ಪಂಚಿಂಗ್‌ ಬ್ಯಾಗ್‌ ಸಿಎಂ: HDK ವಿರುದ್ಧ  ಪ್ರಧಾನಿ  ಮೋದಿ ಕಟು ಟೀಕೆ


Team Udayavani, Feb 11, 2019, 12:30 AM IST

100.jpg

ಹುಬ್ಬಳ್ಳಿ: ಕರ್ನಾಟಕದ ಸಮ್ಮಿಶ್ರ ಸರಕಾರಕ್ಕೆ ಮುಖ್ಯಸ್ಥರು (ಇನ್‌ಚಾರ್ಜ್‌) ಯಾರು ಎಂಬುದನ್ನು ಬ್ರಹ್ಮನೇ ನಿರ್ಧರಿಸಬೇಕಿದೆ. ಕುರ್ಚಿ ಉಳಿಸಿಕೊಳ್ಳುವುದೇ ಸಿಎಂಗೆ ದೊಡ್ಡ ಸಾಹಸ. ಇಂತಹ ದುರ್ಬಲ ಮಾದರಿಯನ್ನು ದೇಶಕ್ಕೆ ಅನ್ವಯಿಸುವ ಯತ್ನ ನಡೆದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಾಘಟಬಂಧನ್‌ ವಿರುದ್ಧ ವಾಗ್ಧಾಳಿ ನಡೆಸಿದರು.

ಇಲ್ಲಿನ ಗಬ್ಬೂರು ಬೈಪಾಸ್‌ ಬಳಿಯ ಉದ್ದೇಶಿತ ಕೆಎಲ್‌ಇ ವೈದ್ಯಕೀಯ ಕಾಲೇಜು ಜಾಗದಲ್ಲಿ ಬಿಜೆಪಿ ಆಯೋಜಿಸಿದ್ದ ಲೋಕಸಭಾ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡುವ ಸಮಾವೇಶದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಪಾಲುದಾರ ಪಕ್ಷ ಕಾಂಗ್ರೆಸ್‌ ಮುಖ್ಯಮಂತ್ರಿಗೆ ಧಮಕಿ ಹಾಕುತ್ತಿದೆ. ಇನ್ನೊಂದು ಕಡೆ ಮುಖ್ಯಮಂತ್ರಿ ಸದಾ ಅಳು ತ್ತಿರುತ್ತಾರೆ, ಜನ ನಗುತ್ತಿದ್ದಾರೆ. ಇಂತಹ ದುರ್ಬಲ ಸಮ್ಮಿಶ್ರ ಸರಕಾರದಲ್ಲಿ ನಡೆಯುತ್ತಿರುವ ನಾಟಕವನ್ನು ಇಡೀ ದೇಶ ನೋಡುತ್ತಿದೆ. ಸಾಲ ಮನ್ನಾ ಹೆಸರಲ್ಲಿ ಅನ್ನದಾತರಿಗೆ ಮೋಸ ಮಾಡಲಾಗುತ್ತಿದೆ ಎಂದರು.
ದೊಡ್ಡ ನಾಯಕರ “ಪಂಚಿಂಗ್‌ ಬ್ಯಾಗ್‌’ ಆಗಿರುವ ಸಿಎಂಗೆ ಅಧಿಕಾರ ಉಳಿಸಿಕೊಳ್ಳುವುದೇ ಕೆಲಸವಾಗಿದೆ ಎಂದು ಗೇಲಿ ಮಾಡಿದರು.

ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭ ದಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಎಷ್ಟು ರೈತರಿಗೆ ಸಾಲ ಮನ್ನಾ ಲಾಭ ತಲುಪಿದೆ ಹೇಳಿ ಎಂದು ಪ್ರಶ್ನಿಸಿದರಲ್ಲದೆ, 43 ಲಕ್ಷ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದು ಇದುವರೆಗೆ ಕೇವಲ 60 ಸಾವಿರ ಜನರಿಗೆ ಮಾತ್ರ ಇದರ ಅಲ್ಪ ಪ್ರಯೋಜನ ತಲುಪಿದೆ. ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಎಂದು ಭರವಸೆ ನೀಡಿ, ಈಗ 10 ವರ್ಷಗಳ ಸಾಲ ಮನ್ನಾ ಯೋಜನೆ ಜಾರಿಗೆ ಸಮ್ಮಿಶ್ರ ಸರಕಾರ ಮುಂದಾಗಿದ್ದು, ಕಳೆದ ಹಲವಾರು ವರ್ಷಗಳಿಂದ ರೈತರು, ಜನರನ್ನು ವಂಚಿಸುವ ಹಾಗೂ ಮತಕ್ಕಾಗಿ ಇಂತಹ ಆಟವನ್ನು ವಿಪಕ್ಷಗಳು ಮಾಡುತ್ತ ಬಂದಿವೆ. ಕರ್ನಾಟಕದಲ್ಲಿನ ಸಾಲ ಮನ್ನಾ ಯೋಜನೆ ಪ್ರಯೋಜನ ಅಲ್ಪ ಜನರಿಗೆ ತಲುಪಿದ್ದರೆ, ಇದರಲ್ಲೂ ಕೆಲವರ ಜೇಬಿಗೆ ಈ ಹಣ ಹೋಗಿದೆ ಎಂದು ಸಾಲ ಮನ್ನಾದಲ್ಲೂ ಅವ್ಯವಹಾರದ ಶಂಕೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜನೀತಿ ಬದಲು 
ರವಿವಾರ ವಸಂತ ಪಂಚಮಿ. ಇಂದಿನಿಂದ ವಾತಾವರಣದಲ್ಲಿ ಬದಲಾವಣೆ ಆಗಲಿದೆ. ಅದೇ ರೀತಿ ಕರ್ನಾಟಕ ರಾಜನೀತಿ ವಾತಾವರಣದಲ್ಲೂ ಬದಲಾವಣೆ ಆಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚ್ಯವಾಗಿ ಹೇಳಿದರು.

ರೆಸಾರ್ಟ್‌ನಲ್ಲಿ ಹೊಡೆದಾಟ
ಕರ್ನಾಟಕದ ಸಮ್ಮಿಶ್ರ ಸರಕಾರ ದಲ್ಲಿನ ಗೊಂದಲ, ಆಡಳಿತ ಪಕ್ಷದ ಶಾಸಕರೇ ರೆಸಾರ್ಟ್‌ನಲ್ಲಿ ಪರಸ್ಪರ ಹೊಡೆದಾಡಿಕೊಳ್ಳು ತ್ತಾರೆ. ಬಡವರ ಬಗ್ಗೆ ಮಾತನಾಡುವವರ ಯೋಜನೆಗಳು ಐಷಾರಾಮಿ ಬಂಗಲೆಗಳಲ್ಲಿ ನಿರ್ಧರಿತವಾಗುತ್ತಿವೆ.  
-ನರೇಂದ್ರ ಮೋದಿ, ಪ್ರಧಾನಿ

ಭಾಗವಹಿಸದ ಸಿಎಂ
ಮೋದಿ ಹುಬ್ಬಳ್ಳಿಯಲ್ಲಿ ಭಾಗವಹಿಸಿದ್ದ ಕಾರ್ಯಕ್ರಮದಿಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ದೂರ ಉಳಿದಿದ್ದಾರೆ. ರಾಜ್ಯ ಸರಕಾರದ ಪರ  ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಭಾಗವಹಿಸಿದ್ದರು. ಈ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯಲ್ಲಿ ಪಾಲ್ಗೊಳ್ಳುತ್ತಿರುವ ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಇರಲಿಲ್ಲ. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ ಕಾರವೂ ಹಣ ನೀಡುತ್ತದೆ. ಆದರೆ ಆ ಕಾರ್ಯಕ್ರಮಕ್ಕೆ ಆಹ್ವಾನ ನೀಡದೆ ಪ್ರಧಾನಿ ಮೋದಿ ಕೀಳು ಮಟ್ಟದ ರಾಜಕಾರಣ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ಬಲಿಷ್ಠ ಸರಕಾರ ಜನರ ಆಯ್ಕೆ
ನರೇಂದ್ರ ಮೋದಿಯವರೆ, ಕರ್ನಾಟಕದ ಜನತೆ ನಿಮ್ಮನ್ನು ಸಾಮಾಜಿಕ ಜಾಲ ತಾಣದ ಮೂಲಕ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದಾರೆ. ಭ್ರಷ್ಟಾಚಾರ, ಆಡಳಿತ ವೈಫ‌ಲ್ಯ, ಸುಳ್ಳು ಭರವಸೆಗಳು, ಯಾಮಾರಿಸುವ ತಂತ್ರಗಾರಿಕೆ, ಕರ್ನಾಟಕಕ್ಕೆ ಮಾಡಿರುವ ಮೋಸದ ಬಗ್ಗೆ ಪ್ರಶ್ನಿಸಿದ್ದಾರೆ. ಯಾವ ಪ್ರಶ್ನೆಗೂ ಉತ್ತರಿಸಲು ನಿಮ್ಮ 56 ಇಂಚಿನ ಎದೆ ಧೈರ್ಯ ನೀಡಲಿಲ್ಲವೇ ? ಮೋದಿ ಯವರೇ ತಮಗೂ ಸತ್ಯಕ್ಕೂ ಹೊಂದಾಣಿಕೆ ಆಗುವುದಿಲ್ಲವೇ? ನಿಮ್ಮ ಬಾಯಿಂದ ಸತ್ಯ ಮತ್ತು 
ವಾಸ್ತವ ಹೊರಡುವುದಿಲ್ಲವೇ?
ಟ್ವೀಟ್‌ ಮೂಲಕ  ಕಾಂಗ್ರೆಸ್‌ ಪ್ರಶ್ನೆ

ಮೋದಿ ಹೇಳಿದ್ದೇನು?
ರೆಸಾರ್ಟ್‌ನಲ್ಲಿ ಶಾಸಕರು ಹೊಡೆದಾಡುತ್ತಿದ್ದಾರೆ. ಬಡವರ ಬಗ್ಗೆ ಮಾತನಾಡುವವರ ಯೋಜನೆಗಳು ಬಂಗಲೆಗಳಲ್ಲಿ ನಿರ್ಧರಿತವಾಗುತ್ತಿವೆ.

ನವಭಾರತ ನಿರ್ಮಾಣಕ್ಕೆ ಕರ್ನಾಟಕದಂತಹ ದುರ್ಬಲ ಸರಕಾರ ಬೇಕೋ ಅಥವಾ ಬಲಿಷ್ಠ, ಸದೃಢ ಸರಕಾರ ಬೇಕೋ ನಿರ್ಧರಿಸಿ.

ವಿಧಾನಸಭೆ ಚುನಾವಣೆ ವೇಳೆ ಸಾಲ ಮನ್ನಾ ಮಾಡಲಾಗುತ್ತದೆ ಎಂದು ಹೇಳಲಾಗಿತ್ತು. 43 ಲಕ್ಷ ರೈತರ ಪೈಕಿ 60 ಸಾವಿರ ಮಂದಿಗೆ ಮಾತ್ರ ಲಾಭ.

ಅದರಲ್ಲಿ  ಕೆಲವು ಪ್ರಮಾಣ ಹಲವರ ಜೇಬಿಗೆ ಕೂಡ ಹೋಗಿರುವ ಸಾಧ್ಯತೆ ಇದೆ.

ಬಡವರಿಗೆ ಎಂದು ಸರಕಾರದಿಂದ ಪ್ರಕಟಗೊಂಡಿರುವ ಯೋಜನೆಗಳು ಅರ್ಹರಿಗೇ ತಲಪುತ್ತದೆಂದು ಈ ಚೌಕಿದಾರ ವಾಗ್ಧಾನ ಮಾಡುತ್ತಾನೆ.

ಇಂದಿನಿಂದ ವಾತಾವರಣದಲ್ಲಿ ಬದ ಲಾವಣೆ ಆಗಲಿದೆ. ಅದೇ ರೀತಿ ಕರ್ನಾಟಕ ರಾಜನೀತಿ ವಾತಾವರಣ ದಲ್ಲೂ ಬದಲಾವಣೆ ಆಗಲಿದೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.