CONNECT WITH US  

ಸಿನಿಮಾ ಅಂದ್ರೆ ಸೇತುವೆ! ನೋಡಿ ಅಂತ ಹೇಳಲ್ಲ, ನೋಡ್ತಾರೆ ಅಷ್ಟೇ

ಸುದೀಪ್‌ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎಷ್ಟು ದಿನಗಳಾಗಿದ್ದವು. ಒಂದು ವರ್ಷ ನಾಲ್ಕು ತಿಂಗಳು ಎಂದು ಅವರೇ ಲೆಕ್ಕ ಇಟ್ಟಿದ್ದಾರೆ. "ರನ್ನ' ಬಿಡುಗಡೆಯಾಗಿ ಒಂದು ವರ್ಷದ ನಾಲ್ಕು ತಿಂಗಳ ನಂತರ "ಕೋಟಿಗೊಬ್ಬ 2' ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಏನು ಹೇಳುತ್ತಾರೆ? ಸುದೀಪ್‌ ಹೇಳುವುದು ಎರಡೇ ಮಾತು.

ಸುದೀಪ್‌ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎಷ್ಟು ದಿನಗಳಾಗಿದ್ದವು. ಒಂದು ವರ್ಷ ನಾಲ್ಕು ತಿಂಗಳು ಎಂದು ಅವರೇ ಲೆಕ್ಕ ಇಟ್ಟಿದ್ದಾರೆ. "ರನ್ನ' ಬಿಡುಗಡೆಯಾಗಿ ಒಂದು ವರ್ಷದ ನಾಲ್ಕು ತಿಂಗಳ ನಂತರ "ಕೋಟಿಗೊಬ್ಬ 2' ಚಿತ್ರ ಬಿಡುಗಡೆಯಾಗುತ್ತಿದೆ. ಈ ಸಂದರ್ಭದಲ್ಲಿ ಅವರು ಏನು ಹೇಳುತ್ತಾರೆ? ಸುದೀಪ್‌ ಹೇಳುವುದು ಎರಡೇ ಮಾತು.
ಮೊದಲನೆಯದು: ನನ್ನ ಚಿತ್ರವೊಂದು ಒಂದು ವರ್ಷದ ನಾಲ್ಕು ತಿಂಗಳ ನಂತರ ಬಿಡುಗಡೆಯಾಗುತ್ತಿದೆ. ದಯವಿಟ್ಟು ನೋಡಿ ...

ಎರಡನೆಯದು: ನನ್ನ ಚಿತ್ರವೊಂದು ಒಂದು ವರ್ಷದ ನಾಲ್ಕು ತಿಂಗಳ ನಂತರ ಬಿಡುಗಡೆಯಾಗುತ್ತಿದೆ. ಜನ ಸಿನಿಮಾಗಾಗಿ ಕಾಯುತ್ತಿದ್ದಾರೆ. ಥ್ಯಾಂಕ್ಸ್‌.

ಸುದೀಪ್‌ ಹೇಳುವಂತೆ, ಅವರು ಇದುವರೆಗೂ ಯಾರಿಗೂ ತಮ್ಮ ಚಿತ್ರವನ್ನು ನೋಡಿ ಎಂದಿಲ್ಲವಂತೆ. "ಜನ ಬರ್ತಾರೆ, ನೋಡ್ತಾರೆ ಅಷ್ಟೇ' ಎಂಬುದು ಅವರ ಅಭಿಪ್ರಾಯ. ಅಷ್ಟೇ ಅಲ್ಲ, ತಮ್ಮ ಚಿತ್ರಜೀವನದಲ್ಲಿ ಇದುವರೆಗೂ ಯಾವುದನ್ನೂ ಅವರು ಪ್ಲಾನ್‌ ಮಾಡಿಲ್ಲವಂತೆ. "ನಾನು ಇದುವರೆಗೂ ಯಾವುದನ್ನೂ ಪ್ಲಾನ್‌ ಮಾಡಿಲ್ಲ. ನಾನು ಪ್ರತಿದಿನ ಮನೆ ಬಿಡೋದು ನಟನೆ ಮಾಡೋಕೆ. ಮಿಕ್ಕಂತೆ ಯಾವುದೂ ಪ್ಲಾನ್‌ ಆಗಿರೋದಿಲ್ಲ. ನಾನು ಅದೆಷ್ಟೋ ಕನ್ನಡ ಸಿನಿಮಾಗಳನ್ನ ಮಾಡಿದೆ. ಕೆಲವು ಗೆಲ್ಲಲಿಲ್ಲ. ಕೆಲವು ಆ್ಯವರೇಜ್‌ ಆದವು. ಇನ್ನೂ ಕೆಲವು ಹಿಟ್‌ ಆದವು. ಒಂದು ಹಂತದಲ್ಲಿ ಕನ್ನಡದಲ್ಲಿ ಮುಂದೇನು ಅಂತಿದ್ದಾಗ, ರಾಮ್‌ ಗೋಪಾಲ್‌ ವರ್ಮ ಕರೆದು ಸಿನಿಮಾ ಕೊಟ್ಟರು. ಅವರೇ ಕೊಟಿದ್ದು. ನಾನು ನನಗೆ ಅವಕಾಶ ಕೊಡಿ ಅಂತ ಲಂಚ ಕೊಡೋಕೆ ಹೋಗಿರಲಿಲ್ಲ. ಅವರ ಜೊತೆಗ "ಫ‌ೂಂಕ್‌' ಮಾಡಿದಾಗ, ಅದು ದೆವ್ವದ ಸಿನಿಮಾ ಅಂತ ಎಲ್ಲಾ ಹೇಳಿದರು. ನಂತರ "ರಣ್‌'ನಲ್ಲಿ ಅವಕಾಶ ಸಿಕ್ಕಿತು. ಅಮಿತಾಭ್‌ ಬಚ್ಚನ್‌ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿತು. ಅದನ್ನ ನೋಡಿ ರಾಜಮೌಳಿ, "ಈಗ' ಮಾಡಿಸಿದರು. ಈಗ ಕೆ.ಎಸ್‌. ರಕುಮಾರ್‌ರಂಥವರ ಜೊತೆಗೆ ಕೆಲಸ ಮಾಡುವ ಅವಕಾ ಸಿಕ್ಕಿದೆ. ಅಲ್ಲಿಂದ ಇಲ್ಲಿಯವರೆಗೂ ಆಗಿರುವುದು ಏನೆಂದರೆ, ನಾನು ಈಗಲೂ ನಟನೆಯನ್ನ ಎಂಜಾಯ್‌ ಮಾಡ್ತೀನಿ. ದಯವಿಟ್ಟು ನನ್ನನ್ನ ಉಪಯೋಗಿಸಿಕೊಳ್ಳಿ. ಅದೇ ನನಗೆ ಖುಷಿ ಕೊಡುವ ವಿಚಾರ' ಎನ್ನುತ್ತಾರೆ ಅವರು.

ಇನ್ನು ಸುದೀಪ್‌ ಅವರ ಚಿತ್ರಗಳ ವಿಷಯಕ್ಕೆ ಬಂದರೆ, ಬೇಡಬೇಡವೆಂದರೂ ರೀಮೇಕ್‌ ಚಿತ್ರಗಳ ಪ್ರಸ್ಥಾಪ ಬರುತ್ತದೆ. ಬಹುಶಃ ಅವರು ರೀಮೇಕ್‌ ಚಿತ್ರಗಳನ್ನು ಹೆಚ್ಚು ನಿರ್ದೇಶಿಸಿದ್ದಕ್ಕೋ, ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ರೀಮೇಕ್‌ ಎಂಬ ಪದ ಬಹಳ ವರ್ಷಗಳಿಂದ ಸುದೀಪ್‌ ಅವರನ್ನು ಕಾಡುತ್ತಿದೆ ಎಂದರೆ ತಪ್ಪಿಲ್ಲ. "ಇಷ್ಟಕ್ಕೂ ಯಾಕೆ ಈ ಪ್ರಶ್ನೆ ಬರುತ್ತೋ ಗೊತ್ತಿಲ್ಲ' ಎನ್ನುವುದರ ಜೊತೆಗೆ ಏನಿದು ರೀಮೇಕ್‌, ಸ್ವಮೇಕ್‌ ಎನ್ನುತ್ತಾರೆ ಅವರು.

"ನಾನು ಜನಪ್ರಿಯನಾಗಿದ್ದೇ ರೀಮೇಕ್‌ನಿಂದ. ಸಾಹಿತ್ಯ ಚೆನ್ನಾಗಿದ್ದರೆ, ಅದನ್ನ ಅನುವಾದ ಮಾಡುವುದಿಲ್ಲವಾ? ಇಲ್ಲಿ ಕಥೆ ಮುಖ್ಯ ಅಷ್ಟೇ. ಯಾವುದೋ ಒಂದು ಕಥೆನಾ ನೋಡಿದಾಗ ಅಥವಾ ಕೇಳಿದಾಗ ಇಷ್ಟ ಆದರೆ, ಅದನ್ನ ಇಲ್ಲಿಗೆ ತರೋಣ ಅನಿಸುತ್ತೆ. ತರುತ್ತೀನಿ ಅಷ್ಟೇ. ಇಲ್ಲಿ ರೀಮೇಕ್‌, ಸ್ವಮೇಕ್‌ ಮುಖ್ಯ ಅಲ್ಲ. ಇಷ್ಟಕ್ಕೂ ನನ್ನ 60 ಸಿನಿಮಾಗಳಲ್ಲಿ ರೀಮೇಕ್‌ ಸಿಗೋದು 13-14 ಅಷ್ಟೇ. ಮಿಕ್ಕೆಲ್ಲಾ ಸ್ವಮೇಕ್‌. ನಾವು ಪ್ರತಿ ದಿನ ರೀಮೇಕ್‌ ಮಾಡ್ತಲೇ ಇರಿ¤àವಿ. ಅಮ್ಮ ತಿಂಡಿ ಕೊಟ್ಟರೆ, ಯಾಕೆ ರೀಮೇಕ್‌ ಮಾಡ್ತೀಯಾ? ಪಕ್ಕದ್ಮನೆಲೂ ಇಡ್ಲಿ ಮಾಡಿದ್ದಾರೆ ಅಂತ ಹೇಳ್ತೀವಾ? ಅದನ್ನೇ ಇಲ್ಲಿ ಯಾಕೆ ಮಾಡ್ತೀರಿ ಅಂತ ಕೇಳ್ತೀವಾ? ಅವರ ಮನೇಲಿ ಮಾಡೋದಾದರೂ ಅದು ಇಡ್ಲಿàನೇ ಅಲ್ವಾ? ನಾನು, ನನಗೆ ಖುಷಿಯಾಗಿದ್ದನ್ನ ಮಾಡ್ತಾ ಹೋಗ್ತಿà ಅಷ್ಟೇ. ಅಷ್ಟಕ್ಕೂ ನನ್ನನ್ನ ಹಿಡಿದು ಎತ್ತಿರೋದು 90 ಪರ್ಸೆಂಟ್‌ ರೀಮೇಕ್‌ ಚಿತ್ರಗಳೇ' ಎನ್ನುತ್ತಾರೆ ಅವರು.

ಅದರ ಹಿಂದೆಯೇ, ಈ ರೀಮೇಕ್‌ ಚಿತ್ರಗಳು ಹೇಗಾಗುತ್ತವೆ ಮತ್ತು ಪ್ರತಿ ಚಿತ್ರದ ಹಿಂದೆ ಏನೇನು ಕಾರಣವಿರುತ್ತೆ ಅನ್ನೋದನ್ನು ವಿವರಿಸುತ್ತಾ ಹೋಗುತ್ತಾರೆ. "ಇಷ್ಟಕ್ಕೂ ನಾವು ಯಾಕೆ ರೀಮೇಕ್‌ ಮಾಡ್ತೀನಿ ಗೊತ್ತಾ? ಅದರಲ್ಲಿ ಎಷ್ಟು ಪೇಮೆಂಟ್‌ಗೆ ಮಾಡ್ತೀನಿ, ಎಷ್ಟು ಫ್ರೀ ಅನ್ನೋದು ಗೊತ್ತಾ? ಬಹಳಷ್ಟು ಬಾರಿ ಹೆಲ್ಪ್ ಮಾಡೋಕೆ ಮಾಡಬೇಕಾಗುತ್ತೆ. ಇವತ್ತು ನಾನು ರೀಮೇಕ್‌ ಮಾಡಿದವರೆಲ್ಲಾ ಚೆನ್ನಾಗಿದ್ದಾರೆ. ನಾನೂ ಚೆನ್ನಾಗಿದ್ದೀನಿ. ಉದಾಹರಣೆಗೆ ಹೇಳಬೇಕೆಂದರೆ, "ಮಾಣಿಕ್ಯ' ಮಾಡಿದ ಸಂದರ್ಭದಲ್ಲಿ, ಬೇರೆ ನಾನು ಇನ್ನೊಂದು ಸಿನಿಮಾ ಮಾಡಬೇಕಿತ್ತು. ಆ ನಿರ್ದೇಶಕರು ಆರು ತಿಂಗಳು ಬರೆದರೂ, ವರ್ಕ್‌ ಆಗಲಿಲ್ಲ. ಅಷ್ಟರಲ್ಲಿ ನಿರ್ಮಾಪಕ ಕುಮಾರ್‌ಗೆ ಕುತ್ತಿಗೆಗೆ ಬಂದಿತ್ತು. ಏನಾದರೂ ಮಾಡಲೇ ಬೇಕಿತ್ತು. ಆಗ ಅವರೇ ತೆಲುಗು "ಮಿರ್ಚಿ' ಮಾಡೋಣ ಎಂದರು. ಅಲ್ಲಿಯವರೆಗೂ ನಾನು ಆ ಸಿನಿಮಾ ನೋಡಿರಲಿಲ್ಲ. ಅವರು ಹೇಳಿದ ಬಜೆಟ್‌ಗೆ ಆ ಸಿನಿಮಾ ಆಗುತ್ತಲೂ ಇರಲಿಲ್ಲ. ಕೊನೆಗೆ ಸ್ನೇಹದ ಮೇಲೆ ಆ ಸಿನಿಮಾ ಮಾಡಿದೆ. ಒಂದು ಪೈಸೆ ತಗೊಂಡಿಲ್ಲ. ಇನ್ನು "ರನ್ನ'ದ ಬಗ್ಗೆ ಹೇಳಬೇಕಾದರೆ, ಈ ಸಿನಿಮಾ ಮೊದಲು ಬರಬೇಕಿತ್ತು. ಗ್ಯಾಪ್‌ ಆಯ್ತು.
ತುರ್ತಾಗಿ ಏನಾದರೂ ಮಾಡಬೇಕಿತ್ತು. ಆಗ ನಿರ್ಮಾಪಕ ಬಾಬುನೇ ರೆಕಮಂಡ್‌ ಮಾಡಿದ್ರು. ಚಿತ್ರ ಹಿಟ್‌ ಆಯ್ತು' ಎಂದು ನೆನಪಿಸಿಕೊಂಡರು ಸುದೀಪ್‌.

ಸುದೀಪ್‌ ಹೇಳ್ಳೋದೇನೆಂದರೆ, "ಸಿನಿಮಾ ಅನ್ನೋದು ನನ್ನ ಮತ್ತು ಪ್ರೇಕ್ಷಕರ ನಡುವಿನ ಒಂದು ಸಿಂಪಲ್‌ ಸೇತುವೆ. ಒಂದು ಸಿನಿಮಾ ಚೆನ್ನಾಗಿ ಆಯ್ತು ಅಂದರೆ ಸಂತೋಷ, ಇಲ್ಲವಾದರೆ ಇನ್ನೊಂದು ಸಿನಿಮಾ ಮಾಡೋದು ಇದ್ದೇ ಇದೆ ...'

- ಚೇತನ್‌ ನಾಡಿಗೇರ್‌


Trending videos

Back to Top