CONNECT WITH US  

ಬೆಳ್ಳಂದೂರು ಕೆರೆ:ರಾಜ್ಯ ಸರ್ಕಾರಕ್ಕೆ 50,BBMPಗೆ 25 ಕೋಟಿ ರೂ ದಂಡ!

ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮೇಲೆ ಚಾಟಿ ಬೀಸಿದ ಎನ್‌ಜಿಟಿ 

ಬೆಂಗಳೂರು: ನಿರಂತರ ಬೆಂಕಿ ಮತ್ತು ಭಾರಿ ಪ್ರಮಾಣದ ನೊರೆಯಿಂದ ಸುದ್ದಿಯಾಗಿದ್ದ ಬೆಳ್ಳಂದೂರು ಕೆರೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಕಾರಣಕ್ಕಾಗಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಚಾಟಿ ಬೀಸಿದ್ದು, ಬರೋಬ್ಬರಿ 75 ಕೋಟಿ ರೂಪಾಯಿ ದಂಡ ವಿಧಿಸಿದೆ. 

ಕಳೆದ 1 ವರ್ಷಗಳಿಂದ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ.ಎ.ಕೆ.ಗೋಯಲ್‌ ನೇತೃತ್ವ ಪೀಠ ಈ ಮಹತ್ವದ ತೀರ್ಪು ನೀಡಿದೆ.

 ಕೆರೆಗಳ ದುಸ್ಥಿತಿಗೆ ಅಧಿಕಾರಿಗಳು ಕಾರಣವಾಗಿದ್ದಾರೆ. ಜವಾಬ್ಧಾರಿ ನಿರ್ವಹಿಸದಿದ್ದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ.ಅವರ ಕೆರಿಯರ್‌ ರೆಕಾಡ್‌ರನಲ್ಲಿ ಬರೆದಿಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ನಿರ್ಲಕ್ಷ್ಯವಹಿಸಿದ್ದಕ್ಕಾಗಿ ರಾಜ್ಯ ಸರ್ಕಾರಕ್ಕೆ 50 ಕೋಟಿ ರೂಪಾಯಿ ಮತ್ತು ಬಿಬಿಎಂಪಿಗೆ 25 ಕೋಟಿ ರೂಪಾಯಿ ದಂಡ ವಿಧಿಸಿದೆ. ಈ ದಂಡದ ಹಣವನ್ನು ಮಾಲಿನ್ಯ ನಿಯಂತ್ರಣ ಮಂಡಳಿಗೆ ಕಟ್ಟಬೇಕು ಎಂದು ಸೂಚನೆ ನೀಡಿದೆ. 

ಅಗರ ವರ್ತೂರು ಕೆರೆಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದೆ.ಕೆರೆಗಳ ರಕ್ಷಣೆ ಕಾರ್ಯ ಆಗುತ್ತಿಲ್ಲ ಎಂದು ಎನ್‌ಜಿಟಿ ಕಿಡಿ ಕಾರಿದೆ. 

ಕೆರೆಗಳ ರಕ್ಷಣೆಗೆ 500 ಕೋಟಿ ರೂಪಾಯಿ ಹಣ ಮೀಸಲಿಡಬೇಕು.ಕೆರೆ ಒತ್ತುವರಿ ಮತ್ತು ರಾಜಕಾಲುವೆ ಒತ್ತುವರಿಯನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದೆ.


Trending videos

Back to Top