CONNECT WITH US  

ರಾಮನಗರ:ಕೈ ಕಾರ್ಯಕರ್ತರಲ್ಲಿ ತಳಮಳ; ಬಂಡಾಯದ ಮುನ್ಸೂಚನೆ 

ಬಹಿರಂಗ ಅಸಮಾಧಾನ ಹೊರ ಹಾಕಿದ ಸಿ.ಎಂ.ಲಿಂಗಪ್ಪ 

ರಾಮನಗರ: ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಬೆಂಬಲ ನೀಡುವ ವಿಚಾರದಲ್ಲಿ  ರಾಮನಗರ ಕಾಂಗ್ರೆಸ್‌ನಲ್ಲಿ  ಅಸಮಾಧಾನ ಭುಗಿಲೆದ್ದಿದ್ದು  ಕೈ ಕಾರ್ಯಕರ್ತರು ಉಗ್ರ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದ್ದಾರೆ. 

ಗುರುವಾರ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ರಾಮನಗರದ ಕಾಂಗ್ರೆಸ್‌ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಕಚೇರಿಗೆ ನುಗ್ಗಿದ ಕೆಲವರು ಪೀಠೊಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. 

ಇಕ್‌ಬಾಲ್‌ ಹುಸೇನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಬೇಕು ಎಂದು ಪ್ರತಿಭಟನೆ ನಡೆಸಿದ್ದು, ಮೈತ್ರಿ ಸರ್ಕಾರ ಮತ್ತು ಕಾಂಗ್ರೆಸ್‌ ನಾಯಕರ ಧೋರಣೆಯ ವಿರುದ್ಧವೂ ಘೋಷಣೆಗಳನ್ನು ಕೂಗಿದ್ದಾರೆ. 

ಸಿ.ಎಂ.ಲಿಂಗಪ್ಪ ಅಸಮಾಧಾನ 
ಕಾಂಗ್ರೆಸ್‌ ವಿಧಾನಪರಿಷತ್‌ ಸದಸ್ಯ  ಸಿ.ಎಂ.ಲಿಂಗಪ್ಪ ಅವರು ತೀವ್ರ ಅಸಮಾಧಾನ ಹೊರ ಹಾಕಿದ್ದು , ಡಿ.ಕೆ.ಶಿವಕುಮಾರ್‌ ಅವರ ವಿರುದ್ದವೂ ಧ್ವನಿ ಎತ್ತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಶಿವಕುಮಾರ್‌ ಅವರು ಹುಲಿಯಂತಿದ್ದರು. ಈಗ ಸಂದರ್ಭದ ಶಿಶುವಾಗಿದ್ದಾರೆ ಎಂದರು. 

ಎಲ್ಲಿಯಾದರು ನನ್ನ ಪುತ್ರ ಚಂದ್ರಶೇಖರ್‌ ಬಿಜೆಪಿಯಿಂದ ಕಣಕ್ಕಿಳಿದರೆ ನಾನೇ ಆತನ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಲಿಂಗಪ್ಪ ಹೇಳಿದರು. 

ನವೆಂಬರ್‌ 3 ರಂದು ರಾಮನಗರ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. 

Trending videos

Back to Top