CONNECT WITH US  
echo "sudina logo";

ಚಿತ್ರಸಂತೆಯ ಜೊತೆಗೆ ಹಾಡುಗಳ ಸಂತೆ

ಆ್ಯಕ್ಷನ್‌ + ಮನರಂಜನೆ = ಸೀಜರ್‌

ಅದು "ಸೀಜರ್‌' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ. ಅಂದು ಹಾಡು, ಕುಣಿತ, ಮಾತು, ಕಥೆ, ತಮಾಷೆ ಎಲ್ಲವೂ ಜೋರಾಗಿತ್ತು. ಅದಕ್ಕೂ ಮುನ್ನ ಪತ್ರಕರ್ತರ ಜತೆ ತಂಡದ ಮಾತುಕತೆ ಇತ್ತು. ಅಂದು ಸಮಾರಂಭ, ಪತ್ರಿಕಾಗೋಷ್ಠಿ ಎಲ್ಲವೂ ತಡವಾಯ್ತು. ಕಾರಣ, ಅಂದು ಚಿತ್ರಸಂತೆ. ಅಶೋಕ ಹೋಟೆಲ್‌ನ ರಸ್ತೆ ಜನಜಂಗುಳಿಯಿಂದ ತುಂಬಿತ್ತು. ಕಿಕ್ಕಿರಿದ ಜನರ ಮಧ್ಯೆ ದಾಟಿ ಹೋಗುವಷ್ಟರೊಳಗೆ ಸಮಯ ಮೀರಿತ್ತು. ಹಾಗಾಗಿ ಐದು ಗಂಟೆಗೆ ಕರೆದಿದ್ದ ಪತ್ರಿಕಾಗೋಷ್ಠಿ ಒಂದು ಗಂಟೆ ತಡವಾಗಿಯೇ ಪ್ರಾರಂಭವಾಯಿತು.

"ಸೀಜರ್‌' ಚಿತ್ರಕ್ಕೆ ಚಿರು ನಾಯಕನಾದರೂ, ರವಿಚಂದ್ರನ್‌, ಪ್ರಕಾಶ್‌ ರೈ ಮತ್ತು ಪಾರುಲ್‌ಯಾದವ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇವರು ಅಂದಿನ ಕಾರ್ಯಕ್ರಮಕ್ಕೆ ಗೈರಾಗಿದ್ದರು. ವಿನಯ್‌ಕೃಷ್ಣ ಅವರಿಗೆ "ಸೀಜರ್‌' ಮೊದಲ ಚಿತ್ರ. ಕಥೆ, ಯೂ ಇದೆ. ಬೆಂಗಳೂರಲ್ಲಿ ನಡೆದ ಒಂದು ಘಟನೆ ಇಟ್ಟುಕೊಂಡು ಕಥೆ ಮಾಡಲಾಗಿದೆ. ದಿನಕ್ಕೆ ನೂರಾರು ವಾಹನಗಳು ಸೀಜ್‌ ಆಗುತ್ತವೆ. ಸೀಜ್‌ ಆದ ಬಳಿಕೆ ಏನೆಲ್ಲಾ ಅವಾಂತರಗಳು ನಡೆಯುತ್ತವೆ ಎಂಬುದನ್ನಿಲ್ಲಿ ಹೇಳಲಾಗಿದೆ. ರವಿಚಂದ್ರನ್‌ ಅವರದು ಪೈನಾನ್ಷಿಯರ್‌ ಪಾತ್ರ. ಪ್ರಕಾಶ್‌ ರೈ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಾಧು ಕೋಕಿಲ ನಗಿಸಲಿದ್ದಾರೆ. ಬೆಂಗಳೂರು ಹಾಗೂ ಶಬರಿಮಲೈನಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರ ತಡವಾಗಿದೆ. ಕಾರಣ, ಇಲ್ಲಿ ಸಾಕಷ್ಟು ತಾಂತ್ರಿಕ ಕೆಲಸಗಳಿದ್ದವು. ಒಳ್ಳೆಯ ಅವಕಾಶ ಕೊಟ್ಟ ನಿರ್ಮಾಪಕರಿಗೆ ಮತ್ತು ಸಹಕರಿಸಿದ ಕಲಾವಿದರು, ತಂತ್ರಜ್ಞರಿಗೆ ನಾನು ಆಭಾರಿ' ಎಂದರು ನಿರ್ದೇಶಕರು.

ಚಿರಂಜೀವಿ ಸರ್ಜಾ ಅವರಿಗೆ ರವಿಚಂದ್ರನ್‌ ಅವರೊಂದಿಗೆ ಕೆಲಸ ಮಾಡಿದ್ದು ಮರೆಯದ ಅನುಭವವಂತೆ. "ಚಿತ್ರೀಕರಣದಲ್ಲಿ ರವಿ ಸರ್‌ ಅವರಿಂದ ಬೇಕಾದಷ್ಟು ಕಲಿತಿದ್ದೇನೆ. ಇದೊಂದು ಸೇಡಿನ ಕಥೆ ಎನ್ನಬಹುದು. ಸೀಜ್‌ ಮಾಡುವ ವಾಹನಗಳ ಹಿಂದೆ ಒಂದೊಂದು ಘಟನೆ ಇರುತ್ತೆ. ಅದೇ ಚಿತ್ರದ ಹೈಲೈಟ್‌' ಅಂದರು ಚಿರು.

ತೆಲುಗು ನಟ ನಾಗಿನೀಡು ಅವರಿಲ್ಲಿ ನೆಗೆಟಿವ್‌ ಪಾತ್ರ ಮಾಡಿದ್ದು, ಪ್ರಕಾಶ್‌ ರೈ ಅವರ ಗ್ಯಾಂಗ್‌ನಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಾರೆ. ನಿರ್ಮಾಪಕ ತ್ರಿವಿಕ್ರಮ ಅವರಿಗಿದು ಎರಡನೇ ಚಿತ್ರ. ವಿಜಯ್‌ ಚೆಂಡೂರು, ಡ್ಯಾನಿ ಕುಟ್ಟಪ್ಪ, ಸಂಭಾಷಣೆಕಾರ ಶ್ರೀಕಾಂತ್‌, ಛಾಯಗ್ರಾಹಕ ರಾಜೇಶ್‌ ಕಟ್ಟ ಇತರರು ಇದ್ದರು.

Trending videos

Back to Top