ಬಾಪು ಹುಡುಕಾಟದಲ್ಲಿ ,ಮೊದಲು ಕಿರುಚಿತ್ರ ಆಮೇಲೆ ಪೂರ್ಣ ಚಿತ್ರ…


Team Udayavani, Oct 13, 2017, 6:45 AM IST

baapu.jpg

ಕನ್ನಡ ಚಿತ್ರರಂಗದಲ್ಲೊಂದು ಹೊಸ ಟ್ರೆಂಡ್‌ ಶುರುವಾಗಿದೆ. ನಿರ್ದೇಶಕರಾಗಬೇಕೆಂದು ಬಯಸುವ ಬಹುತೇಕ ಹೊಸಬರು, ಮೊದಲು ಒಂದು ಶಾರ್ಟ್‌ಫಿಲ್ಮ್ ಮಾಡಿ, ಆ ಬಳಿಕ ಸಿನಿಮಾ ನಿರ್ದೇಶನಕ್ಕೆ ಅಣಿಯಾಗುತ್ತಾರೆ. ಈಗ ಇಲ್ಲಿ ಹೇಳ ಹೊರಟಿರುವ ವಿಷಯ ಕೂಡ ಅದೇ. “ಇನ್‌ ಸರ್ಚ್‌ ಆಫ್ ಬಾಪು’ ಇದು ಕಿರುಚಿತ್ರ. ಈ ಮೂಲಕ ನಿರ್ದೇಶಕನ ಪಟ್ಟ ಅಲಂಕರಿಸಿದ್ದಾರೆ ಆರ್ಯನ್‌ ಶಿವಕುಮಾರ್‌. ಈ ಶಾರ್ಟ್‌ ಫಿಲ್ಮ್ ಮಾಡೋಕೆ ಕಾರಣ, ಸುಮನ್‌ ಶೆಟ್ಟಿ. ಒಮ್ಮೆ ಶಿವಕುಮಾರ್‌, ಒಂದು ಕಥೆ ಹಿಡಿದು ಸಿನಿಮಾ ಮಾಡಿ ಅಂತ ಸುಮನ್‌ ಶೆಟ್ಟಿ ಬಳಿ ಹೋದರಂತೆ. ಆಗ, ಸುಮನ್‌ ಶೆಟ್ಟಿ, “ನನಗೆ ಸಿನಿಮಾ ಅನುಭವ ಇಲ್ಲ, ಏಕಾಏಕಿ ಸಿನಿಮಾ ನಿರ್ಮಾಣಕ್ಕೆ ಮುಂದಾಗೋದು ನನಗಿಷ್ಟವಿಲ್ಲ. ನೀವೊಂದು ಶಾರ್ಟ್‌ ಫಿಲ್ಮ್ ಮಾಡಿಕೊಂಡು ಬನ್ನಿ, ಅದು ಇಷ್ಟವಾದರೆ, ಆಮೇಲೆ ಸಿನಿಮಾ ನಿರ್ಮಾಣಕ್ಕೆ ಪ್ರಯತ್ನ ಮಾಡ್ತೀನಿ’ ಅಂದರಂತೆ. ಅವರ ಮಾತನ್ನ ಪಾಲಿಸಿದ ನಿರ್ದೇಶಕ ಆರ್ಯನ್‌ ಶಿವಕುಮಾರ್‌, “ಇನ್‌ ಸರ್ಚ್‌ ಆಫ್ ಬಾಪು’ ಹೆಸರಿನ ಶಾರ್ಟ್‌ಫಿಲ್ಮ್ ಮಾಡಿದ್ದಾರೆ. ಆ ಚಿತ್ರದಲ್ಲಿ ನಿರ್ಮಾಪಕ ಸುಮನ್‌ಶೆಟ್ಟಿ ಅವರೇ ಹೀರೋ ಆಗಿಯೂ ನಟಿಸಿದ್ದಾರೆ. ಇತ್ತೀಚೆಗೆ ಆ ಕಿರುಚಿತ್ರ ಪ್ರದರ್ಶನ ಮಾಡಿ, ಪತ್ರಕರ್ತರ ಮುಂದೆ ಅನುಭವ ಹಂಚಿಕೊಂಡರು.

ಮೊದಲು ಮಾತಿಗಿಳಿದ ನಿರ್ದೇಶಕ ಆರ್ಯನ್‌ ಶಿವಕುಮಾರ್‌, “ಇಲ್ಲಿ  ಮೋಹನ ಎಂಬ ವ್ಯಕ್ತಿ ಬಾಲ್ಯದಿಂದಲೂ ಗಾಂಧಿ ಬಗ್ಗೆ ಆಸಕ್ತಿ ಇಟ್ಟುಕೊಂಡಾತ. ಅವರ ತತ್ವ, ಆದರ್ಶ ಹಾಗು ಮೌಲ್ಯ ಮೈಗೂಡಿಸಿಕೊಂಡು, ಇಂದಿನ ಸಮಾಜದಲ್ಲಿರುವ ಎಲ್ಲರೂ ಗಾಂಧಿ ಆದರ್ಶ ಮೈಗೂಡಿಸಿಕೊಳ್ಳಬೇಕೆಂಬುದು ಅವನ ಆಶಯ. ಆದರೆ, ಸಮಾಜ ಮಾತ್ರ ಅವರ ತತ್ವ, ಸಿದ್ಧಾಂತ ಒಪ್ಪುವುದಿಲ್ಲ. ಅವನು ಜನರನ್ನು ಬದಲಾಯಿಸುತ್ತಾನಾ ಅಥವಾ ಅವನೇ ಬದಲಾಗುತ್ತಾನಾ ಎಂಬುದು ಕಥೆ’ ಎಂದು ವಿವರಿಸಿದ ನಿರ್ದೇಶಕರು, 23 ನಿಮಿಷಗಳ ಈ ಕಿರುಚಿತ್ರ, ಐದು ದಿನಗಳ ಕಾಲ ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ ಎಂದು ಹೇಳುತ್ತಾರೆ ಅವರು.

ನಿರ್ಮಾಪಕ ಸುಮನ್‌ ಶೆಟ್ಟಿ, ಇಲ್ಲಿ ಮೋಹನ ಎಂಬ ಪಾತ್ರ ನಿರ್ವಹಿಸಿದ್ದಾರಂತೆ. ಅವರಿಗೆ ಸಿನಿಮಾ ಹೊಸ ಪ್ರಪಂಚ. ನಿರ್ದೇಶಕರು ಸಿನಿಮಾ ಮಾಡೋಕೆ ಬಂದಾಗ, ಮೊದಲು ಕಿರುಚಿತ್ರ ಮಾಡಿ ಆಮೇಲೆ ನೋಡೋಣ ಅಂತ ಹೇಳಿದ್ದಕ್ಕೆ, ಈ ಶಾರ್ಟ್‌ ಫಿಲ್ಮ್ ಪೂರ್ಣಗೊಂಡಿದೆ. “ನಾನಿಲ್ಲಿ ಹಣಕ್ಕಾಗಿ ಚಿತ್ರ ಮಾಡಿಲ್ಲ. ಸಿನಿಮಾ ಮೇಲೆ ಪ್ರೀತಿ ಇತ್ತು. ನನಗೂ ಗಾಂಧಿ ಇಷ್ಟ. ಅವರಂತೆ ಇತರೆ ಮಹಾನ್‌ ಪುರುಷರ ತತ್ವಗಳೂ ನನಗಿಷ್ಟ’ ಅಂದರು ಅವರು.

ನಾಯಕಿಯಾಗಿ ನಟಿಸಿರುವ ಪಲ್ಲವಿ ಶೆಟ್ಟಿ ಅವರಿಗೂ ಗಾಂಧಿ ಕುರಿತಾದ ಕಿರುಚಿತ್ರ ಅಂದಾಕ್ಷಣ, ಒಪ್ಪಿ ನಟಿಸಿದ್ದಾರಂತೆ. ಇದೊಂದು ಮೌಲ್ಯವುಳ್ಳ ಕಥೆ ಅಂದರು ಅವರು. ಇನ್ನು, ಇಲ್ಲಿ ಕಲಾವಿದರಾದ ಅರವಿಂದ್‌ರಾಜ್‌, ಅರ್ಜುನ್‌ ಕೃಷ್ಣ, ಸಂತೋಷ್‌, ರಂಜಿತ್‌, ಪಲ್ಲವಿಶೆಟ್ಟಿ, ಯಮುನ, ರವಿಕುಮಾರ್‌ ಇತರರು ನಟಿಸಿದ್ದಾರೆ. ಸೋಮು ಗಂಗಣ್ಣ ಅವರು ಕ್ಯಾಮೆರಾ ಹಿಡಿದರೆ, ವಿಜೇತ್‌ ಚಂದ್ರ ಹಿನ್ನೆಲೆ ಸಂಗೀತ ನೀಡಿದ್ದಾರೆ. ಭುವ ಸಂಭಾಷಣೆ ಬರೆದಿದ್ದಾರೆ.

ಟಾಪ್ ನ್ಯೂಸ್

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಲೋಕಸಭೆ ಅಖಾಡ 2024: ಸವಾಲು ಗೆದ್ದ ಶೆಟ್ಟರ್‌ ಮುಂದಿದೆ ಅಗ್ನಿ ಪರೀಕ್ಷೆ

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

ಬಾಗಲಕೋಟೆ: ಕೋಟೆ ನಾಡಿನ ದಾಹ ತೀರಿಸುವ ದಾನಿಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.