ಪರಭಾಷಿಗರಿಂದ ಕನ್ನಡದ ಕೆಲಸ


Team Udayavani, Oct 30, 2018, 11:52 AM IST

parabhashi.jpg

ಬೆಂಗಳೂರು: ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸ ಕೇವಲ ಕನ್ನಡಿಗರಿಂದ ಆಗುತ್ತಿದೆಯೇ? ಇಲ್ಲ, ಕನ್ನಡೇತರರೂ ಕನ್ನಡದ ಕಾವಲುಗಾರರಾಗಿ ದಶಕಗಳಿಂದ ಶ್ರಮಿಸುತ್ತಿದ್ದಾರೆ. ಕಾವೇರಿ ವಿವಾದ, ಗಡಿ ಸಮಸ್ಯೆ ಎದುರಾದಾಗ ಕನ್ನಡದ ದನಿಯಾಗುವ ಪರಭಾಷಿಗರು, ಸೌಹಾರ್ದತೆ ಸಾರುತ್ತಿದ್ದಾರೆ.

ಹೊರ ರಾಜ್ಯಗಳಿಂದ ಇಲ್ಲಿಗೆ ಬಂದು ಬದುಕು ಕಟ್ಟುಕೊಂಡವರು ಭಾಷಾ ಸೌಹಾರ್ದ ಸಮಿತಿ, ಸಂಘ, ಕೂಟಗಳನ್ನೂ ಕಟ್ಟಿಕೊಂಡು ಕನ್ನಡ ಸಾಹಿತ್ಯ ಅಧ್ಯಯನ, ಕವಿ-ಸಾಹಿತಿಗಳ ಸ್ಮರಣೆ, ಉತ್ತಮ ಕೃತಿಗಳ ಪರಸ್ಪರ ಅನುವಾದ ಸೇರಿದಂತೆ ಸಂಸ್ಕೃತಿ ವಿನಿಮಯ ಮಾಡಿಕೊಳ್ಳುವ ಕೆಲಸವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಅವುಗಳಲ್ಲಿ ತೆಲುಗು ವಿಜ್ಞಾನ ಸಮಿತಿ, ಕರ್ನಾಟಕ ತೆಲುಗು ಅಕಾಡೆಮಿ, ಕನ್ನಡ ತಮಿಳು ಸಂಘ, ಕೈಕಾಳಿ ಸಂಘ, ಈಸ್ಟರ್ನ್ ಕಲ್ಚರ್‌ ಅಸೋಸಿಯೇಷನ್‌, ಕರ್ನಾಟಕ ಕೇರಳ ಸೌಹಾರ್ದ ಸಂಘಗಳು ಪ್ರಮುಖವಾಗಿವೆ.

ತೆಲುಗು ವಿಜ್ಞಾನ ಸಮಿತಿಯು ಕಳೆದ ಆರು ದಶಕಗಳಿಂದ ಕನ್ನಡ ತೆಲುಗು ಸೌಹಾರ್ದತಾ ಕಾರ್ಯದಲ್ಲಿ ತೊಡಗಿದೆ. 2,500ಕ್ಕೂ ಹೆಚ್ಚು ನೋಂದಾಯಿತ ಸದಸ್ಯರನ್ನು ಹೊಂದಿರುವ ಸಮಿತಿ, ನಾಡಹಬ್ಬಗಳ ಆಚರಣೆ, ಕನ್ನಡ ನಾಟಕೋತ್ಸವ, ವಿಚಾರ ಸಂಕಿರಣ, ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ತೆಲುಗು ಭಾಷಿಕರಿಗೆ ಕನ್ನಡದ ಕಂಪು ಪಸರಿಸುತ್ತಿದೆ.

ಜತೆಗೆ ಕನ್ನಡದ ಪ್ರತಿಷ್ಠಿತ ಪುಸ್ತಕಗಳನ್ನು ತೆಲುಗು ಭಾಷೆಗೆ, ಅಲ್ಲಿನ ಶ್ರೇಷ್ಠ ಕವಿಗಳ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದ ಮಾಡಲಾಗುತ್ತಿದೆ. ಸಮಿತಿಯಿಂದ ತಿರುಮಲ ವಿದ್ಯಾನಿಕೇತನ ಶಾಲೆ ಆರಂಭಿಸಿದ್ದು, ಇಲ್ಲಿ ಕಡ್ಡಾಯ ಕನ್ನಡ ಜಾರಿಗೊಳಿಸಲಾಗಿದೆ. ಅಲ್ಲದೆ, ಕರ್ನಾಟಕದಿಂದ ಒಬ್ಬರನ್ನು ಆಂಧ್ರಪ್ರದೇಶದಿಂದ ಒಬ್ಬ ಸಾಧಕರನ್ನು ಆಯ್ಕೆ ಮಾಡಿ ಪ್ರತಿವರ್ಷ “ಶ್ರೀ ಕೃಷ್ಣದೇವರಾಯ’ ಪ್ರಶಸ್ತಿ ನೀಡುತ್ತಿದೆ.

“ನಾವೂ ಕನ್ನಡಿಗರೇ. ನಾಡು-ನಡಿಯ ವಿಚಾರ ಬಂದಾಗ ನಾವು ಕರ್ನಾಟಕದ ಪರ ನಿಲ್ಲುತ್ತೇವೆ’ ಎನ್ನುತ್ತಾರೆ ಸಮಿತಿ ಅಧ್ಯಕ್ಷ ಡಾ.ರಾಧಾಕೃಷ್ಣರಾಜು. ಇದರಂತೆಯೇ ತಮಿಳು ಸಂಘವು ಕನ್ನಡ ಶಾಲೆ, ಗ್ರಂಥಾಲಯ ನಡೆಸುತ್ತಿದೆ. ಕನ್ನಡ-ತಮಿಳು ಪುಸ್ತಕ ಅನುವಾದ, ಸಾಂಸ್ಕೃತಿಕ ಚಟುವಟಿಕೆಗಳನ್ನೂ ನಡೆಸುತ್ತಿವೆ.

ಕನ್ನಡದ‌ ಗಡಿಯಂಕರು: ಕಾಸರಗೋಡು ಕೇರಳದ ಪಾಲಾಗಿದ್ದರೂ, ಅಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಮರೆಯಾಗಿಲ್ಲ. ಇಂದಿಗೂ ಬಹುತೇಕ ಕನ್ನಡಿಗರು ಕೇರಳ ನಾಗರಿಕರಾಗಿ ಅಲ್ಲಿದ್ದಾರೆ. ಅವರಲ್ಲಿನ ಕನ್ನಡವನ್ನು ಜೀವಂತವಾಗಿಸುವ ಹಾಗೂ ಕನ್ನಡ ಜಾನಪದ ಸಂಸ್ಕೃತಿ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಗಡಿನಾಡು ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ.

ಹತ್ತು ಮಂದಿ ಸ್ಥಳೀಯರು ಸೇರಿಕೊಂಡು ಗಡಿನಾಡು ಸಾಹಿತ್ಯ ಸಂಸ್ಕೃತಿ ಅಕಾಡೆಮಿ ಕಟ್ಟಿಕೊಂಡಿದ್ದು, ಗಡಿಭಾಗದ ಮಲಯಾಳಂ ಹಾಗೂ ಕನ್ನಡ ಶಾಲೆಗಳಿಗೆ ಪ್ರತಿ ತಿಂಗಳಿಗೊಮ್ಮೆ ತೆರಳಿ ಜಾನಪದ ಪಯಣ, ಚಿನ್ನರ ಕಲರವ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸುತ್ತಿದೆ. ಅಲ್ಲದೆ, ಗಡಿನಾಡು ಸಾಹಿತ್ಯ ಸಂಸ್ಕೃತಿ ಪಯಣ ಎಂಬ ಕಾರ್ಯಕ್ರಮದ ಮೂಲಕ ಕಾಸರಗೋಡು ಸುತ್ತಮುತ್ತಲ ಪ್ರದೇಶದಲ್ಲಿ ಸಾಹಿತಿಗಳನ್ನು ಕೂಡಿಸಿಕೊಂಡು ಕಾರ್ಯಕ್ರಮ ನಡೆಸುತ್ತಿದೆ ಎನ್ನುತ್ತಾರೆ ಅಕಾಡೆಮಿ ಮುಖ್ಯಸ್ಥ ಎ.ಆರ್‌.ಸುಬ್ಬಯ್ಯ ಕಟ್ಟೆ.

ಈಗಾಗಲೇ ಕಾಸರಗೋಡು ಕನ್ನಡ ಸಾಹಿತಿಗಳ 20ಕ್ಕೂ ಹೆಚ್ಚು ಪುಸ್ತಕಗಳನ್ನು ಹೊರತರಲಾಗಿದೆ. ಮುಂದಿನ ದಿನಗಳಲ್ಲಿ ಕಾಸರಗೋಡಿನ ಹಿನ್ನೆಲೆ ಹೊಂದಿದ 600ಕ್ಕೂ ಹೆಚ್ಚು ಸಾಹಿತಿಗಳನ್ನು ಗುರುತಿಸಿದ್ದು, ಮೂರು ಹಂತಗಳಲ್ಲಿ ಪುಸ್ತಕಗಳನ್ನು ಹೊರತರುತ್ತಿದೆ. ಮೊದಲ ಹಂತದ ಪುಸ್ತಕವು ರಾಜ್ಯೋತ್ಸವದ ಅಂಗವಾಗಿ ನ.14ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ ಎಂದು ಅವರು ತಿಳಿಸಿದರು.

ಕರ್ನಾಟಕ ಸಾಹಿತ್ಯ ಮಂದಿರ: ಕಳೆದ ಎಂಟು ದಶಕಗಳಿಂದ ಹೈದರಾಬಾದ್‌ ನಗರದಲ್ಲಿ ಕನ್ನಡ ಸೇವೆಯಲ್ಲಿ ಕರ್ನಾಟಕ ಸಾಹಿತ್ಯ ಮಂದಿರ ನಿರತವಾಗಿದೆ. ಅಲ್ಲಿ ಕರ್ನಾಟಕದಿಂದ ಹೋದವರಿಗೆ ಹಾಗೂ ಆಸಕ್ತರಿಗಾಗಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಚಟುವಟಿಕೆ ಹಮ್ಮಿಕೊಳ್ಳಲಾಗುತ್ತದೆ. ಕನ್ನಡದ ಉಚಿತ ತರಗತಿಗಳನ್ನು ನಡೆಸಿ, ಪರಿಚಯ ಎಂಬ ಹೆಸರಿನ ಕನ್ನಡ ಮಾಸ ಪತ್ರಿಕೆ ಸಹ ತರುತ್ತಿದೆ.

ಇಲ್ಲಿನ ಸದಸ್ಯರು ನಾಟಕತಂಡ ಮಾಡಿಕೊಂಡು ಟಿ.ಪಿ.ಕೈಲಾಸಂ, ಶ್ರೀರಂಗ, ಬೀಚಿ, ಕಂಬಾರರ ನಾಟಕಗಳನ್ನು ಹೈದರಾಬಾದ್‌ ಸುತ್ತಮುತ್ತ ಪ್ರದರ್ಶಿಸುತ್ತಿದ್ದಾರೆ. ಜತೆಗೆ ದಸರಾ ಸಮಯದಲ್ಲಿ “ನಾಡಹಬ್ಬ’ ಕಾರ್ಯಕ್ರಮ ಹಮ್ಮಿಕೊಂಡು ಕನ್ನಡನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದ ಪರಂಪರೆಯನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳಿಗೆ ವೇದಿಕೆ ನಿರ್ಮಿಸಿಕೊಡಲಾಗುತ್ತಿದೆ ಎನ್ನುತ್ತಾರೆ ಮಂದಿರ ಅಧ್ಯಕ್ಷ ವಿಠuಲ ಜೋಶಿ. 

ಎಚ್‌ಎಎಲ್‌ ಕನ್ನಡ ಸಂಘ: ಕನ್ನಡಿಗರಿಗೆ ಉದ್ಯೋಗ, ಕನ್ನಡ ಅನುಷ್ಠಾನ, ಕನ್ನಡ ನಾಡ ಕಲೆ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಎಚ್‌ಎಲ್‌ ಕೇಂದ್ರೀಯ ಕನ್ನಡ ಸಂಘ ಕಳೆದ 16 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಇತರೆ ಭಾಷಿಕರಿಗೆ ಕನ್ನಡ ಕಲಿಸಲು ದಿನ ಬಿಟ್ಟು ದಿನ ಕನ್ನಡ ತರಗತಿ ನಡೆಸಲಾಗುತ್ತದೆ. ವಾರ್ಷಿಕ 400ಕ್ಕೂ ಹೆಚ್ಚು ಜನರಿಗೆ ಕನ್ನಡ ಕಲಿಸಲಾಗುತ್ತಿದೆ.

ಜತೆಗೆ ಪ್ರತಿ ತಿಂಗಳು ಸಾಹಿತಿ, ಕವಿಗಳನ್ನು ಕರೆಸಿ ಮನದ ಮಾತು, ಮನೆ ಮನೆ ಕನ್ನಡ ವಿಶೇಷ ಕಾರ್ಯಕ್ರಮ ಮಾಡುತ್ತಾರೆ. ಪ್ರತಿ ವರ್ಷ ಅ.31ರಂದು ಪಂಜಿನ ಮೆರವಣಿಗೆ ಮಾಡಿ, ಸಂಶೋಧಕ ಡಾ.ಚಿದಾನಂದಮೂರ್ತಿ ಅವರ ಗರಿಮೆ-ಹಿರಿಮೆ ಪುಸ್ತಕದ ಎರಡು ಸಾವಿರ ಪುಸ್ತಕ ಹಂಚುತ್ತೇವೆ ಎಂದು ಸಂಘದ ಅಧ್ಯಕ್ಷ ರಾಮಸ್ವಾಮಿ ತಿಳಿಸುತ್ತಾರೆ. ಇದೇ ರೀತಿ ಬಿಇಎಲ್‌, ಎಚ್‌ಎಂಟಿ, ಮೈಕೋ ಸಂಸ್ಥೆಗಳಲ್ಲಿಯೂ ಕನ್ನಡ ಪರ ಕಾರ್ಯಚಟುವಟಿಕೆಗಳು ಸಾಗುತ್ತಿವೆ.

ಸೌಹಾರ್ದತೆಯೇ ಭಾಷೆಯ ಬೆಳವಣಿಗೆಗೆ ಮೂಲಕಾರಣ. ಇಲ್ಲಿರುವ ಅನ್ಯಭಾಷಿಕರು ಕನ್ನಡಿಗರೇ ಆಗಿ ಕೆಲಸ ಮಾಡುತ್ತಿದ್ದಾರೆ. ಪ್ರಶಸ್ತಿಗಳು, ಸಾಹಿತ್ಯ ಬರಹಗಳನ್ನು ವಿನಿಮಯ ಮಾಡಿಕೊಳ್ಳುವುದು ಸೇರಿದಂತೆ ಸೌಹಾರ್ದತೆ ಮೆರೆಯುತ್ತಿದ್ದಾರೆ.
-ಪ್ರೊ.ಎಸ್‌.ಜಿ.ಸಿದ್ದರಾಮಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು

* ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.