ಮಹಿಳಾ ಪೊಲೀಸರಿಗೆ ಪ್ಯಾಂಟ್‌, ಶರ್ಟ್‌ ಕಡ್ಡಾಯ

Team Udayavani, Oct 21, 2018, 6:55 AM IST

neelamani-n.jpg

ಬೆಂಗಳೂರು:ರಾಜ್ಯದ ಮಹಿಳಾ ಪೊಲೀಸರಿಗೆ ಇನ್ಮುಂದೆ ಪ್ಯಾಂಟ್‌ ಶರ್ಟ್‌ ಕಡ್ಡಾಯ.ಅಷ್ಟೇ ಅಲ್ಲ, ಹಣೆಗೆ ಚಿಕ್ಕದಾದ ಬಿಂದಿ, ಕೂದಲಿಗೆ ಕಪ್ಪು ಬಣ್ಣದ ಹೇರ್‌ಪಿನ್‌, ಕೈಗೆ  ಸಣ್ಣ  ಗಾತ್ರದ ಬಳೆ ಹಾಗೂ ಕಿವಿಯೋಲೆ ಧರಿಸಬೇಕು. ತಲೆಗೆ ಹೂ ಮುಡಿಯುವಂತಿಲ್ಲ.ರಾಜ್ಯ ಮಹಿಳಾ ಪೊಲೀಸರಿಗೆ ಡ್ರೆಸ್‌ಕೋಡ್‌ ಕಡ್ಡಾಯ ಮಾಡಿರುವ ಪೊಲೀಸ್‌ ಇಲಾಖೆ. ಇಂತದ್ದೇ ಸೈಜಿನ ಬಳೆ, ಕಿವಿಯೋಲೆ ಧರಿಸುವಂತೆಯೂ ಆದೇಶ ಹೊರಡಿಸಿದೆ.  ಪೊಲೀಸ್‌ ಪೇದೆ ಹಾಗೂ ಅಧಿಕಾರಿಗಳಿಗೆ ಪ್ರತ್ಯೇಕ ನಿಯಮ ರೂಪಿಸಲಾಗಿದೆ.

ಕರ್ತವ್ಯ ನಿರತ ಮಹಿಳಾ ಪೊಲೀಸ್‌ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಸಮವಸ್ತ್ರ ಹಾಗೂ ಕೇಶವಿನ್ಯಾಸ, ಬಳೆ ಇನ್ನಿತರೆ ಆಭರಣಗಳನ್ನು ಧರಿಸುವ ಸಂಬಂಧ ಏಕರೂಪ ನಿಯಮಗಳನ್ನು ಕಡ್ಡಾಯಗೊಳಿಸಿ  ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ  ನೀಲಮಣಿ ಎನ್‌. ರಾಜು ಸುತ್ತೋಲೆ ಹೊರಡಿಸಿದ್ದಾರೆ.ಸೀರೆ ಧರಿಸಿ ಮಹಿಳಾ ಸಿಬ್ಬಂದಿ ಕರ್ತವ್ಯ ನಿರ್ವಹಣೆ ಹಾಗೂ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯುವ ಸಂಧರ್ಭಗಳಲ್ಲಿ ಉಂಟಾಗುತ್ತಿದ್ದ ತೊಂದರೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಏಕರೂಪದ ಡ್ರೆಸ್‌ ಕೋಡ್‌ ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳಂತೆ ಕರ್ತವ್ಯ ನಿರತ ಮಹಿಳಾ ಪೊಲೀಸ್‌ ಅಧಿಕಾರಿಗಳು,   ಶರ್ಟ್‌ ಹಾಗು ಪ್ಯಾಂಟ್‌ ಧರಿಸಬೇಕು  (ಇನ್‌ಶರ್ಟ್‌). ಜತೆಗೆ, ಬ್ರೌನ್‌ ಆಕ್ಸ್‌ಫ‌ರ್ಡ್‌ ಶೂ,  ಬ್ರೌನ್‌ ಕ್ಲಸ್ಟೆಡ್‌ ಲೆದರ್‌ ಶೂ, ಪೀಕ್‌ ಕ್ಯಾಪ್‌, ಬ್ಲೂ ಬ್ಯಾರೆಟ್‌ ಕ್ಯಾಪ್‌ ವಿತ್‌ ಬ್ಯಾಡ್ಜ್ಗಳನ್ನು ಧರಿಸಬೇಕು. ಮಹಿಳಾ ಪೇದೆಗಳು ಬ್ಲಾಕ್‌ ಅÂಕ್ಸ್‌ಫ‌ರ್ಡ್‌ ಶೂ, ಬ್ಲಾಕ್‌ ಕ್ಲಸ್ಟೆಡ್‌ ಲೆದರ್‌ ಬೆಲ್ಟ್, ಹಾಗೂ ಖಾಕಿ ಬ್ಯಾರೆಟ್‌ ಕ್ಯಾಪ್‌ಗ್ಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೂರು ತಿಂಗಳ ಮೇಲ್ಪಟ್ಟ ಗರ್ಭಿಣಿ ಅಧಿಕಾರಿಗಳು ಹಾಗೂ ಪೇದೆಗಳು ವೈದ್ಯರ  ಪ್ರಮಾಣಪತ್ರ ಸಲ್ಲಿಸಿ ಹೆರಿಗೆ ರಜೆಗೆ ತೆರಳುವವರೆಗೆ ಇನ್‌ಶರ್ಟ್‌ ಧರಿಸದೇ ಇರಲು ಅವಕಾಶ ನೀಡಲಾಗಿದೆ.  ಹೆರಿಗೆ ರಜೆ ಪೂರ್ಣಗೊಂಡ ಬಳಿಕ ಡ್ರೆಸ್‌ಕೋಡ್‌ ಪಾಲಿಸಬೇಕು ಎಂದು ಸೂಚಿಸಲಾಗಿದೆ.

ಹಣೆಯ ಬಿಂದಿ ಚಿಕ್ಕದಿರಲಿ!
ಮಹಿಳಾ ಪೊಲೀಸ್‌ ಅಧಿಕಾರಿಗಳು ಮತ್ತು ಪೇದೆಗಳು ಕಪ್ಪು ಬಣ್ಣದ ಹೇರ್‌ ಪಿನ್‌, ಸಣ್ಣ ಗಾತ್ರದ ಲೋಹದ ಬಳೆಗಳನ್ನೇ ಧರಿಸಬೇಕು. ಕಿವಿಯೋಲೆ ಮತ್ತು ಹಣೆಬಿಂದಿಯನ್ನು ಧರಿಸುವಂತಿದ್ದಲ್ಲಿ ಚಿಕ್ಕ ಮಾದರಿ(ಸ್ಮಾಲ್‌ ಸ್ಟಡ್‌)ಯ ಒಂದು ಜೊತೆ ಓಲೆಯನ್ನು ಧರಿಸಬಹುದು.ತಲೆಗೂದಲು ಹರಡದಂತೆ ಒಟ್ಟುಗೂಡಿಸಿ ತುರುಬು ಕಟ್ಟಿಕೊಂಡು ಕಪ್ಪು ಬಣ್ಣದ ನೆಟೆಡ್‌ ಬ್ಯಾಂಡ್‌ನ್ನು ಸುತ್ತಬೇಕು. ಕಪ್ಪು ಬಣ್ಣದ  ಹೇರ್‌ಪಿನ್‌ ಅಥವಾ ಹೇರ್‌ ಬ್ಯಾಂಡ್‌ಅನ್ನು ಮಾತ್ರ ಧರಿಸಬೇಕು. ಇತರೆ ಬಣ್ಣದ ಹೇರ್‌ಪಿನ್‌, ಹೇರ್‌ ಬ್ಯಾಂಡ್‌, ಹೂ ಮತ್ತು ಇತರ ಪರಿಕರಗಳನ್ನು ಧರಿಸುವಂತಿಲ್ಲ. ಕೂದಲಿಗೆ ಬಣ್ಣ(ಡೈ)ಹಚ್ಚುವಂತಿದ್ದಲ್ಲಿ ಕಪ್ಪು ಬಣ್ಣವನ್ನು ಮಾತ್ರ ಬಳಸಬೇಕು. ಬೇರೆ ಬಣ್ಣ(ಡೈ) ಹಚ್ಚುವಂತಿಲ್ಲ ಎಂದು ನಿರ್ದೇಶಿಸಲಾಗಿದೆ.

ಟಾಪ್ ನ್ಯೂಸ್

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

ಲೋಕಸಭಾ ಕಣದಲ್ಲಿ ನಾರಿಶಕ್ತಿ ಪ್ರದರ್ಶನ: ಕಾಂಗ್ರೆಸ್‌ನಿಂದ 6, ಬಿಜೆಪಿಯಿಂದ 2 ಮಹಿಳೆಯರು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.