ಮಗನ ಗೂಗ್ಲಿ; ಅಪ್ಪನ ಸಹಕಾರ 

Team Udayavani, Mar 16, 2018, 8:15 AM IST

a-21.jpg

ಕನ್ನಡದಲ್ಲಿ ಮಕ್ಕಳಿಗಾಗಿ ಸಿನಿಮಾ ನಿರ್ಮಿಸುವವರ ಸಂಖ್ಯೆಗೇನೂ ಕಮ್ಮಿಯಿಲ್ಲ. ಆ ಸಾಲಿಗೆ “ಬಿಂದಾಸ್‌ ಗೂಗ್ಲಿ’ ಹೊಸ ಸೇರ್ಪಡೆ ಎನ್ನಬಹುದು. ಸದ್ದಿಲ್ಲದೆ ಶೇ. 95ರಷ್ಟು ಚಿತ್ರೀಕರಣ ಮುಗಿಸಿದೆ ಚಿತ್ರತಂಡ. ನಿರ್ದೇಶಕ ಸಂತೋಷ್‌ಕುಮಾರ್‌, ತಮ್ಮ ತಂಡದೊಂದಿಗೆ ಮಾಹಿತಿ ಹಂಚಿಕೊಳ್ಳಲೆಂದೇ ಪತ್ರಕರ್ತರ ಮುಂದೆ ಬಂದಿದ್ದರು.

ಅಂದು ಮೊದಲು ಮಾತು ಶುರು ಮಾಡಿದ್ದು, ನಿರ್ಮಾಪಕ ವಿಜಯ್‌ ಕುಮಾರ್‌. “ನನ್ನ ಮಗ ಆಕಾಶ್‌ಗೆ ಸಿನಿಮಾ ಮೇಲೆ ಆಸಕ್ತಿ ಇತ್ತು. ಮುಂಬೈನ ಅನುಪಮ್‌ ಖೇರ್‌ ನಟನೆ ಶಾಲೆಯಲ್ಲಿ ಕಲಿತು ಬಂದ ಬಳಿಕ ಸಂತೋಷ್‌ ಒಂದು ಕಥೆ ಹೇಳಿದರು. ಮಗನನ್ನು ಪರಿಚಯಿಸಲು ಒಳ್ಳೆಯ ಕಥೆ ಎನಿಸಿತು. ಆದರೆ, ಚಿತ್ರದಲ್ಲಿ ಡ್ಯಾನ್ಸ್‌ ಕೋಚ್‌ ಪಾತ್ರಕ್ಕೆ ಹಲವು ನಟರ ಬಳಿ ಹೋಗಿ ಕೇಳಿಕೊಂಡರೂ ಯಾರೊಬ್ಬರೂ ಒಪ್ಪಲಿಲ್ಲ. ಕೊನೆಗೆ ಧರ್ಮ ಕೀರ್ತಿರಾಜ್‌ ಅವರು ಪಾತ್ರ ಮಾಡಲು ಒಪ್ಪಿದ್ದರಿಂದ ಚಿತ್ರ ಶುರುವಾಯಿತು. ಇದು ಡ್ಯಾನ್ಸ್‌ ಕುರಿತ ಸಿನಿಮಾ. ಇಲ್ಲಿ ಒಳ್ಳೆಯ ಸಂದೇಶವೂ ಇದೆ. ಈಗಿನ ಟ್ರೆಂಡ್‌ಗೆ ತಕ್ಕ ಚಿತ್ರ ಮಾಡಿರುವ ಖುಷಿ ನಮ್ಮದು’ ಎಂದರು ವಿಜಯ್‌ಕುಮಾರ್‌.

ನಿರ್ದೇಶಕ ಸಂತೋಷ್‌ ಕುಮಾರ್‌ ಮಾತನಾಡಿ, “ಇಲ್ಲಿ ಕಥೆ ಮತ್ತು ಪಾತ್ರ ಮುಖ್ಯ. ಮೌಲ್ಯವುಳ್ಳ ಸಂದೇಶ ಇಲ್ಲಿದೆ. ಬರುವ ಯಾವ ಪಾತ್ರವೂ ಸುಮ್ಮನೆ ಬಂದು ಹೋಗುವುದಿಲ್ಲ. ಎಲ್ಲಾ ಪಾತ್ರಕ್ಕೂ ಆದ್ಯತೆ ನೀಡಲಾಗಿದೆ.  ಒಂದು ಕಾಲೇಜ್‌ ಸುತ್ತ ನಡೆಯುವ ಕಥೆ ಇಲ್ಲಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಎಷ್ಟು ಮುಖ್ಯವೋ, ಕಲೆ ಕೂಡ ಅಷ್ಟೇ ಮುಖ್ಯ. ಬಿಂದಾಸ್‌ ಆಗಿರುವ ವ್ಯಕ್ತಿತ್ವದ ಹುಡುಗ, ಡ್ಯಾನ್ಸ್‌ ಆಯ್ಕೆ ಮಾಡಿಕೊಂಡು ಏನು ಸಾಧನೆ ಮಾಡ್ತಾನೆ ಎಂಬುದು ಕಥೆ’ ಎಂದು ಹೇಳಿದರು. “ಇದು ಬಿಂದಾಸ್‌ ಬ್ಯಾನರ್‌’ ಅಂತ ಮಾತಿಗಿಳಿದರು ಧರ್ಮ ಕೀರ್ತಿರಾಜ್‌. “ನನಗೆ ಈ ಕಥೆ ಕೇಳಿದಾಗ, ಕೋಚ್‌ ಪಾತ್ರ ತುಂಬ ಹಿಡಿಸಿತು. ಒಂದು ಬದಲಾವಣೆ ಬೇಕಿತ್ತು. ಹೊಸ ತರಹದ ಪ್ರಯತ್ನ ಇಲ್ಲಿದೆ. ಒಬ್ಬ ಡ್ಯಾನ್ಸರ್‌ನ ಆಸೆ ಈಡೇರಿಸುವ ಮೂಲಕ ಅವನೊಳಗಿನ ಬದಲಾವಣೆಗೆ
ಕಾರಣವಾಗುವಂತಹ ಪಾತ್ರ ನನ್ನದು. ಸುಮಾರು 40 ದಿನಗಳ ಕಾಲ ಬೆಳಗಾವಿಯಲ್ಲಿ ಚಿತ್ರೀಕರಣವಾಗಿದೆ. ಇಲ್ಲಿ ನಾನು ಹೀರೋ ಅಂತೇನಿಲ್ಲ. ಕಥೆ ಮುಖ್ಯ. ಆಕಾಶ್‌ಗೆ ಮೊದಲ ಚಿತ್ರವಾದರೂ ಅನುಭವಿಯಂತೆ ನಟಿಸಿದ್ದಾನೆ ಎಂದು ಆಕಾಶ್‌ಗೆ ಮಾರ್ಕ್ಸ್ ಕೊಟ್ಟರು ಧರ್ಮ. ನಾಯಕ ಆಕಾಶ್‌ಗೆ ಇದು ಮೊದಲ ಚಿತ್ರ. “ಪೂರ್ಣ ತಯಾರಿಯೊಂದಿಗೇ ನಾನು ಕ್ಯಾಮೆರಾ ಮುಂದೆ ನಿಂತಿದ್ದೇನೆ. ಚಿಕ್ಕಂದಿನಲ್ಲಿ ಇದ್ದ ಆಸೆ ಈಗ ಈಡೇರಿದೆ. ಇಡೀ ಕುಟುಂಬ ನನಗಾಗಿ ಈ ಚಿತ್ರ ಮಾಡಿದೆ. ಶೇ.100 ರಷ್ಟು ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದೇನೆ ಎಂಬ ನಂಬಿಕೆ ನನ್ನದು. ಒಬ್ಬ ಡ್ಯಾನ್ಸರ್‌ ಸ್ಪರ್ಧೆಯಲ್ಲಿ ಪಾಲ್ಗೊಂಡು ತನ್ನ ಬದುಕನ್ನು ಹೇಗೆ ರೂಪಿಸಿಕೊಳ್ತಾನೆ ಎಂಬ ಕಥೆ
ಇಲ್ಲಿದೆ. ಹೊಸ ಪ್ರತಿಭೆಗೆ ನಿಮ್ಮ ಸಹಕಾರ ಇರಲಿ’ ಎಂದರು ಆಕಾಶ್‌.

ಸಂಗೀತ ನಿರ್ದೇಶಕ ವಿನು ಮನಸು ಐದು ಹಾಡುಗಳ ಜೊತೆಗೆ ಎರಡು ತುಣುಕು ನೀಡಿದ್ದಾರಂತೆ. ಪತ್ರಕರ್ತರ ಮುಂದೆ ಎಂದು ಹೆಚ್ಚು ಮಾತನಾಡದ ಮ್ಯಾಥುರಾಜನ್‌ ಅಂದು ಸಿಕ್ಕಾಪಟ್ಟೆ ಮಾತನಾಡಿದರು. ಮಮತಾ ರಾವತ್‌, ನಿಮಿಕಾ ರತ್ನಾಕರ್‌ ಮತ್ತು ಶಿಲ್ಪಾ ನಾಯಕಿಯರು.

ಟಾಪ್ ನ್ಯೂಸ್

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.