ಒಂಥರಾ ಲೋಕದ ಬಣ್ಣದ ಹಾಡುಗಳು

Team Udayavani, May 11, 2018, 9:30 AM IST

14.jpg

ಎಲ್ಲಾ ಸರಿ, ಹೊಸಬರು ಕರೆದರೆ ಶಿವಣ್ಣ ಬರ್ತಾರಾ? ಹಾಗೊಂದು ಪ್ರಶ್ನೆಯನ್ನು ನಿರೂಪಕ ಕೇಳಿಯೇಬಿಟ್ಟರು. ಮೈಕು ಶಿವರಾಜಕುಮಾರ್‌ ಅವರ ಕೈಯಲ್ಲೇ ಇತ್ತು. “ನಾನಂತೂ 24 ಗಂಟೆ ಸಿಗ್ತಿàನಿ. ಎಷ್ಟೋ ಜನ ಬಂದು ಮಾತಾಡಿಸ್ತಾರೆ. ಸೆಲ್ಫಿ ತೆಗೆಸಿಕೊಳ್ತಾರೆ. ಹಾಗೇನಿಲ್ಲ. ನಾನು ಸಿಗೋದು ಸುಲಭ. ಯಾರು ಬೇಕಾದರೂ ಸಂಪರ್ಕ ಮಾಡಬಹುದು’ ಅಂತ ಶಿವರಾಜಕುಮಾರ್‌ ಹೇಳುತ್ತಿದ್ದಂತೆ ಸಭಾಂಗಣದಲ್ಲಿ ಜೋರು ಚಪ್ಪಾಳೆ.

ಅಂದಹಾಗೆ, ಶಿವರಾಜಕುಮಾರ್‌ ಅವರಿಗೆ ಪ್ರಶ್ನೆ ಕೇಳಿದ್ದು, ಅವರು ಉತ್ತರ ಕೊಟ್ಟಿದ್ದು, ಇವೆಲ್ಲವೂ ಆಗಿದ್ದು “ಒಂಥರಾ ಬಣ್ಣಗಳು’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ. ಕಿರಣ್‌ ಶ್ರೀನಿವಾಸ್‌, ಪ್ರತಾಪ್‌ ನಾರಾಯಣ್‌, ಪ್ರವೀಣ್‌, ಸೋನು, ಹಿತ ಚಂದ್ರಶೇಖರ್‌ ಮುಂತಾದವರು ನಟಿಸಿರುವ ಈ ಚಿತ್ರಕ್ಕೆ ಬಿ.ಜೆ. ಭರತ್‌ ಸಂಗೀತ ಸಂಯೋಜಿಸಿದ್ದಾರೆ. ಮನೋಹರ್‌ ಜೋಷಿ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದ ಹಾಡುಗಳನ್ನು ಶಿವರಾಜಕುಮಾರ್‌ ಮತ್ತು ಸುದೀಪ್‌ ಒಟ್ಟಿಗೆ ಬಿಡುಗಡೆ ಮಾಡಬೇಕಿತ್ತು. ಆದರೆ, ಶಿವರಾಜಕುಮಾರ್‌ ಅವರು ಬೇಗ ಹೋಗಬೇಕಿದ್ದರಿಂದ ಮತ್ತು ಸುದೀಪ್‌ ಸ್ವಲ್ಪ ತಡವಾಗಿ ಬಂದಿದ್ದರಿಂದ, ಬೇರೆ ಬೇರೆ ಬಿಡುಗಡೆ ಮಾಡುವಂತಾಯಿತು.

ಚಿತ್ರದ ಟ್ರೇಲರ್‌ ಮತ್ತು ಒಂದು ಹಾಡು ತೋರಿಸಿಯೇ, ಶಿವರಾಜಕುಮಾರ್‌ ಅವರನ್ನು ವೇದಿಕೆಗೆ ಬರಮಾಡಿಕೊಳ್ಳಲಾಯಿತು. ಟ್ರೇಲರ್‌ ಮತ್ತು ಹಾಡು ಮೆಚ್ಚಿಕೊಂಡ ಅವರು, “ಚಿತ್ರದ ಹೆಸರೇ ಬಹಳ ಚೆನ್ನಾಗಿದೆ. ಪ್ರತಿಯೊಬ್ಬರ ಜೀವನದಲ್ಲೂ ಹಲವು ಬಣ್ಣಗಳಿರುತ್ತವೆ. ನಾವೆಲ್ಲಾ ಬಣ್ಣಗಳಲ್ಲೇ ತೇಲುತ್ತಿರುತ್ತೀವಿ. ಚಿತ್ರ ನೋಡಬೇಕು ಅಂತ ಮನಸ್ಸಾಗುತ್ತಿದೆ. ನಾನು ಬಾಯಿ ಮಾತಿಗೆ ಹೇಳುತ್ತಿಲ್ಲ. ಮನಸಾರೆ ಹೇಳುತ್ತಿದ್ದೀನಿ. ಚಿತ್ರದ ಪ್ರಮೋಷನ್‌ಗೆ ಕರೆದರೆ ನಾನು ಬರುತ್ತೀನಿ’ ಎಂದರು. ಎಲ್ಲರ ಬಗ್ಗೆಯೂ ಎರಡೆರೆಡು ಮಾತುಗಳಾಡುವಷ್ಟರಲ್ಲಿ ಸಭಿಕರ ಮಧ್ಯೆ, ಗಾಯಕ ಸಂಜಿತ್‌ ಹೆಗ್ಡೆ ಅವರನ್ನು ಗಮನಿಸಿದ ಶಿವರಾಜಕುಮಾರ್‌, ಅವರನ್ನು ವೇದಿಕೆ ಮೇಲೆ ಕರೆಸಿದರು. ಡಾ. ರಾಜಕುಮಾರ್‌ ಹಾಡಿರುವ “ಯಾವ ಕವಿಯು ಬರೆಯಲಾರ …’ ಹಾಡನ್ನು ಹಾಡಿಸುವುದರ ಜೊತೆಗೆ, ತಾನು ಸಂಜಿತ್‌ ಅವರ ಫ್ಯಾನ್‌ ಎಂದು ಹೇಳಿಕೊಂಡರು.

ಆ ನಂತರ ಮೈಕು ಚಿತ್ರತಂಡದವರ ಕೈಗೆ ಹೋಯಿತು. ಇಂಥದ್ದೊಂದು ಚಿತ್ರವನ್ನು ಬಿಟ್ಟಿದ್ದರೆ ತಾನು ಮುಠಾuಳನಾಗುತ್ತಿದ್ದೆ ಎಂದವರು ಕಿರಣ್‌ ಶ್ರೀನಿವಾಸ್‌. “ಪ್ರಾಮಾಣಿಕ ಜನ ಮಾಡಿರುವ ಪ್ರಾಮಾಣಿಕ ಸ್ಕ್ರಿಪ್ಟ್ ಇದು. ನಾನು ಮಿಸ್‌ ಮಾಡಿಕೊಂಡಿದ್ದರೆ ಮುಠಾuಳನಾಗುತ್ತಿದ್ದೆ. ಈ ಚಿತ್ರಕ್ಕಾಗಿ ಹಲವು ಕಡೆ ಪ್ರಯಾಣ ಮಾಡಿದ್ದೇವೆ. ಪಾತ್ರದ ಜೊತೆಗೆ ವೈಯಕ್ತಿಕವಾಗಿ ನನ್ನನ್ನು ನಾನು ಕಂಡುಕೊಳ್ಳುವಂತಾಯಿತು’ ಎಂದರು. ಪ್ರವೀಣ್‌ಗೆ ನಿರ್ದೇಶಕ ಸುನೀಲ್‌ ಭೀಮರಾವ್‌ ಒಮ್ಮೆ ಕೋಪ ಮಾಡಿಕೊಳ್ಳುವುದನ್ನು ನೋಡುವ ಆಸೆ ಇತ್ತಂತೆ. ಆದರೆ, ಒಮ್ಮೆಯೂ ಅದು ಸಾಧ್ಯವಾಗಲಿಲ್ಲ ಎಂದು ಬೇಸರಿಸಿಕೊಂಡರು. ನಿರ್ದೇಶಕರು ಒಮ್ಮೆಯಾದರೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಬೆಟ್‌ ಕಟ್ಟಿ ಸೋತಿದ್ದನ್ನು ಕಿರಣ್‌ ನೆನಪಿಸಿಕೊಂಡರು. ಇನ್ನು ಪ್ರತಾಪ್‌, “ಸಿನಿಮಾ ಶುರುವಾಗಿದ್ದು, ಮುಗಿಸಿದ್ದು ಒಂದೂ ಗೊತ್ತಾಗಲಿಲ್ಲ. ಇದೊಂದು ಅದ್ಭುತ ಅನುಭವ. ನಾನು ಹೆಚ್ಚು ಬೆರೆಯುವವನಲ್ಲ. ಈ ಚಿತ್ರದಿಂದ ತುಂಬಾ ಕಲಿತೆ’ ಎಂದರು. ನಾಯಕಿಯರಾದ ಸೋನು ಮತ್ತು ಹಿತ ಚಿತ್ರದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಚಿತ್ರದಲ್ಲಿ ನಟಿಸಿದ್ದಕ್ಕೆ ಖುಷಿಪಟ್ಟರು.

ಟಾಪ್ ನ್ಯೂಸ್

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

Mandya Lok Sabha Constituency; ಸ್ಟಾರ್‌ ಚಂದ್ರು ಪರ ಇಂದು ನಟ ದರ್ಶನ್‌ ಪ್ರಚಾರ

1-eeeeweq

RCB ತನ್ನಿಂದಾಗಿ ಕಪ್‌ ಕಳೆದುಕೊಂಡಿತು: ವಾಟ್ಸನ್‌ ಪಶ್ಚಾತ್ತಾಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Dakshina Kannada: ವಾರದಲ್ಲಿ ಐವರು ಯುವಜನರ ದಿಢೀರ್‌ ಸಾವು

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

Temperature; ರಾಜ್ಯದಲ್ಲಿ ಮತ್ತೆ ದಿಢೀರ್‌ ಏರಿದ ತಾಪಮಾನ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

1-S-M

TIME’s : 100 ಪ್ರಭಾವಿಗಳ ಪಟ್ಟಿಯಲ್ಲಿ ಸಾಕ್ಷಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

ರಾಜ್ಯದಲ್ಲಿ ಇಂದು, ನಾಳೆ ಸಿಇಟಿ; ದಾಖಲೆಯ ಮೂರೂವರೆ ಲಕ್ಷ ವಿದ್ಯಾರ್ಥಿಗಳ ನೋಂದಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.