ಸಾಫ್ಟ್ ಅಪ್ಪ, ರಗಡ್‌ ಮಗ


Team Udayavani, Jul 20, 2018, 6:00 AM IST

x-27.jpg

“ಜಸ್ಟ್‌ ಮದ್ವೇಲಿ’ ಎಂಬ ಸಿನಿಮಾ ಬಗ್ಗೆ ನೀವು ಕೇಳಿರಬಹುದು. ಮೂರ್‍ನಾಲ್ಕು ವರ್ಷಗಳ ಹಿಂದೆ ಈ ಸಿನಿಮಾ ಬಂದಿತ್ತು. ಹರೀಶ್‌ ಜಲಗೆರೆ ಈ ಸಿನಿಮಾ ಮೂಲಕ ಹೀರೋ ಆಗಿ ಎಂಟ್ರಿಕೊಟ್ಟಿದ್ದರು. ಆ್ಯಕ್ಷನ್‌ ಹೀರೋ ಆಗುವ ಲಕ್ಷಣವಿದ್ದ ಅವರು, ಆ ಚಿತ್ರದಲ್ಲಿ ಲವರ್‌ಬಾಯ್‌ ಆಗಿದ್ದರು. ಆದರೆ, ಅವರ ಆಸೆ ಹಾಗೆಯೇ ಇತ್ತು. ಔಟ್‌ ಅಂಡ್‌ ಔಟ್‌ ಆ್ಯಕ್ಷನ್‌ ಸಿನಿಮಾ ಮಾಡಬೇಕೆಂಬ ಅವರ ಆಸೆಯನ್ನು ಈಗ ಈಡೇರಿಸಿಕೊಂಡಿದ್ದಾರೆ. ಅದು “ರಾಜಣ್ಣನ ಮಗ’ ಸಿನಿಮಾ ಮೂಲಕ. ಹೌದು, ಹರೀಶ್‌ ಈಗ “ರಾಜಣ್ಣನ ಮಗ’ ಎಂಬ ಸಿನಿಮಾ ಮಾಡಿದ್ದಾರೆ. ಕೋಲಾರ ಸೀನು ಈ ಸಿನಿಮಾದ ನಿರ್ದೇಶಕರು. ಹಿಂದೆ ಹರೀಶ್‌ ಅವರಿಗೆ “ಜಸ್ಟ್‌ ಮದ್ವೇಲಿ’ ಕೂಡಾ ಇವರೇ ಮಾಡಿದ್ದರು. ಈ ಕಥೆಯನ್ನು ಹರೀಶ್‌ ಅವರಿಗಾಗಿಯೇ ಮಾಡಿದ್ದಂತೆ. 

“”ಜಸ್ಟ್‌ ಮದ್ವೇಲಿ’ ಸಮಯದಲ್ಲೇ ಆ್ಯಕ್ಷನ್‌ ಸಿನಿಮ ಮಾಡುವ ಬಗ್ಗೆ ಮಾತನಾಡಿಕೊಂಡಿದ್ದೆವು. ಈಗ ಅದು ಈಡೇರಿದೆ. ಹರೀಶ್‌ ಅವರಿಗಾಗಿಯೇ ಈ ಕಥೆಯನ್ನು ಸಿದ್ಧಪಡಿಸಿದ್ದೇನೆ’ ಎಂದರು ಸೀನು. ಇರುವೆ ಸಾಯಿಸಿಸೋದು ಕೂಡಾ ಪಾಪದ ಕೆಲಸ ಎಂದುಕೊಂಡಿರುವ, ಸಮಾಜದಲ್ಲಿ ಗೌರವಯುತವಾಗಿ ಬದುಕುತ್ತಿರುವ ತಂದೆಯ ಮಗನೊಬ್ಬ ಅನಿವಾರ್ಯ ಕಾರಣದಿಂದ ಘಟನೆಯೊಂದಕ್ಕೆ ಸಿಲುಕಿ ಜೈಲಿಗೆ ಹೋಗಿ ಬಂದ ನಂತರ ಸಮಾಜ, ಕುಟುಂಬ ಆ ಮಗನನ್ನು ಹೇಗೆ ನೋಡುತ್ತದೆ, ಮುಂದೆ ಆತ ಯಾವ ದಾರಿ ತುಳಿಯುತ್ತಾನೆಂಬ ಅಂಶದೊಂದಿಗೆ ಕಥೆ ಸಾಗುತ್ತದೆಯಂತೆ. ಮುಖ್ಯವಾಗಿ ಇದು ತಂದೆ-ಮಗನ ಬಾಂಧವ್ಯದ ಕತೆ ಎನ್ನಲು ಸೀನು ಮರೆಯಲಿಲ್ಲ. ಇನ್ನು, ಆರಂಭದಲ್ಲಿ ಚಿತ್ರಕ್ಕೆ “ರಾಜಣ್ಣನ ಮಗ’ ಟೈಟಲ್‌ ಕೇಳಿದಾಗ, ಮಂಡಳಿ ಮೊದಲು ಟೈಟಲ್‌ ಕೊಡೋದಿಲ್ಲ ಎಂದಿತ್ತಂತೆ. ಆ ನಂತರ ಸಿನಿಮಾದ ಸ್ಕ್ರಿಪ್ಟ್ ಕೊಟ್ಟ ನಂತರ, ನೋಡಿ ಈ ಟೈಟಲ್‌ ಕೊಟ್ಟಿತು ಎಂದು ಟೈಟಲ್‌ ಸಿಕ್ಕ ಬಗ್ಗೆಯೂ ಹೇಳಿಕೊಂಡರು ಸೀನು.

ನಾಯಕ ಹರೀಶ್‌ ಅವರಿಗೆ ಮೊದಲು ಕೋಲಾರ ಸೀನು ಹೇಳಿದ ಕಥೆ ಅರ್ಥವಾಗಲಿಲ್ಲವಂತೆ. ಆ ನಂತರ ಸರಿಯಾಗಿ ಕಥೆ, ಪಾತ್ರದ ಬಗ್ಗೆ ಕೇಳಿದ ನಂತರ ಇಷ್ಟವಾಗಿ ಒಪ್ಪಿಕೊಂಡರಂತೆ. “ಇಲ್ಲಿ ತಂದೆ-ಮಗನ ಸೆಂಟಿಮೆಂಟ್‌ ಇದೆ. ಚಿತ್ರದಲ್ಲಿ ಅನುಭವಿ ಕಲಾವಿದರು ನಟಿಸಿದ್ದಾರೆ. ಅವರ ಬೆಂಬಲದಿಂದ ಪಾತ್ರಕ್ಕೆ ನ್ಯಾಯ ಒದಗಿಸಲು ಪ್ರಯತ್ನಿಸಿದ್ದೇನೆ’ ಎಂದರು. ಅಂದಹಾಗೆ, ಈ ಚಿತ್ರದ ನಿರ್ಮಾಣ ಕೂಡಾ ಅವರದೇ. ಚಿತ್ರದಲ್ಲಿ ಆರು ಫೈಟ್‌ಗಳಿವೆಯಂತೆ. ಚಿತ್ರಕ್ಕೆ ಅಕ್ಷತಾ ನಾಯಕಿ. ಅವರಿಲ್ಲಿ ಡಾಕ್ಟರ್‌ ಆಗಿ ಕಾಣಿಸಿಕೊಂಡಿದ್ದಾರೆ. 

ತಂದೆಯ ಪಾತ್ರ ಮಾಡಿರುವ ಚರಣ್‌ರಾಜ್‌ ಅವರಿಗೆ ಹೊಸಬರ ತಂಡದ ಕೆಲಸ ತುಂಬಾ ಹಿಡಿಸಿತಂತೆ. “ಕೆಲವು ನಿರ್ದೇಶಕರು ಕಥೆ ತುಂಬಾ ಚೆನ್ನಾಗಿ ಹೇಳುತ್ತಾರೆ. ಆದರೆ ಚೆನ್ನಾಗಿ ಸಿನಿಮಾ ಮಾಡಲ್ಲ. ಹಾಗಾಗಿ, ಸಹಜವಾಗಿಯೇ ಒಂದು ಭಯವಿತ್ತು. ಆದರೆ, ಕೋಲಾರ ಸೀನು ಮಾತ್ರ ಹೇಳಿದಂತೆ ಸಿನಿಮಾ ಮಾಡಿದ್ದಾರೆ. ನಾನು ಅವರಿಂದ ಈ ಮಟ್ಟದ ಕೆಲಸ ನಿರೀಕ್ಷಿಸಿರಲಿಲ್ಲ. ಡಬ್ಬಿಂಗ್‌ ಮಾಡುವಾಗ ಕಣ್ಣಲ್ಲಿ ನೀರು ಬಂತು. ಎಲ್ಲರಿಗೂ ಫೋನ್‌ ಮಾಡಿ ಸಿನಿಮಾ ಚೆನ್ನಾಗಿ ಬಂದಿರುವ ಬಗ್ಗೆ ಹೇಳಿದೆ. ಈ ಹಿಂದೆ ನಾನು ಹಲವು ಸಿನಿಮಾಗಳಲ್ಲಿ ತಂದೆ ಪಾತ್ರ ಮಾಡಿದ್ದೇನೆ. ಆದರೆ, ಈ ಪಾತ್ರ ತುಂಬಾ ಹೊಸತನದಿಂದ ಕೂಡಿದೆ’ ಎಂದು ಹೊಸಬರ ಬೆನ್ನುತಟ್ಟಿದರು ಚರಣ್‌ರಾಜ್‌. ಚಿತ್ರದಲ್ಲಿ ನಟಿಸಿದ ಕರಿಸುಬ್ಬು ಕೂಡಾ ತಮ್ಮ ಅನುಭವ ಹಂಚಿಕೊಂಡರು. 

ಟಾಪ್ ನ್ಯೂಸ್

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

D. K. Shivakumar: ಡಿಕೆಶಿ ರಕ್ಷಿಸಲೆಂದೇ ಸಿಬಿಐಗೆ ನೀಡಿದ್ದ ಅನುಮತಿ ವಾಪಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.