ಸರ್ಕಾರಿ ಹಾಡುಗಳು

Team Udayavani, Aug 3, 2018, 6:00 AM IST

s-17.jpg

ಸಿಡಿ ಬಾಕ್ಸ್‌ ಬರಬಹುದು ಎಂದು ಕಾಯುತ್ತಿದ್ದರು ಸುದೀಪ್‌. ಅಷ್ಟರಲ್ಲಿ ಶಾಲೆಗಳಲ್ಲಿ ಹೊಡೆಯುವ ಗಂಟೆಯನ್ನು ತಂದು ವೇದಿಕೆಯ ಮೇಲಿಡಲಾಯಿತು. ಅದೇನು ಎಂದು ಸುದೀಪ್‌ ಆಶ್ಚರ್ಯದಿಂದ ನೋಡುತ್ತಿರುವಾಗಲೇ, “ಸಿಡಿ ಕಾಲ ಮುಗೀತು. ಈಗೇನಿದ್ದರೂ ಪೆನ್‌ ಡ್ರೈವ್‌ ಕಾಲ. ನೀವು ಬೆಲ್‌ ಮಾಡಿ ಸಾರ್‌. ಹಾಡುಗಳು ಬಿಡುಗಡೆಯಾದಂತೆ’ ಎಂದರು ರಿಷಭ್‌ ಶೆಟ್ಟಿ. ಸುದೀಪ್‌ ಕೋಲಿನಿಂದ “ಢಣ್‌ ಢಣ್‌ ಢಣ್‌’ ಅಂತ ಬಾರಿಸುತ್ತಿದ್ದಂತೆ, ಸಾಂಕೇತಿಕವಾಗಿ ಹಾಡುಗಳು ಬಿಡುಗಡೆಯಾದವು. ಆ ನಂತರ ಎಲ್ಲರೂ ಪೆನ್‌ ಡ್ರೈವ್‌ ಹಿಡಿದುಕೊಂಡು ಫೋಟೋ ಆಗುವುದರ ಮೂಲಕ ಸಮಾರಂಭ ಮುಗಿಯಿತು.

ಅಂದಹಾಗೆ, ಇದು “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ – ರಾಮಣ್ಣ ರೈ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ. ಹಾಡುಗಳನ್ನು ಬಿಡುಗಡೆ ಮಾಡುವುದಕ್ಕೆ ಸುದೀಪ್‌ ಬಂದಿದ್ದರು. ಚಿತ್ರದಲ್ಲಿ ನಟಿಸಿರುವ ಅನಂತ್‌ ನಾಗ್‌, ಹಾಡು ಬರೆದಿರುವ ಕೆ. ಕಲ್ಯಾಣ್‌ ಹಾಜರಿದ್ದರು. ಮಿಕ್ಕಂತೆ ನಿರ್ದೇಶಕರಾದ ಶಿವಮಣಿ, ಜಯತೀರ್ಥ ಮುಂತಾದವರು ಶುಭ ಕೋರುವುದಕ್ಕೆ ಬಂದಿದ್ದರು. ಹಾಡುಗಳು ಬಿಡುಗಡೆಯಾಗುವುದಕ್ಕಿಂತ ಮುನ್ನ, ಎಲ್ಲರೂ ಮಾತಾಡುವುದಕ್ಕಿಂತ ಮುಂಚೆ ಮೊದಲು ನಾಲ್ಕು ಹಾಡುಗಳನ್ನು ತೋರಿಸಲಾಯಿತು. ನಂತರ ಮಾತು.

ಅನಂತ್‌ ನಾಗ್‌ ಅವರು ರಿಷಭ್‌ ಶೆಟ್ಟಿಯನ್ನು ನೋಡಿದ್ದು ಹೇಮಂತ್‌ ರಾವ್‌ ಮದುವೆ ಸಂದರ್ಭದಲ್ಲಿ. ಆಗ ಅನಂತ್‌ ಅವರ ಹತ್ತಿರ ಬಂದ ರಿಷಭ್‌, ಮಾತಾಡೋಕಿದೆ ಎಂದರಂತೆ. ಅದೊಂದು ಗೊತ್ತು ಮಾಡಿದ ದಿನ ಅನಂತ್‌ ನಾಗ್‌ ಅವರ ಮನೆಗೆ ಹೋದ ರಿಷಭ್‌, “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು. ಕೊಡುಗೆ – ರಾಮಣ್ಣ ರೈ’ ಚಿತ್ರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಜೊತೆಗೆ ಕಥೆ ಮತ್ತು ಪಾತ್ರದ ಬಗ್ಗೆಯೂ ಹೇಳಿದ್ದಾರೆ. “ರಿಷಭ್‌ ಕಥೆ ಹೇಳುವಾಗ ನಗುತ್ತಿದ್ದರು. ಅವರಿಗೆ ಚಿತ್ರದ ಬಗ್ಗೆ ತುಂಬಾ ಅಬೆÕಷನ್‌ ಇದೆ ಅಂತ ಆಗಲೇ ಅನಿಸಿತ್ತು. ಇನ್ನು ಚಿತ್ರದಲ್ಲಿ ಪಾರ್ಟು ಮಾಡಿದೆ. ಆ ಸಂದರ್ಭದಲ್ಲಿ ಅವರನ್ನು ನೋಡಿ ಅವಕ್ಕಾದೆ. ನಿರ್ಮಾಣ, ನಿರ್ದೇಶನ. ನಟನೆ ಎಲ್ಲಾ ಅವರೇ ಮಾಡ್ತಾರೆ. ಈ ಚಿತ್ರದಲ್ಲಿ ಕನ್ನಡದ ಮೇಲಿನ ಪ್ರೀತಿ, ಕಳಕಳಿ ಮತ್ತು ಅಭಿಮಾನ ಇದೆ. ಇಡೀ ಚಿತ್ರದ ಮರ್ಮ ಒಂದೇ ಒಂದು ಸಂಭಾಷಣೆಯಲ್ಲಿದೆ. ಒಂದು ಮಗು ಯಾವ ಭಾಷೇಲಿ ಕನಸು ಕಾಣುತ್ತೋ, ಅದೇ ಭಾಷೆಯಲ್ಲಿ ಅದಕ್ಕೆ ಶಿಕ್ಷಣ ಸಿಗಬೇಕು ಎಂಬ ಸಂಭಾಷಣೆ ಅದ್ಭುತವಾಗಿದೆ’ ಎಂದು ಖುಷಿಪಟ್ಟರು.

ಚಿತ್ರದ ಹಾಡುಗಳನ್ನು ನೋಡಿ ಖುಷಿಯಾಗಿದ್ದ ಸುದೀಪ್‌, “ಇಲ್ಲಿ ಮುಗ್ಧತೆ ಕಾಣುತ್ತದೆ. ಅದನ್ನು ಸೆರೆಹಿಡಿಯುವುದಕ್ಕೆ ನಿಜಕ್ಕೂ ತಾಳ್ಮೆ ಬೇಕು. ಮುಂಚೆ ರಿಷಭ್‌ಗೆ ಇಷ್ಟೊಂದು ತಾಳ್ಮೆ ಇರಲಿಲ್ಲ. ಮದುವೆಯಾದ ಮೇಲೆ ಬಂದಿದೆ. ಹಾಗಾಗಿ ಅದರ ಕ್ರೆಡಿಟ್‌ ಅವರ ಹೆಂಡತಿಗೆ ಹೋಗಬೇಕು. ನಾನು ರಿಷಭ್‌ ಅವರ ಜರ್ನಿಯನ್ನು ನೋಡಿಕೊಂಡು ಬಂದವನು. ನಂಬಿಕೆ, ಭಯ, ವಿಶ್ವಾಸ, ಅತಿಯಾದ ವಿಶ್ವಾಸ ಎಲ್ಲವನ್ನೂ ನೋಡಿದ್ದೇನೆ. ಈ ಚಿತ್ರಕ್ಕೆ ಮತ್ತು ಅವರಿಗೆ ಒಳ್ಳೆಯದಾಗಲಿ. ಇನ್ನು ಅನಂತ್‌ ನಾಗ್‌ ಅವರು ನಮ್ಮ ಗುರುಗಳ ತರಹ. ಅವರನ್ನ ನೋಡೋದು, ಮಾತಾಡೋದೇ ದೊಡ್ಡ ಸಂತೋಷ’ ಎಂದರು.

ಕೆ. ಕಲ್ಯಾಣ್‌ ಅವರು ಈ ಚಿತ್ರಕ್ಕೊಂದು ಪ್ರಾರ್ಥನೆ ಗೀತೆ ಬರೆದಿದ್ದಾರೆ. “ಯೋಚನೆ ಮಾಡೋಕೆ ಸಾವಿರ ಹಾಡುಗಳು. ಪ್ರಾರ್ಥಿಸೋಕೆ ಕೆಲವೇ ಹಾಡುಗಳು’ ಎಂದು ಅವರು ಹೇಳಿದರು. ಚಿತ್ರಕ್ಕೆ ಒಂಬತ್ತು ಹಾಡುಗಳನ್ನು ಸಂಯೋಜಿಸಿರುವ ವಾಸುಕಿ ವೈಭವ್‌, “ದಡ್ಡ ಪ್ರವೀಣ …’ ಹಾಡನ್ನು ತಾವೇ ಹಾಡಿದ್ದು ಎಂದು ಯಾರಿಗೆ ಹೇಳಿದರೂ ನಂಬುತ್ತಿಲ್ಲ ಎಂದು ಬೇಸರಿಸಿಕೊಂಡರು. ರಿಷಭ್‌ ಎಲ್ಲರಿಗೂ ಥ್ಯಾಂಕ್ಸ್‌ ಹೇಳಿದರು. 

ಟಾಪ್ ನ್ಯೂಸ್

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

Srinagar: ಝೇಲಂ ನದಿಯಲ್ಲಿ ವಿದ್ಯಾರ್ಥಿಗಳಿದ್ದ ಬೋಟ್‌ ಮುಳುಗಡೆ; ಹಲವರು ನಾಪತ್ತೆ

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

IPL 2024; ಮುಂಬೈ ಪಂದ್ಯದ ಟಾಸ್ ಕಳ್ಳಾಟ ಬಿಚ್ಚಿಟ್ಟ ಆರ್ ಸಿಬಿ ನಾಯಕ ಫಾಫ್| Video

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

DEVIL; ಹೆಚ್ಚು ದಿನ ವಿಶ್ರಾಂತಿಯಿಲ್ಲ, ಅಕ್ಟೋಬರ್‌ನಲ್ಲಿ ಡೆವಿಲ್‌ ಬರೋದು ಪಕ್ಕಾ: ದರ್ಶನ್‌

Kiran Raj, Yasha Shivakumar starer Bharjari Gandu movie

Kannada Cinema; ರಿಲೀಸ್‌ ಅಖಾಡದಲ್ಲಿ ‘ಭರ್ಜರಿ ಗಂಡು’; ಕಿರಣ್‌ಗೆ ಯಶ ನಾಯಕಿ

MUST WATCH

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

udayavani youtube

ಶ್ರೀ ವೈಷ್ಣವಿ ದುರ್ಗಾ ದೇವಾಲಯ

udayavani youtube

ಟೈಟನ್ ಕಂಪೆನಿಯ Xylys ವಾಚ್ ವಿಶೇಷತೆಗಳೇನು ?

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

ಹೊಸ ಸೇರ್ಪಡೆ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

ಸಮೀಕ್ಷೆಗಳಲ್ಲಿ ಹಿನ್ನಡೆ; ಹೀಗಾಗಿ ಕಾಂಗ್ರೆಸ್ ಕೀಳು‌ಮಟ್ಟದ ರಾಜಕಾರಣ ಮಾಡುತ್ತಿದೆ: ಜೋಶಿ

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Road mishap: ಖಾಸಗಿ ಬಸ್‌ – ಕಾರು ಅಪಘಾತ; ಆಂಧ್ರ ಮೂಲದ ಮೂವರು ಮೃತ್ಯು

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

ಮಣಿಪಾಲ್ ಆಸ್ಪತ್ರೆಯ ವಿಶೇಷ ಆಯೋಜನೆ: RCBvsSRH ಪಂದ್ಯ ವೀಕ್ಷಿಸಿದ ಕ್ಯಾನ್ಸರ್‌ ಪೀಡಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.