ಕಳಕೊಂಡಿದ್ದು ಖಳರನ್ನಲ್ಲ, ಕಣ್ಣನ್ನು


Team Udayavani, Jan 27, 2017, 3:50 AM IST

pjimage (5).jpg

“ಸಾವು ಅನ್ನೋದು ತಪ್ಪಲ್ಲ. ಅದು ಯಾವತ್ತೂ ತಪ್ಪೋದಿಲ್ಲ. ದೇವ್ರು ಪ್ರಕಾರ ಆ ಸಾವು ರೈಟು. ಮನುಷ್ಯನ ಪ್ರಕಾರ ಅದು ತಪ್ಪು. ಬದುಕಲ್ಲಿ ವಿಧಿ ಬರೆದದ್ದು ನಡೆಯಲೇಬೇಕು. ವಿಧಿ ಬರಹವನ್ನು ಯಾರಿಂದಲೂ ತಪ್ಪಿಸೋಕೆ ಸಾಧ್ಯವಿಲ್ಲ…!

 ಹೀಗೆ ಹೇಳಿ, ಕ್ಷಣಕಾಲ ಭಾವುಕರಾದರು ದುನಿಯಾ ವಿಜಯ್‌. ಅವರೇಕೆ ಭಾವುಕರಾದರು, ಯಾರನ್ನ ಕುರಿತು ಈ ಮಾತು ಹೊರಹಾಕಿದರು ಎಂಬುದು ಇಷ್ಟೊತ್ತಿಗಾಗಲೇ ಗೊತ್ತಾಗಿರಲೇಬೇಕು. ಹೌದು. ದುನಿಯಾ ವಿಜಯ್‌ ಇಂದಿಗೂ ಅನಿಲ್‌-ಉದಯ್‌ ಸಾವಿನ ಶಾಕ್‌ನಿಂದ ಹೊರಬಂದಿಲ್ಲ. ಅವರ ನೆನಪಲ್ಲೇ ದಿನ ನೂಕುತ್ತಿರುವ ವಿಜಯ್‌, ಜೀವದ ಗೆಳೆಯರನ್ನು ಕಳೆದುಕೊಂಡು ದೊಡ್ಡ ಸೋಲಿನಿಂದ ಕಂಗೆಟ್ಟಿದ್ದಾರೆ. ಆದರೂ, ತನ್ನೊಂದಿಗೆ ಅವರಿದ್ದಾರೆ ಅಂದುಕೊಂಡೇ ಮೇಲೆದ್ದು ಬರುವ ಪ್ರಯತ್ನದಲ್ಲಿದ್ದಾರೆ. ಸಹೋದರರಂತಿದ್ದ ಅನಿಲ್‌-ಉದಯ್‌ ಇಲ್ಲದ ಇಷ್ಟು ದಿನಗಳನ್ನು ಅವರು ಕಳೆದದ್ದು ಹೇಗೆ, ಅವರ ಹೆಸರಲ್ಲಿ ಮಾಡಲಿರುವ ಯೋಜನೆಗಳೇನು, ಅವರ ಕುಟುಂಬಕ್ಕೆ ವಿಜಿ ಹೇಗೆಲ್ಲಾ ಬೆನ್ನೆಲುಬಾಗಿ ನಿಲ್ಲುತ್ತಾರೆ, ಮುಂದಿನ ಸಿನಿಮಾ ಇತ್ಯಾದಿ ಕುರಿತು ವಿಜಿ ಜತೆ ಒಂದು ಮಾತುಕತೆ.

ಎರಡು ಕಣ್ಣೇ ಇಲ್ಲವಾದರೆ ಜೀವದ ಗತಿ?
“ತಾನು ಸಾಯೋವರೆಗೂ ಅನಿಲ್‌-ಉದಯ್‌ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಅವರ ಅಗಲಿಕೆಯ ಶಾಕ್‌ನಿಂದ ಹೊರಗೆ ಬರಲು ಇಂದಿಗೂ ಆಗಿಲ್ಲ. ಬಹುಶಃ, ಈ ಜೀವ ಇರೋವರೆಗೂ ಆ ಶಾಕ್‌ ಸುಧಾರಿಸಿಕೊಳ್ಳಲಾಗುವುದಿಲ್ಲ. ಎರಡು ಕಣ್ಣುಗಳ ಪೈಕಿ ಒಂದು ಕಣ್ಣು ಹೋದರೂ, ಜೀವ ಒದ್ದಾಡುತ್ತಿರುತ್ತೆ. ಅಂಥದರಲ್ಲಿ ಎರಡು ಕಣ್ಣುಗಳೇ ಹೋದರೆ, ಆ ಜೀವದ ಗತಿಯೇನು? ಪ್ರತಿ ದಿನವೂ ಅವರ ನೆನಪು ಕಾಡುತ್ತದೆ. ಪ್ರತಿಕ್ಷಣವೂ ಅನಿಲ್‌-ಉದಯ್‌ ಇಲ್ಲೋ ಎಲ್ಲೋ ಹೋಗಿದ್ದಾರೆ ಎಂಬ ಭಾವನೆಯಲ್ಲೇ ಕೆಲಸ ಮಾಡುತ್ತಿದ್ದೇನೆ.

ನನ್ನ ಕಷ್ಟ-ಸುಖದಲ್ಲಿ ಭಾಗಿಯಾಗಿದ್ದರು. ಎಷ್ಟೋ ಸಲ ಬೈಯುತ್ತಿದ್ದರು. ಅಷ್ಟೇ ಹೊಗಳುತ್ತಿದ್ದರು. ನನ್ನಿಂದ ಬೈಯಿಸಿಕೊಳ್ಳುತ್ತಿದ್ದರು. ಶಬ್ಟಾಸ್‌ಗಿರಿಯನ್ನೂ ಪಡೆಯುತ್ತಿದ್ದರು. ಅಂಥಾ ಗೆಳೆಯರು ನನ್ನ ಕಣ್ಣ ಮುಂದೆಯೇ ಇಲ್ಲವಾದಾಗ, ನನ್ನೊಳಗಿನ ಜೀವಕ್ಕೆ ಎಂಥಾ ಆಘಾತವಾಗಿರಬಹುದು? ಅದನ್ನ ಯಾರ ಬಳಿ ಹೇಳಿಕೊಳ್ಳಲಿ? ಪ್ರತಿ ರಾತ್ರಿಯೂ ಅವರ ನೆನಪಿಸಿಕೊಂಡೇ ಕತ್ತಲ ರಾತ್ರಿಗಳನ್ನ ಸುಡುತ್ತಿದ್ದೇನೆ. ಆ ಕರಾಳ ದುರಂತಕ್ಕೆ ಎಂಥಾ ಹೆಸರಿಡಬೇಕೋ ಗೊತ್ತಾಗುತ್ತಿಲ್ಲ. ಆದರೆ, ಅಂಥಾ ಆಪ್ತಮಿತ್ರರು ನನ್ನೊಟ್ಟಿಗೇ ಕಷ್ಟ ಅನುಭವಿಸಿ, ಗೆಲುವನ್ನೂ ಸಂಭ್ರಮಿಸಿ ಈಗಿಲ್ಲವಾಗಿದ್ದಾರೆಂದರೆ ಅದನ್ನು ನಂಬುವುದು…’

ಅವರ ಬಗ್ಗೆ ಹೆಮ್ಮೆ ಇದೆ. ನನ್ನಷ್ಟೇ ಎತ್ತರಕ್ಕೆ ಬೆಳೆದರು. ಹೆಸರು ಮಾಡಿದರು. ಅವರಿಗೆ ಕೋಪ ಬಂದಾಗ ಬೈಯ್ತಾ ಇದ್ದೆ. ಎಷ್ಟೇ ಕೋಪಿಸಿಕೊಂಡು ಬೈದರೂ, “ನಿಮ್ಮ ಕೋಪದ ಹಿಂದೆ ಪ್ರೀತಿ ಕಾಣುತ್ತೆ. ನಿಮ್ಮ ಬೈಗುಳದ ಹಿಂದೆ ಸ್ವೀಟ್‌ ಮಾತುಗಳಿರುತ್ತೆ ಬಿಡಣ್ಣಾ..’ ಅನ್ನುತ್ತಲೇ ನಾನು ಹೇಳಿಕೊಟ್ಟ “ಲೈಫ್ ವಿನ್ನಿಂಗ್‌ ಸೀಕ್ರೆಟ್‌’ ಅನ್ನು ಚಾಚೂ ತಪ್ಪದೆ ನಿಭಾಯಿಸಿ, ಸೈ ಎನಿಸಿಕೊಂಡರು. ಉದಯ್‌ ತೆಲುಗು, ಅನಿಲ್‌ ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದರು. ಅವರನ್ನು ಬಹುಭಾಷಾ ನಟರನ್ನಾಗಿ ಕಾಣುವ ಆಸೆ ಇತ್ತು. ಇಬ್ಬರನ್ನೂ ತಿದ್ದಿ ತೀಡಲು ಕಷ್ಟಪಟ್ಟಿದ್ದೆ. ಆದರೆ, ವಿಧಿಯಾಟ ಬೇರೆಯದೇ ಆಗಿತ್ತು ಎನ್ನುತ್ತಲೇ ಪುನಃ ಭಾವುಕರಾದರು ವಿಜಯ್‌.

ಅವರ ಕುಟುಂಬವನ್ನು ಎಂದಿಗೂ ಕೈ ಬಿಡಲ್ಲ

ಅವರಿಲ್ಲದ ಮೊದಲ ಬರ್ತ್‌ಡೇ ಆಚರಿಸಿಕೊಂಡೆ. ಹಾಗಂತ ಅದು ಸಂಭ್ರಮದ ಹುಟ್ಟುಹಬ್ಬವಾಗಿರಲಿಲ್ಲ. ಅವರ ಭಾವಚಿತ್ರಗಳನ್ನಿಟ್ಟುಕೊಂಡು, ಅವರ ನೆನಪಲ್ಲಿ ಆಚರಿಸಿಕೊಂಡ ಬರ್ತ್‌ಡೇ ಅದು. ನನ್ನ ಬರ್ತ್‌ಡೇ ಅಂದರೆ ಸಾಕು, ಅವರ ಬರ್ತ್‌ಡೆಯಷ್ಟೇ ಸಂಭ್ರಮಿಸೋರು. ಅಭಿಮಾನಿಗಳೊಂದಿಗೆ ನನಗಿಂತಲೂ ಚೆನ್ನಾಗಿ ಗೆಳೆತನ ಬೆಳೆಸಿಕೊಂಡಿದ್ದರು. “ಮಾಸ್ತಿಗುಡಿ’ಯಲ್ಲಿ ಅವರಿದ್ದ ಭಾಗ ಬಹುತೇಕ ಕಂಪ್ಲೀಟ್‌ ಆಗಿದೆ.

ಸ್ವಲ್ಪ ಪ್ಯಾಚ್‌ ವರ್ಕ್‌ ಮುಗಿಸಿದರೆ, ಚಿತ್ರ ಮುಗಿಯುತ್ತದೆ. “ಮಾಸ್ತಿಗುಡಿ’ ರಿಲೀಸ್‌ ಬಳಿಕ ಅವರ ಫ್ಯಾಮಿಲಿಗೆ ಏನೆಲ್ಲಾ ಭದ್ರತೆ ಮಾಡಬೇಕೋ ಅದನ್ನು ಮಾಡುತ್ತೇನೆ. ನನ್ನ ಕುಟುಂಬದಂತೆಯೇ ಅವರ ಕುಟುಂಬವನ್ನೂ ನೋಡಿಕೊಂಡು ಹೋಗುತ್ತೇನೆ. ನನಗೂ ನೂರೆಂಟು ಆಸೆಗಳಿವೆ. ಯಾವುದೇ ಕಾರಣಕ್ಕೂ ಆ ಫ್ಯಾಮಿಲಿಯನ್ನು ಕೈ ಬಿಡುವುದಿಲ್ಲ. ಈಗಲೇ ಏನು ಮಾಡ್ತೀನಿ ಅಂತ ಹೇಳುವುದಿಲ್ಲ. ನನ್ನ ಕೈಯಲ್ಲಿ ಏನು ಮಾಡೋಕೆ ಸಾಧ್ಯವೋ, ದೇವ್ರು ಏನು ಮಾಡಲು ಶಕ್ತಿ ಕೊಡುತ್ತಾನೋ ಅದನ್ನು ಖಂಡಿತ ಮಾಡ್ತೀನಿ. ಅವರಿಬ್ಬರ ಹೆಸರಲ್ಲೊಂದು ಟ್ರಸ್ಟ್‌ ಮಾಡುವ ಪ್ಲಾನಿಂಗ್‌ ಕೂಡ ಇದೆ. ಮಾರ್ಚ್‌ನಲ್ಲಿ ಮಾಸ್ತಿಗುಡಿ ಬರುವ ಸಾಧ್ಯತೆ ಇದೆ. ಆ ಬಳಿಕ ಎಲ್ಲವನ್ನೂ ಪ್ಲಾನ್‌ ಮಾಡುತ್ತೇನೆ ಎಂಬುದು ವಿಜಯ್‌ ಮಾತು.

ಗೆಳೆತನವೇ ನನ್ನ ನಂಬಿಕೆ
ಇನ್ನು, “ಕನಕ’ ನನಗೆ ಸಿಕ್ಕ ಮತ್ತೂಂದು ಒಳ್ಳೆಯ ಸಿನಿಮಾ. ಅದರಲ್ಲಿ ಆಟೋ ಚಾಲಕ. ಅಣ್ಣಾವ್ರ ಅಭಿಮಾನಿಯೊಬ್ಬನ ಬ್ಯೂಟಿಫ‌ುಲ್‌ ಸ್ಟೋರಿ ಅದು. ಆರ್‌.ಚಂದ್ರು ರಿಚ್‌ ಮೇಕರ್‌ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. “ಕನಕ’ ಮೂಲಕ ಮತ್ತೂಂದು ಹೈ ಬಜೆಟ್‌ ಸಿನಿಮಾ ಮಾಡಲು ಹೊರಟಿದ್ದಾರೆ. ನನಗೂ ಅಂತಹ ಟೆಕ್ನೀಷಿಯನ್‌ ಜತೆ ಕೆಲಸ ಮಾಡಲು ಸಿಕ್ಕ ಒಳ್ಳೆಯ ಅವಕಾಶವದು. ಅನಿಲ್‌ ಹಾಗೂ ಉದಯ್‌ಗೆ ಆ ಚಿತ್ರದಲ್ಲಿ ಪ್ರಮುಖ ಪಾತ್ರಗಳಿದ್ದವು. ಆ ಪಾತ್ರವನ್ನೀಗ ನನ್ನ ಹುಡುಗರೇ ಮಾಡಲಿದ್ದಾರೆ. ಈಗ ನನ್ನದೇ ಗರಡಿಯಲ್ಲಿ ಏಳೆಂಟು ಹುಡುಗರಿದ್ದಾರೆ. ನನ್ನನ್ನು ನೋಡಿ, ಸ್ಪೂರ್ತಿ ಪಡೆದ ಹುಡುಗರು ತುಂಬಾ ಶಿಸ್ತಿನಿಂದ, ಶ್ರದ್ಧೆ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ. ಸಾಕಷ್ಟು ಹುಡುಗರು ನನ್ನ ಗರಡಿಗೆ ಬಂದು, ಶ್ರದ್ಧೆಯಿಂದ ಕೆಲಸ ಮಾಡಲಾಗದೆ ವಾಪಾಸ್‌ ಹೋದವರಿದ್ದಾರೆ. ಉಳಿದ ಒಂದಷ್ಟು ಮಂದಿಗೆ, “ಜಗತ್ತು ನನ್ನನ್ನು ಆರೋಪಿಯನ್ನಾಗಿ ನೋಡುತ್ತಿದೆ. ನೀವೇಕ್ರೋ, ನನ್ನ ಜತೆ ಇರಿ¤àರಾ. ನಿಮ್ಮ ಪಾಡಿಗೆ ನೀವು ಏನಾದರೂ ಕೆಲಸ ಮಾಡಿಕೊಂಡು ಬದುಕು ನಡೆಸಿ ಹೋಗಿ..’ ಅಂತ ಅಂದಿದ್ದುಂಟು. ಆದರೂ, ಒಂದಷ್ಟು ಹುಡುಗರು ನನ್ನ ಮಾತು ಸಹಿಸಿಕೊಂಡು ಉಳಿದಿದ್ದಾರೆ. ಅವರಲ್ಲಿ ಉತ್ಸಾಹವಿದೆ. ಆ ಪೈಕಿ ನಿರಂಜನ್‌ ಎಂಬ ಹುಡುಗ ನನ್ನಿಂದ ಬೈಯಿಸಿಕೊಂಡು, ಸಹಿಸಿಕೊಂಡು ಅತ್ಯುತ್ಸಾಹದಿಂದಿದ್ದಾನೆ. ಅವನನ್ನು ಈಗ ಕಲಾವಿದನನ್ನಾಗಿಸುವ ಆಸೆ ಇದೆ. ಗೌತಮ್‌ ಎಂಬ ಇನ್ನೊಬ್ಬ ಹುಡುಗನಿಗೆ ಫೈಟ್‌ ಮಾಸ್ಟರ್‌ ಆಗುವ ಆಸೆ ಇದೆ. ಅವನನ್ನೂ ಕಲಾವಿದನಾಗಿಸುವ ಬಯಕೆ ನನ್ನದು. ಇಬ್ಬರದೂ ಬಡತನದ ಕುಟುಂಬ. ಓದಿಕೊಂಡಿರುವ ಬುದ್ಧಿವಂತರು. ಅವರೊಟ್ಟಿಗೆ ಇನ್ನೂ ಹುಡುಗರಿದ್ದಾರೆ. ಎಲ್ಲರನ್ನೂ ಒಂದು ಲೆವೆಲ್‌ಗೆ ನಿಲ್ಲಿಸುವ ಜವಾಬ್ದಾರಿಯೂ ಇದೆ. ನನಗೆ ಗೆಳೆತನದ ಮೇಲಿರುವ ನಂಬಿಕೆ ಇನ್ಯಾವುದರಲ್ಲೂ ಇಲ್ಲ’ ಎನ್ನುತ್ತಲೇ ಅನಿಲ್‌-ಉದಯ್‌ ಅವರ ಅಪರೂಪದ ಗೆಳೆತನದ ಬಗ್ಗೆ ಹೇಳುವುದನ್ನ ಮರೆಯಲಿಲ್ಲ ವಿಜಯ್‌.

ಬದುಕಿಗೆ ಬಿದ್ದ ಬುಲೆಟ್‌ಗೆ ಲೆಕ್ಕವಿಲ್ಲ!
ಕೆಲವೊಮ್ಮೆ ಯಾವ ತಪ್ಪು ಮಾಡದೆಯೇ ತಪ್ಪು ನಡೆದು ಹೋಗುತ್ತದೆ. ವಿನಾಕಾರಣ ಸೋಲು ಅನುಭವಿಸಬೇಕಾಗುತ್ತದೆ. ಹಾಗಂತ ಸುಮ್ಮನೆ ಇದ್ದರೆ ಬದುಕಿಗೆ ಅರ್ಥ ಇರಲ್ಲ. ಎಲ್ಲವನ್ನೂ ಪಕ್ಕಕ್ಕೆ ಸರಿಸಿ, ಎದ್ದು ಬರ್ತಾ ಇರಬೇಕು. ಯೋಧ ಯುದ್ಧಕ್ಕೆ ಹೊರಟಾಗ, ಬುಲೆಟ್‌ ಬಿದ್ದರೂ ಹೋರಾಡುತ್ತಾನೆ. ನನ್ನ ಬದುಕೆಂಬ ಹೋರಾಟದಲ್ಲಿ ಅದೆಷ್ಟೋ “ಬುಲೆಟ್‌’ಗಳು ಬಿದ್ದಿವೆ. ಅವೆಲ್ಲವನ್ನೂ ಸಹಿಸಿಕೊಂಡೇ ಮುಂದಿನ ಹೆಜ್ಜೆ ಇಡುತ್ತಲೇ ಬಂದಿದ್ದೇನೆ. ನನ್ನ ಈ ನಿಲುವಿಗೆ ನನ್ನೊಳಗಿನ ಶ್ರದ್ಧೆ ಮತ್ತು ಕಲಾ ಪ್ರೀತಿ ಕಾರಣ. ನನ್ನ ಹಾರ್ಡ್‌ವರ್ಕ್‌ ಹಿಂದೆ ಪತ್ನಿ ಕೀರ್ತಿಯ ಪಾತ್ರವೂ ಇದೆ. ಗೆಳೆಯರ ಪ್ರೋತ್ಸಾಹವೂ ಇದೆ ಅಂತ ಪ್ರೀತಿಯಿಂದ ಹೇಳಿಕೊಂಡರು ವಿಜಿ.

ನನಗೆ ಸಂಸಾರ ಕಥೆವುಳ್ಳ ಚಿತ್ರ ಮಾಡುವಾಸೆ. ಆದರೆ, ನಾನು “ಸಂಸಾರಿ’ ಥರಾ ಕಾಣಿ¤àನಾ? ಗೊತ್ತಿಲ್ಲ. ಎಲ್ಲರೂ ಆ್ಯಕ್ಷನ್‌ ಸಿನಿಮಾ ಮಾಡೋಣ ಅಂತಾನೇ ಬರ್ತಾರೆ. ನನಗೂ ಫ್ಯಾಮಿಲಿ ಸಬೆjಕ್ಟ್ ಇರುವ ಸಿನಿಮಾ ಮಾಡುವಾಸೆ ಇದೆ. ಆ ರೀತಿಯ ಸಬೆjಕ್ಟ್ ಎದುರು ನೋಡುತ್ತಿದ್ದೇನೆ. ಸದ್ಯಕ್ಕೆ ಈ ವರ್ಷ “ಮಾಸ್ತಿಗುಡಿ’, “ಕನಕ’ ಮತ್ತು ಶ್ರೀಕಾಂತ್‌ ನಿರ್ಮಾಣದ ಎಂ.ಎಸ್‌.ರಮೇಶ್‌ ನಿರ್ದೇಶನದ ಹೊಸ ಚಿತ್ರವೊಂದು ಬರಲಿದೆ. ಮುಂದಿನ ವರ್ಷ, ಇನ್ನಷ್ಟು ಹೊಸ ಸಿನಿಮಾಗಳು ಸೆಟ್ಟೇರಲಿವೆ. ನಾನು ಎಷ್ಟೇ ಸಿನಿಮಾ ಮಾಡಲಿ, ಎಷ್ಟೇ ಹೆಸರು, ಹಣ ಸಂಪಾದಿಸಲಿ, ಎಷ್ಟೇ ವರ್ಷ ಬದುಕಲಿ ಅನಿಲ್‌-ಉದಯ್‌ ಅವರ ನೆನಪು ಮಾತ್ರ ಮಾಸು ವುದಿಲ್ಲ…’ ಎನ್ನುತ್ತಲೇ ವಿಜಿ ಮಾತಿಗೆ ಇತಿಶ್ರೀ ಹಾಡಿದರು.

– ವಿಜಯ್‌ ಭರಮಸಾಗರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.