CONNECT WITH US  

ಅತೃಪ್ತರನ್ನು ಅನರ್ಹಗೊಳಿಸಿ : ಸ್ಪೀಕರ್ ಗೆ ಸಿದ್ಧು ದೂರು

ಬೆಂಗಳೂರು: ಕಾಂಗ್ರೆಸ್ ನ ನಾಲ್ವರು ಅತೃಪ್ತ ಶಾಸಕರನ್ನು ಪಕ್ಷದಿಂದ ಅನರ್ಹಗೊಳಿಸಬೇಕೆಂದು ಶಾಸಕಾಂಗ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ವಿಧಾನಸಭೆಯ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಈ ಸಂಬಂಧ ಸಚಿವ ಕೃಷ್ಣ ಭೈರೇ ಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಜೊತೆಯಲ್ಲಿ ಸ್ಪೀಕರ್ ಅವರನ್ನು ಭೇಟಿ ಮಾಡಿದ ಸಿದ್ಧರಾಮಯ್ಯ ಅವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ನಾಲ್ವರು ಶಾಸಕರು ಪಕ್ಷದ ಎಲ್ಲಾ ಆದೇಶಗಳನ್ನು ಉಲ್ಲಂಘಿಸಿದ್ದಾರೆ. ಮತ್ತು ಕಳೆದ ಹಲವಾರು ದಿನಗಳಿಂದ ಈ ಶಾಸಕರು ಪಕ್ಷ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ, ಈ ಎಲ್ಲಾ ಅಶಿಸ್ತಿನ ವರ್ತನೆಗಳ ಕಾರಣಕ್ಕಾಗಿ ನಾಲ್ವರು ಶಾಸಕರನ್ನು ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.


Trending videos

Back to Top