CONNECT WITH US  

ಸರ್ಜಾಪುರ ಮುಖ್ಯ ರಸ್ತೆ ಗ್ಯಾಸ್‌ ಪೈಪ್‌ಲೈನ್‌ ಲೀಕ್‌;ಸಂಚಾರ ಸ್ಥಗಿತ

ಸಾವಿರಾರು ಮಂದಿಯ ಪರದಾಟ 

ಬೆಂಗಳೂರು: ಸರ್ಜಾಪುರ ಮುಖ್ಯರಸ್ತೆಯಲ್ಲಿ  ಶುಕ್ರವಾರ ಡ್ರೈನೇಜ್‌ ಕಾಮಗಾರಿ ನಡೆಯುತ್ತಿದ್ದ ವೇಳೆ ಪೈಪ್‌ಲೈನ್‌ಗೆ ಹಾನಿಯಗಿ ಗ್ಯಾಸ್‌ ಸೋರಿಕೆಯಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. 

ಸ್ಥಳಕ್ಕೆ ಬಿಬಿಎಂಪಿ, ಜಿಎಐಎಲ್‌ ಸಿಬಂದಿಗಳು ದೌಡಾಯಿಸಿ ಲೀಕೇಜ್‌ ತಡೆಗಟ್ಟಲು ಕ್ರಮ ಕೈಗೊಂಡಿದ್ದಾರೆ. 

ಸ್ಥಳದಲ್ಲಿ ವಾಹನ ಸಂಚಾರಕ್ಕೆ ತಡೆ ಹಾಕಿದ ಪರಿಣಾಮ ಕಿಲೋ ಮೀಟರ್‌ಗಟ್ಟಲೆ ಟ್ರಾಫಿಕ್‌ ಜಾಮ್‌ ಉಂಟಾಗಿದೆ. 

ಟ್ರಾಫಿಕ್‌ ಪೊಲೀಸರು ವಾಹನ ಸವಾರರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ. 

Trending videos

Back to Top