CONNECT WITH US  

ನದಿಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರು ಸಾವು

ರಾಣಿಬೆನ್ನೂರ: ಶಾಲೆಗೆ ರಜೆ ಇದ್ದ ಕಾರಣ ಕುಮದ್ವತಿ ನದಿ ಬಾಂದಾರ ಬಳಿ ಆಟವಾಡಲು ತೆರಳಿದ್ದ ಮೂವರು ವಿದ್ಯಾರ್ಥಿನಿಯರು ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕೂಲಿ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯರು ಅದೇ ಗ್ರಾಮದ 3ನೇ ತರಗತಿಯ ಸುಮನ್‌ ಫಕ್ರುಸಾಬ್‌ ತುಮ್ಮಿನಕಟ್ಟಿ (9), 6ನೇ ತರಗತಿಯ ನಿಷಾದ್‌ಖಾನಂ ಖಾದರ್‌ಸಾಬ್‌ ಪಾಟೀಲ (12), 7ನೇ ತರಗತಿಯ ಮಜ್ಮನೀಲ ಹುಸೇನ್‌ಸಾಬ್‌ ತೋಟದ (13) ಎಂದು ಗುರುತಿಸಲಾಗಿದೆ. ಶಾಲೆಗೆ ರಜೆ ಇರುವುದರಿಂದ ಬುತ್ತಿ ಕಟ್ಟಿಕೊಂಡು ಊಟ ಮಾಡಲು ನದಿಗೆ ತೆರಳಿದ್ದರು. ನೀರಿಗಿಳಿದು ಆಟವಾಡುವಾಗ ಈ ದುರ್ಘ‌ಟನೆ ನಡೆದಿದೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Trending videos

Back to Top