CONNECT WITH US  

ತ್ರಿಭಾಷಾ ಅನುಷ್ಕ

ಮೂರು ಟ್ರಾಕ್‌ ಮೂರು ಕೋಟಿ

"ಡೇಂಜರ್‌ ಝೋನ್‌' ಹಾಗೂ "ನಿಶ್ಯದ್ಧ-2' ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್‌ ಕುಮಾರ್‌ ಈಗ ಸದ್ದಿಲ್ಲದೇ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಅದು "ಅನುಷ್ಕ'. ದೇವರಾಜ್‌ ಕುಮಾರ್‌ "ಅನುಷ್ಕ' ಎಂಬ ಸಿನಿಮಾವೊಂದನ್ನು ಸದ್ದಿಲ್ಲದೇ ಮಾಡಿದ್ದಾರೆ. ಇದು ಕನ್ನಡ, ತಮಿಳು ಹಾಗೂ ತೆಲುಗಿನಲ್ಲಿ ತಯಾರಾಗುತ್ತಿದ್ದು, ಅಮೃತಾ ಅಯ್ಯರ್‌ ಈ ಚಿತ್ರದ ನಾಯಕಿ. ರೂಪೇಶ್‌ ಶೆಟ್ಟಿ ನಾಯಕ. ಎಲ್ಲಾ ಓಕೆ, "ಅನುಷ್ಕ'ದಲ್ಲಿ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ನಿರ್ದೇಶಕ ದೇವರಾಜ್‌ ಕುಮಾರ್‌ ಹೇಳುವಂತೆ ಚಿತ್ರದ ಕಥೆ ಮೂರು ಟ್ರ್ಯಾಕ್‌ಗಳಲ್ಲಿ ಸಾಗುತ್ತದೆಯಂತೆ. ಅಂತಿಮವಾಗಿ ಮೂರು ಟ್ರ್ಯಾಕ್‌ಗಳಿಗೂ ಲಿಂಕ್‌ ಸಿಗಲಿದೆ ಎನ್ನುತ್ತಾರೆ. ತನ್ನ ಸಾಮ್ರಾಜ್ಯ, ಅಲ್ಲಿನ ಜನರನ್ನು ರಕ್ಷಿಸುವ ರಾಣಿಯ ಕಥೆ, ಮಧುಚಂದ್ರಕ್ಕೆ ಬಂದ ನವದಂಪತಿ ಹಾಗೂ ಸಮಾಜದಲ್ಲಿ ನಡೆದಂತಹ ನೈಜ ಘಟನೆ ... 

ಹೀಗೆ ಮೂರು ಟ್ರ್ಯಾಕ್‌ಗಳು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆಯಂತೆ. ಮೂರು ಟ್ರ್ಯಾಕ್‌ಗಳಲ್ಲೂ ಅಮೃತಾ ನಟಿಸುತ್ತಿದ್ದು, ಇದು ನಾಯಕಿ ಪ್ರಧಾನ ಚಿತ್ರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸುಮಾರು ಮೂರು ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆಯಂತೆ. ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ರೂಪೇಶ್‌ ಗೆ ಮೂರನೇ ಬಾರಿಗೆ ದೇವರಾಜ್‌ ಸಿನಿಮಾದಲ್ಲಿ ನಟಿಸುತ್ತಿರುವ ಖುಷಿ. ಜೊತೆಗೆ ಫಾರಿನ್‌ನಲ್ಲಿ
ಚಿತ್ರೀಕರಣವಾದ ಅವರ ಮೊದಲ ಸಿನಿಮಾ ಕೂಡಾ ಇದಂತೆ. "ನನ್ನ ಕೆರಿಯರ್‌ನಲ್ಲಿ ಇದು ಹೊಸ ಬಗೆಯ ಚಿತ್ರ. ದೇವರಾಜ್‌ ಈ ಹಿಂದಿನ ಎರಡು ಸಿನಿಮಾದಲ್ಲಿ ವಿಭಿನ್ನ ಪಾತ್ರ ನೀಡಿದ್ದರು. ಈಗ ಮೂರನೇ ಸಿನಿಮಾದಲ್ಲೂ ನನಗೆ ಒಳ್ಳೆಯ ಪಾತ್ರ ಕೊಟ್ಟಿದ್ದಾರೆ' ಎಂದು ಹೇಳಿಕೊಂಡರು ರೂಪೇಶ್‌. ಈಗಾಗಲೇ "ನಾಕುಮುಖ' ಸಿನಿಮಾದಲ್ಲಿ ನಟಿಸಿರುವ ಅಮೃತಾಗೆ ಈ ಸಿನಿಮಾದಲ್ಲಿ ದೊಡ್ಡ ಪಾತ್ರ ಸಿಕ್ಕಿದೆಯಂತೆ. ಮೂರು ಶೇಡ್‌ನ‌ಲ್ಲಿ
ಸಾಗುವ ಪಾತ್ರ ಇದಾಗಿದ್ದು, ಪ್ರಾಣ ಒತ್ತೆ ಇಟ್ಟು ತನ್ನ ಜನರನ್ನು ರಕ್ಷಿಸಲು ಹೋರಾಡುವ ರಾಣಿಯಾಗಿಯೂ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿ ಆ್ಯಕ್ಷನ್‌ ದೃಶ್ಯಗಳು ಇದ್ದು, ತಂಡದ ಸಹಕಾರದಿಂದ ಮಾಡಿದ್ದಾಗಿ ಹೇಳಿಕೊಂಡರು. ಉಳಿದಂತೆ ಚಿತ್ರದಲ್ಲಿ "ಕಡ್ಡಿಪುಡಿ' ಕಾಂತರಾಜು ಹಾಗೂ ಬಲರಾಜು ವಾಡಿ ನಟಿಸಿದ್ದಾರೆ. ಚಿತ್ರವನ್ನು ಎಸ್‌.ಕೆ.ಗಂಗಾಧರ್‌ ನಿರ್ಮಿಸುತ್ತಿದ್ದು, ವೀನಸ್‌ ಮೂರ್ತಿ ಛಾಯಾಗ್ರಹಣವಿದೆ.


Trending videos

Back to Top