CONNECT WITH US  

ಸಂಧ್ಯಾ ಸುರಕ್ಷಾ ಯೋಜನೆ: 33,940 ಅರ್ಜಿ ಬಾಕಿ

ಬೆಂಗಳೂರು: ರಾಜ್ಯಾದ್ಯಂತ ಸಂಧ್ಯಾ ಸುರಕ್ಷಾ ಯೋಜನೆಯಡಿ ಮಾಸಿಕ 1000 ರೂ. ಮಾಸಾಶನ ಕೋರಿ ಸಲ್ಲಿಕೆಯಾದ ಅರ್ಜಿಗಳ ಪೈಕಿ 33,940 ಅರ್ಜಿಗಳು ಬಾಕಿ ಉಳಿದಿವೆ.

ಬಿಜೆಪಿಯ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಕೇಳಿರುವ ಚುಕ್ಕೆ ಗುರುತಿನ ಪ್ರಶ್ನೆಗೆ ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಲಿಖೀತ ಉತ್ತರ ನೀಡಿದ್ದಾರೆ. ಮಾಸಿಕ 600 ರೂ. ವಿಧವಾ ವೇತನಕ್ಕಾಗಿ ರಾಜ್ಯಾದ್ಯಂತ 19,318 ಅರ್ಜಿಗಳು ಬಾಕಿ ಉಳಿದಿವೆ.

ಸದ್ಯ ಈ ಯೋಜನೆಗಳಡಿ ಮಾಸಾಶನ ಪ್ರಮಾಣ ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಉತ್ತರದಲ್ಲಿ ತಿಳಿಸಿದ್ದಾರೆ.

ಸಂಧ್ಯಾ ಸುರಕ್ಷಾ ವೇತನಕ್ಕಾಗಿ ಮೈಸೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 3,339 ಅರ್ಜಿ ಹಾಗೂ ವಿಧವಾ ವೇತನಕ್ಕಾಗಿ ಬೆಂಗಳೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 1728 ಅರ್ಜಿಗಳು ಬಾಕಿ ಉಳಿದಿವೆ.


Trending videos

Back to Top