ಅದನ್ನು ರಾಜ್ಯಕ್ಕೆ ಸಲ್ಲಿಸುತ್ತಾರೆ. ನಂತರ ಅದನ್ನು ಇ-ಪೋರ್ಟಲ್‌ಗೆ ಅಪ್‌ಲೋಡ್‌ಮಾಡಲಾಗುತ್ತದೆ. ರಾಷ್ಟ್ರಮಟ್ಟದ ಶಾಲಾ ನಾಯಕತ್ವ ಸಮಾವೇಶದಲ್ಲಿ ಯಶೋಗಾಥೆಯನ್ನು ಹಂಚಿಕೊಳ್ಳಾಗುತ್ತದೆ ಎಂದು ಸರ್ವ ಶಿಕ್ಷಾ ಅಭಿಯಾನದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಅತ್ಯುತ್ತಮ ಶಾಲೆಯ ಯಶಸ್ವಿನ ಕಥನ(ಕೇಸ್‌ಸ್ಟಡೀ) ಸಿದ್ಧಪಡಿಸುವವರೇ ಅದಕ್ಕೆ ಶಿರ್ಷೀಕೆ ನೀಡಬೇಕು. ಬರಹಗಾರರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಹಾಗೂ ಇ-ಮೇಲ್‌ ಕೂಡ ನಮೂದಿಸಬೇಕು. ಶಾಲೆಯ ಸಂಕ್ಷಿಪ್ತ ಚಿತ್ರಣ, ಶಾಲೆಯ ಪ್ರಸ್ತುತ ಸನ್ನಿವೇಶ, ಸೌಲಭ್ಯ ಮತ್ತು ಕೊರತೆ, ಸವಾಲು, ಸಂದಿಗ್ಧತೆ, ಕ್ರಿಯಾಯೋಜನೆ, ಕಾರ್ಯತಂತ್ರ, ಫ‌ಲಗಳು, ಕಲಿಕೆಯಲ್ಲಿ ಬದಲಾವಣೆ ತರಲು ತೆಗೆದುಕೊಂಡ ಕ್ರಮ, ಶಾಲಾ ನಾಯಕತ್ವದ ಪಾತ್ರ, ಬದಲಾವಣೆಯ ಸಿದ್ಧಾಂತ, ಬದಲಾವಣೆಗೆ ಅನುಸರಿಸಿದ ತಂತ್ರ ಮತ್ತು ಮಂತ್ರ ಕೇಸ್‌ ಸ್ಟಡೀ ಒಳಗೊಂಡಿರಬೇಕು.

– ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

Politics: ಸುಮಲತಾ – ನಾವು ಶಾಶ್ವತ  ಶತ್ರುಗಳಲ್ಲ: ಕುಮಾರಸ್ವಾಮಿ

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

Lok Sabha Election: ಬಿಜೆಪಿ-ಜೆಡಿಎಸ್‌ “ಜಂಟಿ ಸಮರಾಭ್ಯಾಸ’

congress

Congress; ಕೋಲಾರಕ್ಕೆ ಗೌತಮ್‌ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Jammu-Srinagar National Highway; A taxi rolled into a gorge

Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು

7-brijesh

Brijesh Chowta; ಎ.4: ಅಧಿಕೃತ ನಾಮಪತ್ರ ಸಲ್ಲಿಕೆ; ಕ್ಯಾ| ಚೌಟರ ಆಸ್ತಿ ಇಷ್ಟು !

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.