CONNECT WITH US  

ದಸರಾ ಮಕ್ಕಳ ವೇದಿಕೆ:ಹೆಸರು ಹೇಳದ್ದಕ್ಕೆ ಮೂವರು ಸಚಿವರು ಸಿಡಿಮಿಡಿ 

ವೇದಿಕೆಯಿಂದ ಇಳಿದ ಮೂವರು ಸಚಿವರು...!

ಮೈಸೂರು: ಒಂದೆಡೆ ಮೈತ್ರಿ ಸರ್ಕಾರದ ಸಚಿವರ ನಡುವಿನ ಭಿನ್ನಮತ ಬಹಿರಂಗಗೊಂಡಿದ್ದರೆ ಇನ್ನೊಂದೆಡೆ ದಸರಾದ ಕಾರ್ಯಕ್ರಮವೊಂದರ ವೇದಿಕೆಯಲ್ಲಿ ಹೆಸರು ಹೇಳಲಿಲ್ಲ ಎಂಬ ಕಾರಣಕ್ಕೆ ಮೂವರು ಸಚಿವರು ವೇದಿಕೆಯಿಂದ ಇಳಿದ ಘಟನೆ ಶುಕ್ರವಾರ ನಡೆದಿದೆ. 

ಮಕ್ಕಳ ದಸರಾ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದ್ದು, ನಿಗದಿಯಂತೆ ಸಚಿವರಾಗಿದ್ದ ಎನ್‌.ಮಹೇಶ್‌ ಅವರು ಕಾರ್ಯಕ್ರಮ ಉದ್ಘಾಟನೆ ಮಾಡಬೇಕಿತ್ತು. ಆದರೆ ಅವರು ಹುದ್ದೆಗೆ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ  ಸಚಿವ ಜಿ.ಟಿ.ದೇವೇಗೌಡ ಅವರು ಉದ್ಘಾಟಿಸಿದರು. 

ವೇದಿಕೆಯಲ್ಲಿ ಸಚಿವರಾದ ಶಿವಶಂಕರ್‌ ರೆಡ್ಡಿ, ಸಾ.ರಾ.ಮಹೇಶ್‌ ಅವರೂ ಉಪಸ್ಥಿತರಿದ್ದರು. ಮೂವರ ಹೆಸರನ್ನು ವೇದಿಕೆಯಲ್ಲಿ ಹೇಳದ ಕಾರಣ ಸಿಡಿಮಿಡಿಕೊಂಡ ಸಚಿವ ತ್ರಯರು ವೇದಿಕೆಯಿಂದ ಕೆಳಗಿಳಿದಿದ್ದಾರೆ. ಬಳಿಕ ಸ್ಥಳದಲ್ಲಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಸಚಿವರು ಹೊರ ನಡೆದ ಕಾರಣ ಅಧಿಕಾರಿಗಳು ಮತ್ತು ಸಮಾರಂಭಕ್ಕೆ ಆಗಮಿಸಿದ್ದವರು ಒಂದು ಕ್ಷಣ ಗೊಂದಲಕ್ಕೊಳಗಾದರು. 


Trending videos

Back to Top