CONNECT WITH US  

ಸದನಕ್ಕೆ ಬಂದ ಪಾಟೀಲ್‌

ಬೆಂಗಳೂರು: ಅತೃಪ್ತರ ಗುಂಪು ಸೇರಿದ್ದ ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್‌ ಸೋಮವಾರ ವಿಧಾನಸಭೆ ಕಲಾಪಕ್ಕೆ ಹಾಜರಾಗಿದ್ದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ವಿಪ್‌ ಜಾರಿ, ನೋಟಿಸ್‌ ನೀಡಿದ ನಂತರ ಶನಿವಾರ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಬಿ.ಸಿ. ಪಾಟೀಲ್‌ ಸೋಮವಾರ ಕಲಾಪಕ್ಕೆ ಹಾಜರಾದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಅತೃಪ್ತನಾಗಿರುವುದು ನಿಜ. ಆದರೆ, ಅತೃಪ್ತರ ಗುಂಪಿನಲ್ಲಿ ಇಲ್ಲ. ಹಲವು ವರ್ಷಗಳಿಂದ ನನ್ನ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗದೇ ಅನ್ಯಾಯವಾಗಿದೆ. ಇದರಿಂದ ನಾನು ಅತೃಪ್ತನಾಗಿದ್ದೇನೆ. ಈ ಬೆಳವಣಿಗೆಗಳ ಕುರಿತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದರು.
 


Trending videos

Back to Top