ಯುವಜನ ಮೇಳ

Team Udayavani, Sep 8, 2017, 1:04 PM IST

08-SUCHI-8.jpg

ಹೆಂಡ್ತಿ ಕಥೆ, ಗಂಡನ ನಿರ್ದೇಶನ!
ಈ ತರಹದ ಕಾಂಬಿನೇಶನ್‌ ಚಿತ್ರರಂಗದಲ್ಲಿ ಸಿಗೋದು ಅಪರೂಪ. ಆದರೆ, ಈ ಅಪರೂಪ ಈಗ ಜರುಗಿದೆ. ಅದು ಲೈಫ್ ಜೊತೆ! ಹೀಗೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಾವು ಹೇಳುತ್ತಿರೋದು “ಲೈಫ್ ಜೊತೆ ಒಂದ್‌ ಸೆಲ್ಫಿ’ ಸಿನಿಮಾ ಬಗ್ಗೆ. ದಿನಕರ್‌ ತೂಗುದೀಪ ಈ ಸಿನಿಮಾದ ನಿರ್ದೇಶಕರು. 

ದಿನಕರ್‌ ಪತ್ನಿ ಮಾನಸ ದಿನಕರ್‌ ಈ ಸಿನಿಮಾಕ್ಕೆ ಕಥೆ ಬರೆದಿದ್ದಾರೆ. ಹೆಂಡ್ತಿ ಕಥೆ ಇಷ್ಟವಾಗಿ ದಿನಕರ್‌ ಈಗ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಈಗಾಗಲೇ ಚಿತ್ರದ ಮುಹೂರ್ತ ಕೂಡಾ ನಡೆದು ಹೋಗಿದೆ. ದಿನಕರ್‌ ತೂಗುದೀಪ “ಸಾರಥಿ’ ನಂತರ ಯಾವ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ. ಈಗ ಐದು ವರ್ಷಗಳ ನಂತರ ಹೆಂಡ್ತಿ ಕಥೆ ಮೂಲಕ ದಿನಕರ್‌ ವಾಪಾಸ್ಸಾಗಿದ್ದಾರೆ.  ಸುಮಾರು ಒಂದೂವರೆ ವರ್ಷಗಳಿಂದ
ಮಾನಸ ಅವರು ಕಥೆ ಮಾಡುತ್ತಿದ್ದರಂತೆ. ಕಥೆಯ ಲೈನ್‌ ಅನ್ನು ದಿನಕರ್‌ಗೆ ಹೇಳಿದಾಗ, ಲೈನ್‌ ಚೆನ್ನಾಗಿದ್ದು, ಮತ್ತಷ್ಟು ಡೆವಲಪ್‌ ಮಾಡುವಂತೆ ಹೇಳಿದ್ದರಂತೆ. “ಮಾನಸ ಒಂದೂವರೆ ವರ್ಷಗಳಿಂದ ಕಥೆ ಮಾಡಿಕೊಂಡಿದ್ದಾಳೆ. ಡೆವಲಪ್‌ ಮಾಡುತ್ತಾ ಕಥೆ ತುಂಬಾ ಚೆನ್ನಾಗಿ ಬಂತು. ಹಾಗಾಗಿ, ಈಗ ಸಿನಿಮಾ ಮಾಡುವ ಹಂತಕ್ಕೆ ಬಂದಿದೆ. 

ಕಥೆಯಲ್ಲಿ ಹೊಸತನವಿದೆ. ಜೊತೆಗೆ ಇಂದಿನ ಯೂತ್ಸ್ಗೆ ಬೇಗನೇ ಕನೆಕ್ಟ್ ಆಗುವಂತಹ ಕಥೆ’ ಎಂಬುದು ದಿನಕರ್‌ ಮಾತು. ಚಿತ್ರದಲ್ಲಿ ಒಬ್ಬ ಸಾಫ್ಟ್ವೇರ್‌ ಹುಡುಗ, ಮತ್ತೂಬ್ಬ ಕೋಟ್ಯಾಧಿಪತಿಯ ಮಗ ಹಾಗೂ ಜಾಲಿಯಾಗಿರುವ ಹುಡುಗಿಯೊಬ್ಬಳ ಸುತ್ತ ಸಿನಿಮಾ ಸಾಗುತ್ತದೆ ಎಂಬ ಮಾಹಿತಿ ದಿನಕರ್‌ ಅವರಿಂದ ಬರುತ್ತದೆ. ಚಿತ್ರವನ್ನು ಸಮೃದ್ಧಿ ಮಂಜುನಾಥ್‌ ನಿರ್ಮಿಸುತ್ತಿದ್ದಾರೆ. ದಿನಕರ್‌ ಹೇಳಿದ ಕಥೆ ಇಷ್ಟವಾಗಿ ಕೂಡಲೇ ಸಿನಿಮಾ ಮಾಡಲು ಮುಂದಾಗಿದ್ದಾಗಿ ಹೇಳಿಕೊಂಡರು ಮಂಜುನಾಥ್‌. ಎಲ್ಲಾ ಓಕೆ, “ಲೈಫ್ ಜೊತೆಗೆ ಒಂದ್‌ ಸೆಲ್ಫಿ’ ಕಥೆಯಲ್ಲಿ ಏನಿದೆ, ಯಾವುದರ ಸುತ್ತ ಸಿನಿಮಾ ಸುತ್ತುತ್ತದೆ ಎಂದರೆ, ಇಂದಿನ ಯೂತ್ಸ್ ಸುತ್ತ ಎಂಬ ಉತ್ತರ ಮಾನಸ ದಿನಕರ್‌ ಅವರಿಂದ ಬರುತ್ತದೆ. 

ಅನೇಕರು ಭಾವಿಸಿದ್ದಾರೆ, ಇಂದಿನ ಯೂತ್ಸ್ಗೆ ಜವಾಬ್ದಾರಿ ಇಲ್ಲ, ಕೇವಲ ಸೆಲ್ಫಿ ಹಿಂದೆಯೂ ಬಿದ್ದಿದ್ದಾರೆಂದು. ಆದರೆ, ಇವತ್ತಿನ ಯುವ ಜನತೆ ತುಂಬಾ ಬುದ್ಧಿವಂತರು. ತಮಗೇನು ಬೇಕು, ತಮ್ಮ ಆದ್ಯತೆ ಏನೆಂಬುದನ್ನು ತಿಳಿದುಕೊಂಡಿದ್ದಾರೆ. ಜೊತೆಗೆ ಜೀವನ ಒಂದು ಕುತೂಹಲದ ಗೂಡು. ಕ್ಷಣ ಕ್ಷಣವೂ ಸರ್‌ಪ್ರೈಸ್‌ ಗಳು ಎದುರಾಗುತ್ತವೆ. ಈ ಅಂಶಗಳನ್ನಿಟ್ಟುಕೊಂಡು ಕಥೆ ಮಾಡಿದ್ದೇನೆ. ಚಿತ್ರದ ಟೈಟಲ್‌ ಕಥೆಗೆ ತುಂಬಾನೇ ಹೊಂದಿಕೆಯಾಗುತ್ತದೆ’ ಎಂದು ಕಥೆ ಬಗ್ಗೆ ಹೇಳಿದರು ಮಾನಸ ದಿನಕರ್‌.

ಚಿತ್ರದಲ್ಲಿ ಪ್ರಜ್ವಲ್‌ ಕೋಟ್ಯಾಧಿಪತಿಯ ಮಗನಾಗಿ ನಟಿಸುತ್ತಿದ್ದಾರೆ. “ಇಂದಿನ ಟ್ರೆಂಡ್‌ಗೆ ತಕ್ಕಂತಹ ಕಥೆ ಇದು. ಜಾಲಿಯಾಗಿರುವ ಪಾತ್ರ ಮುಂದೆ ಒಂದು ಸಮಸ್ಯೆಗೆ ಸಿಕ್ಕಿಕೊಳ್ಳುತ್ತದೆ. ಅದರಿಂದ ಹೇಗೆ ಪಾರಾಗುತ್ತಾರೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎನ್ನುವುದು ಪ್ರಜ್ವಲ್‌
ಮಾತು. ಚಿತ್ರದಲ್ಲಿ ಸುಧಾರಾಣಿ, ಪ್ರಜ್ವಲ್‌ ಅವರ ತಾಯಿಯಾಗಿ ನಟಿಸುತ್ತಿದ್ದಾರೆ. ಇದು ಕೂಡಾ ಪ್ರಜ್ವಲ್‌ಗೆ ಖುಷಿಕೊಟ್ಟಿದೆ. “ನನ್ನ ತಂದೆ ಜೊತೆ ಸುಧಾರಾಣಿಯವರು ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರ ಜೊತೆ ನನಗೆ ನಟಿಸುವ ಅವಕಾಶ ಸಿಕ್ಕಿದೆ’ ಎಂದು ಹೇಳಿಕೊಂಡ
ಪ್ರಜ್ವಲ್‌, ಇಡೀ ತಂಡದ ಗುಣಗಾನ ಮಾಡಿದರು.

ಚಿತ್ರದಲ್ಲಿ ಪ್ರೇಮ್‌ ಸಾಫ್ಟ್ವೇರ್‌ ಕ್ಷೇತ್ರದ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಮಾರು 11 ವರ್ಷಗಳ ನಂತರ ಮತ್ತೆ ದಿನಕರ್‌ ನಿರ್ದೇಶನದಲ್ಲಿ ನಟಿಸುವ ಖುಷಿ ಪ್ರೇಮ್‌ಗಿದೆ. “ಸಾಮಾನ್ಯವಾಗಿ ಹೊಸಬರು ನನಗೆ ಅವಕಾಶ ಕೊಡುತ್ತಾರೆ. ಅಂದು ದಿನಕರ್‌ ತಮ್ಮ ಮೊದಲ ನಿರ್ದೇಶನದಲ್ಲಿ ನನಗೆ ಅವಕಾಶ ಕೊಟ್ಟರು. ಈಗ ಅವರ ಪತ್ನಿ ಮಾನಸ ಅವರು ಮೊದಲ ಬಾರಿಗೆ ಕಥೆ ಬರೆದ ಸಿನಿಮಾದಲ್ಲೂ ನನಗೆ ಅವಕಾಶ ಸಿಕ್ಕಿದೆ. ಸಾಫ್ಟ್ವೇರ್‌ ಉದ್ಯಮದಲ್ಲಿರುವ ಒಬ್ಬ ವ್ಯಕ್ತಿ. ಇಡೀ ಕಥೆ ತುಂಬಾ ಚೆನ್ನಾಗಿದೆ’ ಎಂಬುದು ಪ್ರೇಮ್‌ ಮಾತು.

ಚಿತ್ರದಲ್ಲಿ ಹರಿಪ್ರಿಯಾ ನಾಯಕಿ. ತುಂಬಾ ಕನಸು ಕಟ್ಟಿಕೊಂಡು ತನ್ನ ಜೀವನದ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ದಿಟ್ಟ ಹುಡುಗಿಯ ಪಾತ್ರವಂತೆ. “ಮಾನಸ ಅವರ ಕಥೆ ತುಂಬಾ ಸ್ಟ್ರಾಂಗ್‌ ಆಗಿದೆ. ಅವರೊಬ್ಬ ಹೆಣ್ಣಾಗಿ ನಾಯಕಿ ಪಾತ್ರವನ್ನು ತುಂಬಾ ವಿಭಿನ್ನವಾಗಿ ನೋಡಿದ್ದಾರೆ. ರಶ್ಮಿ ಎನ್ನುವ ವಯಸ್ಸಿಗೆ ತಕ್ಕುದಾದ ಪಾತ್ರ ಸಿಕ್ಕಿದೆ’ ಎನ್ನುತ್ತಾರೆ ಹರಿಪ್ರಿಯಾ. ಸುಧಾರಾಣಿ ಕೂಡಾ ಚಿತ್ರದಲ್ಲಿ ನಟಿಸುತ್ತಿದ್ದು, ಒಳ್ಳೆಯ ತಂಡದ ಜೊತೆ ಕೆಲಸ ಮಾಡುತ್ತಿರುವ ಖುಷಿ ಹಂಚಿಕೊಂಡರು.

ಈ ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. ದಿನಕರ್‌ ಅವರ ಮೊದಲ ಸಿನಿಮಾ “ಜೊತೆ ಜೊತೆಯಲಿ’ ಮೂಲಕ ಸಂಗೀತ ನಿರ್ದೇಶಕರಾದ ಹರಿಕೃಷ್ಣ ಈಗ 100 ಸಿನಿಮಾಗಳನ್ನು ಮಾಡಿದ್ದಾರೆ. ದಿನಕರ್‌ ಜೊತೆ ಕೆಲಸ ಮಾಡುವ ಅನುಭವ ಹಂಚಿಕೊಂಡರು ಹರಿಕೃಷ್ಣ. ಚಿತ್ರಕ್ಕೆ
ಕವಿರಾಜ್‌, ಯೋಗರಾಜ್‌ ಭಟ್‌ ಹಾಗೂ ನಾಗೇಂದ್ರ ಪ್ರಸಾದ್‌ ಅವರ ಸಾಹಿತ್ಯವಿದೆ. ರಘು ಶಾಸ್ತ್ರಿ ಸಂಭಾಷಣೆ, ನಿರಂಜನಬಾಬು ಛಾಯಾಗ್ರಹಣ ಚಿತ್ರಕ್ಕಿದೆ. ಸುಮಾರು 30 ದಿನಗಳ ಕಾಲ ಗೋವಾ ಹಾಗೂ 20 ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. 

ರವಿಪ್ರಕಾಶ್‌ ರೈ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.