ಅಪರೂಪದ ಬಾಂಬೆ ಬ್ಲಿಡ್ ಮ್ಯಾನ್ಮಾರ್ಗೆ ರವಾನೆ
Team Udayavani, Dec 3, 2018, 6:30 AM IST
ದಾವಣಗೆರೆ: ಮ್ಯಾನ್ಮಾರ್(ಬರ್ಮಾ) ಯಾಂಗೋನ್ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 34 ವರ್ಷದ ಮಹಿಳೆಯೊಬ್ಬರ ಹೃದಯ ಶಸ್ತ್ರಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿದ್ದ 1 ಯುನಿಟ್ ಬಾಂಬೆ ಬ್ಲಿಡ್ ರಕ್ತವನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆ ರವಾನೆ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.
ಅತ್ಯಂತ ಅಪರೂಪವಾಗಿ ಸಿಗುವ ಈ ಬಾಂಬೆ ಬ್ಲಿಡ್ ನಗರದ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ 2 ಯೂನಿಟ್ ಶೇಖರಿಸಲಾಗಿತ್ತು. ಬಾಂಬೆ ರಕ್ತವನ್ನು ಗುರುತಿಸುವ ಉಪಕರಣವೂ ಆಸ್ಪತ್ರೆಯಲ್ಲಿರುವುದರಿಂದ ಬಾಂಬೆ ಬ್ಲಿಡ್ ಸಂಗ್ರಹಿಸಲು ಸಾಧ್ಯವಾಗಿತ್ತು.
ಜೊತೆಗೆ ಸರ್ಕಾರದ ಕಂಟ್ರೋಲರ್ ಆಫ್ ಇಂಡಿಯಾ ವೆಬ್ಸೈಟ್ನಲ್ಲಿ 2 ಯೂನಿಟ್ ಬಾಂಬೆ ಬ್ಲಿಡ್ ಇರುವ ಮಾಹಿತಿ ದಾಖಲು ಮಾಡಲಾಗಿತ್ತು. ದಾವಣಗೆರೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಯಲ್ಲಿ ಬಾಂಬೆ ಬ್ಲಿಡ್ ಇರುವುದನ್ನು ಬೆಂಗಳೂರಿನ ಸಂಕಲ್ಪ ಇಂಡಿಯಾ ಫೌಂಡೇಶನ್ ನೇತೃತ್ವದಲ್ಲಿ ವೆಬ್ಸೈಟ್ ಮೂಲಕ ಪತ್ತೆ ಹಚ್ಚಲಾಗಿತ್ತು. ಮ್ಯಾನ್ಮಾರ್ ಆಸ್ಪತ್ರೆ ಕೋರಿಕೆ ಮೇರೆಗೆ 2.8 ಡಿಗ್ರಿ ತಾಪಮಾನದಲ್ಲಿ ಸಂಗ್ರಹಿಸಿ ಕೋರಿಯರ್ ಮೂಲಕ ಒಂದು ಯೂನಿಟ್ ಬಾಂಬೆ ಬ್ಲಿಡ್ ಕಳಿಸಿಕೊಡುವ ಮೂಲಕ ಎಸ್.ಎಸ್. ಹೈಟೆಕ್ ಆಸ್ಪತ್ರೆ ಸಿಬ್ಬಂದಿ ಮಹಿಳೆಯೊಬ್ಬರ ಜೀವ ಉಳಿಸುವಲ್ಲಿ ಸಹಕಾರಿಯಾಗಿದೆ. ಇಂತಹ ಅಪರೂಪದ ಬಾಂಬೆ ಬ್ಲಿಡ್ ಹೊಂದಿರುವ ಇಬ್ಬರು ದಾವಣಗೆರೆ, ಚಿತ್ರದುರ್ಗದಲ್ಲಿ ಇರುವುದೇ ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ