ಇನ್ನೊಂದು ಕಣ್ಣಿಗೂ ಗಾಯವಾಗದಂತೆ ನೋಡಿಕೊಂಡರು

Team Udayavani, Oct 21, 2018, 6:20 AM IST

ban21.jpg

ಹಾವೇರಿ: ಗದುಗಿನ ತೋಂಟದಾರ್ಯ ಮಠದ ಡಾ| ಸಿದ್ದಲಿಂಗ ಶ್ರೀಗಳಿಗೂ, ಹಾವೇರಿಗೂ ಅವಿನಾಭಾವ ಸಂಬಂಧವಿತ್ತು. ನಗರದಲ್ಲಿರುವ ಶ್ರೀ ಸಿಂದಗಿ ಮಠದ ಉಸ್ತುವಾರಿ ವಹಿಸಿದ್ದ ಶ್ರೀಗಳು, ಹಾವೇರಿಗೆ ನಿರಂತರ ಭೇಟಿ ನೀಡುತ್ತಿದ್ದರು.

ತೋಂಟದ ಶ್ರೀಗಳ ದೀಕ್ಷಾ ಗುರು ಶಾಂತವೀರ ಪಟ್ಟಾಧ್ಯಕ್ಷರು. ತೋಂಟದ ಸಿದ್ದಲಿಂಗ ಶ್ರೀಗಳು ಹಾವೇರಿ ಸಿಂದಗಿ ಮಠದಲ್ಲಿಯೇ ಇದ್ದು ಧಾರ್ಮಿಕ ಪಾಠಶಾಲೆಯಲ್ಲಿ ಅಭ್ಯಾಸ ಮಾಡಿದವರು. ಶಾಂತವೀರ ಪಟ್ಟಾಧ್ಯಕ್ಷರ ಮಾರ್ಗದರ್ಶನದಲ್ಲಿ ಸಾಧನೆಗೈದವರಲ್ಲಿ ತೋಂಟದ ಶ್ರೀಗಳು ಪ್ರಮುಖರು. ಗದುಗಿನ ಮಠ ಹಾಗೂ ಹಾವೇರಿ ಸಿಂದಗಿ ಮಠ ಎರಡೂ ನನ್ನೆರಡು ಕಣ್ಣುಗಳಿದ್ದಂತೆ ಎಂದು ಅನೇಕ ಕಡೆಗಳಲ್ಲಿ ಹೇಳುತ್ತಿದ್ದ ಶ್ರೀಗಳು, ಅಕ್ಷರಶಃ ಎರಡೂ ಮಠಗಳ ಚಟುವಟಿಕೆ, ಅಭಿವೃದ್ಧಿಯತ್ತ ಕಣ್ಣಿಟ್ಟು ಕಾಪಾಡಿ ಭಕ್ತರ ಪ್ರೀತಿಗೆ ಪಾತ್ರರಾದವರು.

ಅಂತಃಕರಣದ ಶ್ರೀಗಳು:
ಶಾಂತವೀರ ಪಟ್ಟಾಧ್ಯಕ್ಷರು ಅನಾರೋಗ್ಯದಲ್ಲಿದ್ದಾಗ ತೋಂಟದ ಶ್ರೀಗಳು ದಿನ ಬಿಟ್ಟು ದಿನ ಬಂದು ಪೂಜ್ಯರ ಯೋಗಕ್ಷೇಮ ವಿಚಾರಿಸುತ್ತಾ ಅವರ ಸ್ಥಿತಿಗಾಗಿ ಮಮ್ಮಲ ಮರುಗಿ ಕಣ್ಣೀರು ತುಂಬಿಕೊಂಡು ಮಠಕ್ಕೆ ಮರಳುತ್ತಿದ್ದರು. ತೋಂಟದ ಶ್ರೀಗಳು ಸಿಂದಗಿಮಠದ ಜವಾಬ್ದಾರಿ ಹೊತ್ತ ಮೇಲೆ ಸಿಂದಗಿ ಪಾಠಶಾಲೆ, ಆಯುರ್ವೇದ ಕಾಲೇಜ್‌ ಹಾಗೂ ಮಠದ ಅಭಿವೃದ್ಧಿ ವೇಗ ಹೆಚ್ಚಿಸಿಕೊಂಡಿತು. 10 ಲಕ್ಷ ರೂ.ಗಳಲ್ಲಿ ಶಾಂತವೀರ ಶಿವಾನುಭವ ಮಂಟಪ, 15 ಲಕ್ಷ ರೂ.ಗಳಲ್ಲಿ ತರಗತಿ ಕೊಠಡಿ, 25 ಲಕ್ಷ ರೂ.ಗಳಲ್ಲಿ “ಘೇಗುರು ಕುಮಾರೇಶ್ವರ ಪ್ರಸಾದ ನಿಲಯ’, 140 ವಿದ್ಯಾರ್ಥಿಗಳ ವಾಸ್ತವ್ಯಕ್ಕಾಗಿ 18 ಲಕ್ಷ ರೂ.ಗಳಲ್ಲಿ “ಪ್ರಾಶಂತಧಾಮ’, ಶಿವಬಸವ ನಗರದ ಹೆದ್ದಾರಿಯಲ್ಲಿ 5 ಲಕ್ಷ ರೂ.ಗಳಲ್ಲಿ ಮಹಾದ್ವಾರ, 7 ಲಕ್ಷ ರೂ.ಗಳಲ್ಲಿ “ಶಾಂತ ಸನ್ನಿ ’ ಗ್ರಂಥಾಲಯ, ಪಟ್ಟಾಧ್ಯಕ್ಷರ ಗದ್ದುಗೆ ಮೇಲೆ 8 ಲಕ್ಷ ರೂ.ಗಳಲ್ಲಿ ಮನಮೋಹಕ ಗೋಪುರ, ಮಠದ ಮುಂದೆ ಭವ್ಯ ಶಿಲಾನಿರ್ಮಿತ ಮುಖದ್ವಾರ ನಿರ್ಮಾಣ ಹೀಗೆ ಹತ್ತು ಹಲವು ಅಭಿವೃದ್ಧಿ ಚಟುವಟಿಕೆಗಳು ನಡೆದವು.

ಪ್ರತಿವರ್ಷ ಸಿಂದಗಿ ಮಠದಲ್ಲಿ ತೋಂಟದ ಶ್ರೀಗಳ ನೇತೃತ್ವದಲ್ಲಿ ಶಾಂತವೀರ ಪಟ್ಟಾಧ್ಯಕ್ಷ ಪುಣ್ಯ ಸ್ಮರಣೋತ್ಸವ, ಪ್ರವಚನ, ಸಾಹಿತ್ಯ, ಕಲೆ, ಜನಪದ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತಾ ಬಂದಿವೆ. ಕಾರ್ಯಕ್ರಮಗಳಿಗೆ ಹೊಸ ಪ್ರತಿಭೆ, ವಿಶಿಷ್ಟ ಕಲೆ, ಕಲಾವಿದರನ್ನು ಕರೆಸಿ, ಅವರನ್ನು ಮಠದ ಮೂಲಕ ಪರಿಚಯಿಸುತ್ತಿದ್ದರು. ಸಾವಿರಾರು ಬಡ, ಅನಾಥ ಮಕ್ಕಳಿಗೆ ಅನ್ನ, ಅಕ್ಷರ, ಆಶ್ರಯ ನೀಡಿ ಅವರನ್ನು ಸ್ವಾಮೀಜಿ, ಶಾಸ್ತ್ರೀಗಳನ್ನಾಗಿ ಮಾಡಿ ಅವರ ವ್ಯಕ್ತಿತ್ವಕ್ಕೊಂದು ಘನತೆ ಒದಗಿಸುತ್ತಿರುವ ಮಠಕ್ಕೆ ತೋಂಟದ ಶ್ರೀಗಳು ಅಕ್ಷರಶ: ಕಳಸಪ್ರಾಯರಾಗಿದ್ದರು.

– ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

CET ಗೊಂದಲ ಪರಿಹಾರಕ್ಕೆ ಎ. 27 ಗಡುವು: ಎಬಿವಿಪಿ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.