CONNECT WITH US  

ಹಳ್ಳಿ ಸೊಗಡಿನ ಪ್ರೇಮಕಥೆ

ಲವ್‌ ಅಂತ ಶುರುವಾಗಿ ಹಾರರ್‌ ಆಗಿ ಮುಗಿಯಿತು

ಸುಶೀಲ್‌ ಕಮಾರ್‌ ನಿರ್ಮಿಸಿ, ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ "ಆರೋಹಣ' ಬಿಡುಗಡೆಯ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇದೊಂದು ಪಕ್ಕಾ ಹಳ್ಳಿ ಸೊಗಡಿನಲ್ಲಿ ನಡೆಯುವಂಥ ಪ್ರೇಮ ಕಥಯಾಗಿದ್ದು,
ಶ್ರೀಧರ್‌ ಶೆಟ್ಟಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರ ಬಿಡುಗಡೆಯಾಗುತ್ತಿದೆ ಎಂದು ತಿಳಿಸುವುದಕ್ಕೆ ಚಿತ್ರತಂಡದವರು ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಈ ಚಿತ್ರವನ್ನು ಸುಶೀಲ್‌ ಕುಮಾರ್‌ ನಿರ್ಮಿಸುವುದರ ಜೊತೆಗೆ, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ. 

ಚಿತ್ರದ ಕುರಿತು ಮಾತನಾಡುವ ಅವರು, "ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದಕ್ಕೂ ಮುನ್ನ ಸೆನ್ಸಾರ್‌ ಮಂಡಳಿಯವರು ನೋಡಿ, ಚಿತ್ರಕ್ಕೆ "ಎ' ಸರ್ಟಿಫಿಕೇಟ್‌ ಕೊಟ್ಟಿದ್ದರು. ಇದನ್ನು ಪ್ರಶ್ನಿಸಿ ಟ್ರಿಬ್ಯುನಲ್‌ಗೆ ಹೋಗಬೇಕಾಯಿತು. ಚಿತ್ರದ ಆರಂಭದಿಂದಲೂ ಹಲವು ಹೋರಾಟ ಮಾಡಿಕೊಂಡು ಬಂದಿದ್ದು, ಇದೀಗ ರಿಲೀಸ್‌ ಹಂತಕ್ಕೆ ಬಂದಿದೆ. ಪ್ರತಿಯೊಬ್ಬ ಮನುಷ್ಯನಲ್ಲೂ ಒಂದು ಕೊರತೆ ಇದ್ದೇ ಇರುತ್ತದೆ. ಅದನ್ನು ಹೊರಗೆ ತೋರಿಸಿಕೊಳ್ಳದೆ ಇಟ್ಟುಕೊಂಡರೆ ಏನೆಲ್ಲಾ ಆಗಬಹುದು ಎಂದು ಈ ಚಿತ್ರ ಹೇಳುತ್ತದೆ' ಎನ್ನುತ್ತಾರೆ ಸುಶೀಲ್‌ ಕುಮಾರ್‌. ಈ ಚಿತ್ರದಲ್ಲಿ ಅವರಿಗೆ ಪ್ರೀತಿ ಮಡಿಕೇರಿ ನಾಯಕಿಯಾಗಿ ನಟಿಸಿದ್ದಾರೆ.ನಂತರ ಮಾತನಾಡಿದ ನಿರ್ದೇಶಕ ಶ್ರೀಧರ್‌ ಶೆಟ್ಟಿ,"ಆರಂಭದಲ್ಲಿ ಒಂದು ಲವ್‌ ಸಬjಕ್ಟ್ ಅಂತ ಆರಂಭಿಸಿದ್ದೆವು.

ನಂತರ ಅದು ಥ್ರಿಲ್ಲರ್‌ ಹಾಗು ಹಾರರ್‌ ಕಥೆಯಾಗಿ ರೂಪುಗೊಂಡಿತು. ಬಿಡದಿ, ರಾಮನಗರಹಾಗುಸಕಲೇಶಪುರದ ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಬರುವ ನಾಲ್ಕು ಬಿಟ್‌ ಹಾಡುಗಳನ್ನು ನಟ-ಗಾಯಕ ರವಿಶಂಕರ ಗೌಡ ಹಾಡಿದ್ದಾರೆ. ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸುಶೀಲ್‌ ಕುಮಾರ್‌ ಸದ್ಯ ಸಾಫ್ಟವೇರ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮನುಷ್ಯ ಜೀವದಲ್ಲಿ ಬರುವಂಥ ಸಮಸ್ಯೆಗಳು ಆರೋಹಣದಂತೆ ಮುಂದುವರೆಯುತ್ತಲೇ ಹೋಗುತ್ತದೆ. ಒಬ್ಬ ತಂದೆಯನ್ನು ಮಗನಾದವನು ಹೇಗೆಲ್ಲಾ ನೋಡಿಕೊಳ್ಳಬಹುದು ಎಂದು ಈ ಚಿತ್ರದಲ್ಲಿ ಭಾವನಾತ್ಮಕ ಸನ್ನಿವೇಶಗಳ ಜೊತೆಗೆ ನಿರೂಪಿಸಲಾಗಿದೆ. ಇದೆಲ್ಲದರ ಜೊತೆಗೆ ಹಾರರ್‌ ಹಾಗು ಥ್ರಿಲ್ಲರ್‌ ಅಂಶಗಳೂ ಈ ಚಿತ್ರದಲ್ಲಿದೆ' ಎಂದರು. "ಆರೋಹಣ'ದಲ್ಲಿ ಮೂರು ಹಾಡುಗಳು ಹಾಗೂ ನಾಲ್ಕು ಬಿಟ್‌ ಗೀತೆಗಳಿದ್ದು, ಆರ್‌.ಎನ್‌. ಉತ್ತಮ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.


Trending videos

Back to Top