CONNECT WITH US  

ಹೈಕೋರ್ಟ್‌ ವಿಶೇಷ ಕಲಾಪ ಕಾರ್ಯಾರಂಭ

ಬೆಂಗಳೂರು: ಮೋಟಾರು ವಾಹನ ಕಾಯ್ದೆ ವ್ಯಾಪ್ತಿಗೆ ಬರುವ ಪ್ರಕರಣಗಳ ವಿಚಾರಣೆಗಾಗಿ ಸೋಮವಾರದಿಂದ (ಫೆ.11) ಹೈಕೋರ್ಟ್‌ನ ನಾಲ್ಕು ವಿಶೇಷ ಪೀಠಗಳು ಕಾರ್ಯಾರಂಭ ಮಾಡಿವೆ. ಈ ಕುರಿತು ಹೈಕೋರ್ಟ್‌ನ ನ್ಯಾಯಾಂಗ ರಿಜಿಸ್ಟ್ರಾರ್‌ ಫೆ.8ರಂದು ಅಧಿಸೂಚನೆ ಹೊರಡಿಸಿದ್ದು, ಬೆಂಗಳೂರಿನ ಪ್ರಧಾನ ಪೀಠದಲ್ಲಿ ಸೋಮವಾರದಿಂದ ಶುಕ್ರವಾರದ ವರೆಗೆ ಸಂಜೆ 5 ಗಂಟೆಯಿಂದ 6 ಗಂಟೆಯ ವರಗೆ ಹಾಗೂ ಸಾರ್ವಜನಿಕ ರಜಾ ದಿನವಾದ ಎರಡನೇ ಶನಿವಾರ ಹೊರತು ಪಡಿಸಿ ಉಳಿದ ಶನಿವಾರಗಳಂದು ಬೆಳಗ್ಗೆ 10.30ರಿಂದ ಸಂಜೆ 4.45ರ ವರೆಗೆ ವಿಶೇಷ ಪೀಠಗಳು ಕಾರ್ಯನಿರ್ವಹಿಸಲಿವೆ.


Trending videos

Back to Top