ಗೆಳೆಯರ ಭವಿಷ್ಯ ಮತ್ತು ಬದುಕು | Udayavani - ಉದಯವಾಣಿ
   CONNECT WITH US  
echo "sudina logo";

ಗೆಳೆಯರ ಭವಿಷ್ಯ ಮತ್ತು ಬದುಕು

"ಇದು ಎಲ್ಲರಿಗೂ ಮೊದಲ ಸಿನಿಮಾ. ಇದರಿಂದ ಎಲ್ಲರಿಗೂ ಭವಿಷ್ಯವಿದೆ ...'
- ಹೀಗೆ ಹೇಳಿ ಹಾಗೊಂದು ನಗೆ ಬೀರಿದರು ನಿರ್ದೇಶಕ ಅರುಣ್‌. ಅವರು ಹೇಳಿಕೊಂಡಿದ್ದು "ದಿವಂಗತ ಮಂಜುನಾಥನ ಗೆಳೆಯರು' ಚಿತ್ರದ ಬಗ್ಗೆ. ಚಿತ್ರ ಮುಂದಿನವಾರ ಬಿಡುಗಡೆಯಾಗುತ್ತಿದೆ. ಈ ಹಿಂದೆ ಅರುಣ್‌  "ಎಣ್ಣೆ  ಪಾರ್ಟಿ' ಎಂಬ ಕಿರುಚಿತ್ರ ನಿರ್ದೇಶಿಸಿದ್ದರು. ದಿವಂಗತ ಮಂಜುನಾಥನ ಗೆಳೆಯರು. ಲವ್‌, ಸಸ್ಪೆನ್ಸ್‌ ಹಾಗೂ ಕಾಮಿಡಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ ಅರುಣ್‌.

"ಸಿನಿಮಾ ನೋಡುವಾಗ, ನೈಜತೆ ಕಾಣಬೇಕು ಎಂಬ ಉದ್ದೇಶದಿಂದ ಎಲ್ಲವನ್ನೂ ನೈಜವಾಗಿರುವಂತೆ ಚಿತ್ರೀಕರಿಸಿದ್ದೇವೆ. ಇಲ್ಲಿ ಕಥೆಯೇ ಹೀರೋ. ಎಲ್ಲೂ ಹೊಂದಾಣಿಕೆ ಮಾಡಿಕೊಳ್ಳದೆ ಒಂದೊಳ್ಳೆಯ ಸದಭಿರುಚಿಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದೇವೆ. ಇಲ್ಲಿ ನೈಜತೆ ಇರಬೇಕು ಎಂಬ ಕಾರಣಕ್ಕೆ ಒರಿಜಿನಲ್‌ ಮಳೆಯಲ್ಲೇ ಚಿತ್ರೀಕರಿಸಿದ್ದೇವೆ. ಪ್ರತಿ ಡೈಲಾಗ್‌ ಕೂಡ ಫ್ರೆಂಡ್ಸ್‌ ಜೊತೆ ಮಾತಾಡಿದಂತಿರಲಿದೆ. ಒಂದು ಹೊಸ ಪ್ರಯತ್ನಕ್ಕೆ ನನ್ನ ತಂಡ ಬೆಂಬಲ ಚೆನ್ನಾಗಿತ್ತು. ಆ ಕಾರಣದಿಂದಲೆ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಎಲ್ಲರ ಎಫ‌ರ್ಟ್‌ನಿಂದ ಇದು ಮೂಡಿಬಂದಿದೆ. ದೊಡ್ಡ ಬಜೆಟ್‌ ಇಲ್ಲಿಲ್ಲ. ಆದರೆ, ಒಳ್ಳೇ ಕಥೆ ಇದೆ. ಮನಸ್ಸಿಗೆ ಹತ್ತಿರವಾಗುವಂತಹ ಅಂಶಗಳಿವೆ. ನಮ್ಮ ಕಾಲೇಜು ದಿನಗಳು ನೆನಪಾಗುತ್ತವೆ. ನಮ್ಮ ಹಳೆಯ ಗೆಳೆತನ ನೆನಪಾಗುತ್ತೆ' ಎಂದು ವಿವರ ಕೊಟ್ಟ ಅರುಣ್‌, ಐವರು ಇಂಜಿನಿಯರ್‌ ಗೆಳೆಯರು ಬಹಳ ವರ್ಷಗಳ ನಂತರ ಪೋಲಿಸ್‌ ಸ್ಟೇಷನ್‌ನಲ್ಲಿ ಭೇಟಿಯಾದಾಗ ಒಂದು ಘಟನೆ ಬಿಚ್ಚಿಕೊಳ್ಳುತ್ತೆ. ಅದೇ ಚಿತ್ರದ ಹೈಲೆಟ್‌ ಎಂದರು ಅರುಣ್‌.

ರುದ್ರ ಪ್ರಯೋಗ್‌ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅವರಿಗೆ ಇದು ಗುರುತಿಸಿಕೊಳ್ಳುವಂತೆ ಮಾಡುತ್ತೆ ಎಂಬ ವಿಶ್ವಾಸ. ಇದು ಕೇವಲ ಗೆಳೆಯರಿಗೆ ಮಾತ್ರವಲ್ಲ, ಇಡೀ ಫ್ಯಾಮಿಲಿಗೆ ಇಷ್ಟವಾಗುವಂತಹ ಚಿತ್ರವಾಗಲಿದೆ ಎಂಬ ಗ್ಯಾರಂಟಿ ಕೊಟ್ಟರು ಪ್ರಯೋಗ್‌.

ಸಚಿನ್‌ ಅವರಿಲ್ಲಿ ಮಂಜುನಾಥನ ಪಾತ್ರ ನಿರ್ವಹಿಸಿದ್ದಾರೆ. ಅವರದು ಜನರನ್ನು ಯಾಮಾರಿಸಿ, ಬದುಕು ನಡೆಸೋ ಪಾತ್ರವಂತೆ. ಒಂದು ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅದೇ ಚಿತ್ರದ ತಿರುವು' ಅಂದರು ಅವರು. ಶಂಕರಮೂರ್ತಿ, ಶೀತಲ್‌ ಪಾಂಡ್ಯ, ಅವಿನಾಶ್‌ ಮುದ್ದಪ್ಪ, ರವಿಪೂಜಾರ್‌, ನವೀನ್‌ ಸೇರಿದಂತೆ ಅನೇಕರು ನಟಿಸಿದ್ದಾರೆ.  
 

Trending videos

Back to Top