CONNECT WITH US  

ರೆಡ್ಡಿಯಿಂದ ಅಂತರ ಕಾಯ್ದುಕೊಳ್ಳಲು ಸೂಚನೆ

ಬೆಂಗಳೂರು: ಬಹುಕೋಟಿ ಮೊತ್ತದ ಡೀಲ್‌ ಪ್ರಕರಣದ ಆರೋಪ ಹೊತ್ತಿರುವ ಜನಾರ್ದನರೆಡ್ಡಿ ಜತೆ ಅಂತರ ಕಾಯ್ದುಕೊಳ್ಳುವಂತೆ ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ನಾಯಕರು ಸೂಚಿಸಿದ್ದಾರೆ. ಅಷ್ಟೇ ಅಲ್ಲದೆ ಶಾಸಕ ಶ್ರೀರಾಮುಲು ಸಹ ಜನಾರ್ದನರೆಡ್ಡಿ ವಿಚಾರದಲ್ಲಿ ತೀರಾ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಬೇಡ ಎಂದು ತಾಕೀತು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ. 

ಜನಾರ್ದನರೆಡ್ಡಿ ಬಹಿರಂಗವಾಗಿ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರಿಂದ ವಿಧಾನಸಭೆ ಚುನಾವಣೆಯಲ್ಲೂ ಹಿನ್ನಡೆಯಾಯಿತು. ಲೋಕಸಭೆ ಉಪ ಚುನಾವಣೆ ಸಂದರ್ಭದಲ್ಲೂ ಸಿದ್ದರಾಮಯ್ಯ ಅವರ ಪುತ್ರನ ಕುರಿತ ಹೇಳಿಕೆಯಿಂದ ಪಕ್ಷಕ್ಕೆ ಮುಜುಗರ ಉಂಟಾಗಿ ಕ್ಷಮೆ ಕೇಳುವ ಸ್ಥಿತಿ ನಿರ್ಮಾಣವಾಯಿತು. ಈಗ ಅವರ ವಿರುದ್ಧ ಮತ್ತೂಂದು ಗಂಭೀರ ಆರೋಪ ಕೇಳಿ ಬಂದಿದೆ. ಪಕ್ಷದ ನಾಯಕರು ಅವರ ಪರ ನಿಂತರೆ ಬೇರೆ ರೀತಿಯ ಸಂದೇಶ ರವಾನೆಯಾಗಬಹುದೆಂದು ರಾಜ್ಯದ ನಾಯಕರೊಬ್ಬರು ಪಕ್ಷದ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಮಾಹಿತಿ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ನಾಯಕರಿಗೆ ಅಂತರ ಕಾಯ್ದುಕೊಳ್ಳುವಂತೆ ಸೂಚನೆ ನೀಡಲಾಗಿದೆ. ಯಾರೂ ಸದ್ಯಕ್ಕೆ ಜನಾರ್ದನರೆಡ್ಡಿ ಪರ ಮಾತನಾಡುವುದು ಬೇಡ. ಪ್ರಕರಣ ತೀವ್ರತೆ ಹಾಗೂ ಮುಂದಿನ ವಿದ್ಯಮಾನ ನೋಡಿ ನಂತರ ಪ್ರತಿಕ್ರಿಯೆ ನೀಡಿ. ತಕ್ಷಣಕ್ಕೆ ಯಾರೂ ಬಹಿರಂಗವಾಗಿ ಏನೂ ಮಾತನಾಡಬಾರದು ಎಂದು ನಿರ್ದೇಶನ
ನೀಡಿದ್ದಾರೆ ಎಂದು ಹೇಳಲಾಗಿದೆ.

ಜನಾರ್ದನರೆಡ್ಡಿ ವಿರುದ್ಧದ ಆರೋಪ ಪ್ರಕರಣದ ಬಗ್ಗೆ ನನಗೆ ಮಾಹಿತಿಯಿಲ್ಲ. ವಂಚನೆ ಮಾಡಿದ ಕಂಪನಿ ವಿರುದಟಛಿದ ತನಿಖೆ ನಡೆಯುತ್ತಿದೆ. ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ. ತನಿಖೆಯಿಂದ ಸತ್ಯಾಂಶ ಹೊರ ಬರಲಿದೆ.
● ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

Trending videos

Back to Top