ತ್ರಾಟಕ ಎಂದರೆ ಮೂರನೆಯ ಕಣ್ಣು

Team Udayavani, Aug 31, 2018, 6:00 AM IST

24.jpg

“ನಾನೊಬ್ಬ ರೀಮೇಕ್‌ ನಿರ್ದೇಶಕ ಅಲ್ಲ ಅಂತ ಪ್ರೂವ್‌ ಮಾಡಬೇಕಿತ್ತು. ಆಗ ಸಿಕ್ಕಿದ್ದೇ ಈ ಕಥೆ …’
“ಜಿಗರ್‌ ಥಂಡಾ’ ಚಿತ್ರದ ನಂತರ ಶಿವಗಣೇಶ್‌ಗೆ ರೀಮೇಕ್‌ ನಿರ್ದೇಶಕ ಎಂಬ ಹಣೆಪಟ್ಟಿ ಅಂಟಿಕೊಂಡು ಬಿಟ್ಟಿತಂತೆ. ಅದರಿಂದ ಹೊರಬರಬೇಕು ಎನ್ನುತ್ತಿದ್ದಾಗಲೇ ಸಿಕ್ಕಿದ್ದು ಒಂದು ಸ್ವಮೇಕ್‌ ಕಥೆ. ಆ ಕಥೆ ಇದೀಗ ಚಿತ್ರವಾಗಿ, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು, ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅದೇ “ತ್ರಾಟಕ’.

ತಮ್ಮ ಹೊಸ  ಚಿತ್ರ “ತ್ರಾಟಕ’ ಬಿಡುಗಡೆಯಾಗುತ್ತಿರುವ ವಿಷಯವನ್ನು ಹೇಳಿಕೊಳ್ಳುವುದಕ್ಕೆ ಶಿವಗಣೇಶ್‌ ಇತ್ತೀಚೆಗೆ ತಮ್ಮ ತಂಡದೊಂದಿಗೆ ಜಮಾಯಿಸಿದ್ದರು. ಅವರ ಜೊತೆ ನಿರ್ಮಾಪಕ ಕಂ ನಾಯಕ ರಾಹುಲ್‌ ಐನಾಪುರ, ಕಲಾವಿದರಾದ ಭವಾನಿ ಪ್ರಕಾಶ್‌, ಅಜಿತ್‌ ಜಯರಾಜ್‌, ಹೃದಯ ಮುಂತಾದವರು ಮಾಧ್ಯಮದವರೆದುರು ಮಾತನಾಡಲು ಕುಳಿತಿದ್ದರು.

ಮೊದಲು ಮಾತನಾಡಿದ್ದು ರಾಹುಲ್‌. ಅವರಿಗೆ ಇದು ನಾಯಕನಾಗಿ, ನಿರ್ಮಾಪಕನಾಗಿ ಮೊದಲ ಚಿತ್ರ. ಅವರು ಮತ್ತು ಶಿವಗಣೇಶ್‌ 10 ವರ್ಷಗಳ ಸ್ನೇಹಿತರಂತೆ. ಸ್ನೇಹದಲ್ಲಿ ಚಿತ್ರ ಮಾಡುವ ಮಾತುಕತೆಯಾಗಿ, ಅದು ಬಿಡುಗಡೆಯ ಹಂತಕ್ಕೆ ಬಂದಿದೆ. “ಶಿವಗಣೇಶ್‌ ಬಹಳ ಚೆನ್ನಾಗಿ ಮಾಡಿದ್ದಾರೆ. ಇದೊಂದು ಬಹಳ ಸಹಜ ಚಿತ್ರ. ಶೋಆಫ್ಗಳೆಲ್ಲಾ ಇರುವುದಿಲ್ಲ. ನಮ್ಮಲ್ಲಿರುವ ಪ್ರತಿಭೆಯನ್ನು ಶಿವಗಣೇಶ್‌ ಬಹಳ ಚೆನ್ನಾಗಿ ತೆಗೆದಿದ್ದಾರೆ’ ಎಂದು ರಾಹುಲ್‌ ಹೇಳಿದರು.

ನಂತರ ಮೈಕು ಕೈಗೆತ್ತಿಕೊಂಡಿದ್ದೇ ಶಿವಗಣೇಶ್‌. “ಜಿಗರ್‌ ಥಂಡಾ’ ನಂತರ ರೀಮೇಕ್‌ ನಿರ್ದೇಶಕ ಎಂಬ ಹಣೆಪಟ್ಟಿ ಬಿದ್ದಾಗ, ತಾನೊಬ್ಬ ಸ್ವಮೇಕ್‌ ನಿರ್ದೇಶಕ ಅಂತ ಪ್ರೂವ್‌ ಮಾಡೋದಕ್ಕೆ ಈ ಚಿತ್ರ ಮಾಡಿದರಂತೆ. “ಒಬ್ಬ ನಿರ್ದೇಶಕ ಎಲ್ಲಾ ಚಿತ್ರಗಳೂ ಒಂದೇ. ಅವನಿಗೆ ಸ್ವಮೇಕ್‌, ರೀಮೇಕ್‌ ಅಂತ ಇರುವುದಿಲ್ಲ. ಎಲ್ಲಾ ಚಿತ್ರಗಳಿಗೂ ಅದೇ ಶ್ರಮ ಇರುತ್ತದೆ. 

ರಾಹುಲ್‌ಗೆ 10 ವರ್ಷಗಳ ಹಿಂದೆಯೇ ಚಿತ್ರ ಮಾಡಬೇಕಿತ್ತು. ಕಾರಣಾಂತರ ಗಳಿಂದ ಆಗಿರಲಿಲ್ಲ. ಈಗ ಅವರ ವಯಸ್ಸಿಗೆ ತಕ್ಕ ಹಾಗೆ ಕಥೆ ಮಾಡಿ ಚಿತ್ರ ಮಾಡುತ್ತಿದ್ದೇವೆ. “ತ್ರಾಟಕ’ ಎಂದರೆ ಮೂರನೆಯ ಕಣ್ಣು ಜಾಗ್ರತವಾಗುವುದು. ಕತ್ತಲೆ ಕೋಣೆಯಲ್ಲಿ ಕ್ಯಾಂಡಲ್‌ ಇಟ್ಟು, ತದೇಕಚಿತ್ತದಿಂದ ನೋಡಿದರೆ, ಅದರಿಂದ ಮೈಂಡ್‌ ಸ್ಕಿಲ್‌ ಜಾಸ್ತಿಯಾಗುತ್ತದೆ. ಹೀರೋ ಇಲ್ಲಿ ಒಬ್ಬ ಪೊಲೀಸ್‌ ಅಧಿಕಾರಿ. ಅವನಿಗೆ ಸಿ.ಪಿ.ಎಸ್‌ ಎಂಬ ಖಾಯಿಲೆ ಇರುತ್ತದೆ. ತ್ರಾಟಕ ಬಳಸಿ ಅದರಿಂದ ಹೇಗೆ ಆಚೆ ಬರುತ್ತಾನೆ ಮತ್ತು ಕೊಲೆ ರಹಸ್ಯವನ್ನು ಹೇಗೆ ಬೇಧಿಸುತ್ತಾನೆ ಎಂಬುದು ಚಿತ್ರದ ಕಥೆ’ ಎಂದು ವಿವರ ಕೊಟ್ಟರು ಶಿವಗಣೇಶ್‌. ನ್ಯೂಯಾರ್ಕ್‌ ನಡೆದ ಕೆಲವು ನೈಜ ಘಟನೆಗಳನ್ನಿಟ್ಟುಕೊಂಡು ರೆಫ‌ರ್‌ ಮಾಡಿ ಚಿತ್ರ ಮಾಡಿದ್ದಾರಂತೆ.

ಹ್ರದಯ ಮತ್ತು ಅಜಿತ್‌ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು. ಇನ್ನು ಭವಾನಿ ಪ್ರಕಾಶ್‌ ಅವರಿಗೆ ಇಲ್ಲಿ ಬರೀ ನಟನೆಯ ಜವಾಬ್ದಾರಿಯಷ್ಟೇ ಅಲ್ಲ, ಕಲಾವಿದರನ್ನು ತಿದ್ದಿತೀಡುವ ಜವಾಬ್ದಾರಿಯನ್ನೂ ನಿರ್ವಹಿಸಿದ್ದಾರೆ. “ನಾನು ಇಲ್ಲಿ ಯಾರಿಗೂ ನಟನೆ ಕಲಿಸಿಲ್ಲ. ನಟನೆ ಎನ್ನುವುದು ಸಹಜವಾಗಿ ಬಂದಿರುತ್ತದೆ. ರಂಗಭೂಮಿಯಲ್ಲಿ 20 ವರ್ಷಗಳ ಅನುಭವ ಇರುವುದರಿಂದ, ನಾನು ತಿದ್ದಿತೀಡಿದ್ದೀನಿ ಅಷ್ಟೇ. ಚೆನ್ನಾಗಿ ರಿಹರ್ಸಲ್‌ ಮಾಡಿಯೇ, ಚಿತ್ರೀಕರಣ ಮಾಡಿದ್ದೇವೆ. ಎಲ್ಲರೂ ಒಳ್ಳೆಯ ಕೆಲಸ ಮಾಡಿದ್ದಾರೆ’ ಎಂದರು ಭವಾನಿ ಪ್ರಕಾಶ್‌.

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.