ಸಂಚಾರಿಯ ತುಂಟತನ…

Team Udayavani, Aug 3, 2018, 6:00 AM IST

s-10.jpg

” ಈ ಚಿತ್ರ ಬೇರೆ ಲೋಕಕ್ಕೆ ಕರೆದೊಯ್ಯುತ್ತೆ…’

ಸಂಚಾರಿ ವಿಜಯ್‌ ತುಂಬಾ ವಿಶ್ವಾಸದಿಂದ ಹೇಳಿಕೊಂಡರು. ಅವರು ಹಾಗೆ ಹೇಳಿಕೊಂಡಿದ್ದು ತಮ್ಮ “ಪಾದರಸ’ ಚಿತ್ರದ ಬಗ್ಗೆ. ಆಗಸ್ಟ್‌ 10 ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಹೇಳಿಕೊಳ್ಳಲೆಂದೇ ಚಿತ್ರತಂಡ ಮಾಧ್ಯಮದ ಮುಂದೆ ಬಂದಿತ್ತು. ಮೊದಲಿಗೆ ಮಾತಿಗಿಳಿದ ಸಂಚಾರಿ ವಿಜಯ್‌, “ಇಲ್ಲಿ ಪೋಲಿತನವಿದೆ, ತುಂಟತನವಿದೆ. ಇವೆಲ್ಲದರ ಜೊತೆಗೊಂದು ಒಳ್ಳೆಯ ಸಂದೇಶವೂ ಇದೆ. ನನಗೆ ಸಿಕ್ಕ ಮೊದಲ ಪಕ್ಕಾ ಕಮರ್ಷಿಯಲ್‌ ಸಿನಿಮಾ ಇದು. ಹಾಸ್ಯ ಹೆಚ್ಚಾಗಿದೆ, ಡಬ್ಬಲ್‌ ಮೀನಿಂಗ್‌ ಛಾಯೆ ಇದೆಯಾದರೂ, ಎಲ್ಲೂ ಅಸಹ್ಯ ಹುಟ್ಟಿಸುವುದಿಲ್ಲ. ಫೈಟ್‌ ಬಿಟ್ಟರೆ ಇಲ್ಲಿ ಅಪ್ಪಟ ಮನರಂಜನೆಗೆ ಮೋಸವಿಲ್ಲ. ವಿನಾಕಾರಣ ಹೊಡೆದಾಟವನ್ನು ತುರುಕುವುದು ಬೇಡ ಎಂಬ ಕಾರಣಕ್ಕೆ ಅದರ ಗೋಜಿಗೆ ಹೋಗಿಲ್ಲ. ಸಮಾಜದಲ್ಲಿ ಎಲ್ಲರಲ್ಲೂ ಒಳ್ಳೆಯದು, ಕೆಟ್ಟದ್ದು ಇರುತ್ತೆ. ಆದರೆ, ಕೆಟ್ಟ ಗುಣ ತೋರಿಸಿಕೊಳ್ಳದೆ, ಒಳ್ಳೆಯ ಗುಣವನ್ನಷ್ಟೇ ತೋರಿಸುತ್ತಾರೆ. ಆದರೆ, ಅದು ಗೊತ್ತಾಗಲ್ಲ. ಜೊತೆಯಲ್ಲಿದ್ದುಕೊಂಡೇ, ಯಾಮಾರಿಸೋ ವ್ಯಕ್ತಿಗಳಿಂದ ಹೇಗೆಲ್ಲಾ ಇರಬೇಕು ಎಂಬ ಸಾರಾಂಶ ಈ ಚಿತ್ರದಲ್ಲಿದೆ. ಚಿತ್ರ ನೋಡಿದಾಗ, ಯಾರನ್ನ ಹೇಗೆ ನಂಬಬೇಕು ಎಂಬ ಪ್ರಶ್ನೆ ಕಾಡುವುದಂತೂ ನಿಜ. ಇಲ್ಲಿ ಹೊಸತನದ ನಿರೂಪಣೆ ಜೊತೆಗೆ ಕಚಗುಳಿ ಇಡುವ ಸಂಭಾಷಣೆಗಳೂ ಇವೆ. ಮೊದಲರ್ಧ ಒಂದು ರೀತಿಯ ಜರ್ನಿ ಇದ್ದರೆ, ದ್ವಿತಿಯಾರ್ಧ ಬೇರೆಯದ್ದೇ ಲೋಕಕ್ಕೆ ಕರೆದೊಯ್ಯುತ್ತದೆ’ ಎಂಬುದು ಸಂಚಾರಿ ವಿಜಯ್‌ ಮಾತು.

ನಿರ್ದೇಶಕ ಹೃಷಿಕೇಶ್‌ ಜಂಬಗಿ ಅವರಿಗೆ ಇದು ಮೊದಲ ಚಿತ್ರ. ವಾಸ್ತವತೆಯ ಚಿತ್ರಣವನ್ನು ಕಟ್ಟಿಕೊಟ್ಟಿರುವ ಖುಷಿ ಅವರದು. ಇಲ್ಲಿ ಕಥೆಗೆ ತಕ್ಕ ಮಾತುಗಳಿವೆ, ಅದರಲ್ಲಿ ಪೋಲಿತನವಿದೆ ನಿಜ. ಹಾಗಂತ ಎಲ್ಲೂ ಅಶ್ಲೀಲ ಎನಿಸುವುದಿಲ್ಲ. ಆ ಮಾತುಗಳ ಹಿಂದೆ ಸತ್ಯಾಂಶವೂ ಇರಲಿದೆ. ಸೋಮರಸ, ರಾಮರಸ ಸೇರಿದಂತೆ ನವರಸಗಳೆಲ್ಲವೂ ಸೇರಿ ಈ “ಪಾದರಸ’ ಆಗಿದೆ’ ಎನ್ನುತ್ತಾರೆ ನಿರ್ದೇಶಕರು.

ನಿರ್ಮಾಪಕ ಕೃಷ್ಣ ರೇವಣ್‌ಕರ್‌ ಅವರಿಗೆ ಒಂದೊಳ್ಳೆಯ ಚಿತ್ರ ಮಾಡಿರುವ ತೃಪ್ತಿ ಇದೆ. ನಿರ್ದೇಶಕರು ಕಥೆ ಹೇಳಿದಂತೆಯೇ ಚಿತ್ರ ಮಾಡಿರುವುದರಿಂದ, ಅವರಿಗೆ ಎಲ್ಲೂ ಇದು ಹೊಸ ನಿರ್ದೇಶಕನ ಸಿನಿಮಾ ಅಂತ ಅನಿಸಿಲ್ಲವಂತೆ. ಒಂದು ಶುದ್ಧ ಮನಸ್ಸಿನಿಂದ ಮಾಡಿರುವ “ಪಾದರಸ’ ನವರಸಗಳನ್ನು ಮೀರಿಸುವಂಥದ್ದು ಎನ್ನುತ್ತಾರೆ ನಿರ್ಮಾಪಕರು.

ಇನ್ನು, ಚಿತ್ರದ ನಾಯಕಿ ವೈಷ್ಣವಿಗೆ ಈ ಚಿತ್ರ ಹೊಸ ಇಮೇಜ್‌ ತಂದುಕೊಡುವ ನಂಬಿಕೆ ಇದೆಯಂತೆ. ಅವರಿಲ್ಲಿ ಮುಗ್ಧ ಹುಡುಗಿಯಾಗಿ, ಅಪ್ಪ,ಅಮ್ಮನ ಮೇಲೆ ಭಕ್ತಿ ತೋರುವಂತಹ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಮತ್ತೂಬ್ಬ ನಾಯಕಿ ಮನಸ್ವಿನಿಗೆ ಇಲ್ಲೊಂದು ಹೊಸ ಪಾತ್ರ ಸಿಕ್ಕಿದ್ದು, ಅವರಿಗೂ ಚಿತ್ರ ಗುರುತಿಸಿಕೊಳ್ಳುವಂತೆ ಮಾಡಲಿದೆ ಎಂಬ ನಂಬಿಕೆ. ಛಾಯಾಗ್ರಾಹಕ ಎಂ.ಬಿ.ಅಳ್ಳಿಕಟ್ಟೆ ಚಿತ್ರ ಮೂಡಿಬಂದ ಬಗ್ಗೆ ಹೇಳಿಕೊಂಡರು. ಸಹ ನಿರ್ಮಾಪಕ ಪ್ರಕಾಶ್‌, ಕಲಾವಿದ ಅಬ್ಸಲ್‌ ಇತರರು ಮಾತನಾಡಿದರು. ಎ.ಟಿ.ರವೀಶ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.  

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.