CONNECT WITH US  

ಬಿಜೆಪಿಯದ್ದು ಬಗಲಲ್ಲಿ ಚೂರಿ ಸಿದ್ಧಾಂತ: ಟೀಕೆ

ಬೆಳಗಾವಿ: 'ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯವರು ತಾವು ಪ್ರಾಮಾಣಿಕರು. ಭ್ರಷ್ಟಾಚಾರ ನಿರ್ಮೂಲನೆ ಮಾಡುವವರು ಹಾಗೂ ದೇಶಭಕ್ತರು ಅಂತಾರೆ. ಆದರೆ ಇನ್ನೊಂದು ಕಡೆ ಬಿ.ಎಸ್‌.ಯಡಿಯೂರಪ್ಪ ಅಂಥವರು ಶಾಸಕರ ಖರೀದಿಗೆ 5 ಕೋಟಿ, 10 ಕೋಟಿ ಕೊಡುತ್ತೇವೆ ಎಂದು ಹೇಳುತ್ತಾರೆ.

ಒಂದು ಕಡೆ ಬಾಯಲ್ಲಿ ರಾಮ, ಬಗಲಲ್ಲಿ ಚೂರಿ ಎಂಬುದು ಬಿಜೆಪಿ ಸಿದ್ಧಾಂತವಾಗಿದೆ' ಎಂದು ಕಾಂಗ್ರೆಸ್‌ ಹಿರಿಯ ಮುಖಂಡ ಬಸವರಾಜ ರಾಯರಡ್ಡಿ ಟೀಕಿಸಿದರು. ನಗರದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕಾರದ ಆಸೆಗಾಗಿ ಬಿಜೆಪಿಯವರು ತೀರಾ ಕೆಳಮಟ್ಟಕ್ಕೆ ಹೋಗಿದ್ದಾರೆ. 5 ಹಾಗೂ 10 ಕೋಟಿ ರೂ.ಗಳಲ್ಲಿ ಶಾಸಕರ ಖರೀದಿ ನಡೆಯುತ್ತಿದೆ ಎಂದರೆ ರಾಜಕಾರಣ ಎಲ್ಲಿಗೆ ಹೋಗುತ್ತಿದೆ ಎಂಬುದು ಅರ್ಥವಾಗುತ್ತದೆ. ಯಡಿಯೂರಪ್ಪ ಈ ರೀತಿಯ ಕೆಲಸಕ್ಕೆ ಕೈಹಾಕಿರುವುದು ಇನ್ನೂ ಅಸಹ್ಯ ಹುಟ್ಟಿಸಿದೆ ಎಂದು ರಾಯರಡ್ಡಿ ಬೇಸರ ವ್ಯಕ್ತಪಡಿಸಿದರು.


Trending videos

Back to Top