ಅಂಡಮಾನ್ನಲ್ಲಿ ಅಡಗಿರುವ ಕಂಪ್ಲಿ ಶಾಸಕ ಗಣೇಶ
Team Udayavani, Feb 11, 2019, 12:35 AM IST
ವಿಜಯಪುರ: ಶಾಸಕ ಆನಂದ ಸಿಂಗ್ ಮೇಲೆ ಹಲ್ಲೆ ಮಾಡಿ ತಲೆಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ ಅಂಡಮಾನ್- ನಿಕೋಬಾರ್ ದ್ವೀಪ ಸಮೂಹ ದಲ್ಲಿ ಅಡಗಿದ್ದಾರೆ. ಅವರಿಗೆ ಬಿಜೆಪಿ ನಾಯಕರು ರಕ್ಷಣೆ ನೀಡಿದ್ದಾರೆಂದು ಗೃಹ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ರಕ್ಷಣೆ ನೀಡಿದ ನಾಯಕರ ಹೆಸರು ಬಹಿರಂಗ ಮಾಡುವುದಿಲ್ಲ. ಶಾಸಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದನಕ್ಕೆ ಬಂದಾಗ ಪೊಲೀಸರು ಶಾಸಕರನ್ನು ಬಂಧಿಸಿಯೇ ಬಂಧಿಸುತ್ತಾರೆ ಎಂದು ಹೇಳಿದ್ದಾರೆ.