ಸ್ವಾರ್ಥರತ್ನನ ವಿಭಿನ್ನ ಯೋಚನೆ

Team Udayavani, Oct 12, 2018, 6:00 AM IST

z-29.jpg

ಆ ವೇದಿಕೆ ಮೇಲೆ ಹಿರಿಯ ನಿರ್ದೇಶಕ ಭಗವಾನ್‌ ನಿಂತಿದ್ದರು. ಅವರ ಎದುರು ರೆಟ್ರೋ ಶೈಲಿಯ ಕಾಸ್ಟೂಮ್‌ನಲ್ಲಿ ನಾಯಕ ಆದರ್ಶ್‌ ಮತ್ತು ನಾಯಕಿ ಇಶಿತಾ ವರ್ಷ ನಿಂತಿದ್ದರು. ಪಕ್ಕದಲ್ಲೇ ನಿರ್ದೇಶಕ ಅಶ್ವಿ‌ನ್‌ ಕೊಡಂಗಿ ಚಿಕ್ಕದ್ದೊಂದು ಕ್ಯಾಮೆರಾ ಹಿಡಿದು ನಿಂತಿದ್ದರು. ಎದುರಿಗಿದ್ದ ಕ್ಯಾಮೆರಾಗಳು ಅವರ ಮೇಲೆ ಫೋಕಸ್‌ ಆಗಿದ್ದವು. ಭಗವಾನ್‌ ಆ್ಯಕ್ಷನ್‌ ಹೇಳಿದರು. ಗಾಯಕ ಮೋಹನ್‌ ಕೃಷ್ಣ “ನೀ ಬಂದು ನಿಂತಾಗ…’ ಹಾಡು ಗುನುಗಿದರು. ವೇದಿಕೆ ಮೇಲೆ ಆದರ್ಶ್‌ ಮತ್ತು ಇಶಿತಾ ವರ್ಷ ಇಬ್ಬರೂ

 ಕೈ ಹಿಡಿದು ಅತ್ತಿಂದಿತ್ತ, ಇತ್ತಿಂದತ್ತ ಹೆಜ್ಜೆ ಹಾಕಿದರು. ಭಗವಾನ್‌ ಕಟ್‌ ಇಟ್‌ ಅಂದರು. ಎಲ್ಲರೂ ಚಪ್ಪಾಳೆ ತಟ್ಟಿದರು. ವೇದಿಕೆ ಮೇಲಿದ್ದ ನಾಯಕಿ ನಾಚಿನೀರಾದರು… ಇದು ಯಾವುದೋ ಚಿತ್ರದ ಚಿತ್ರೀಕರಣದ ದೃಶ್ಯವಲ್ಲ. “ಸ್ವಾರ್ಥರತ್ನ’ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಸಮಾರಂಭದಲ್ಲಿ ಕಂಡು ಬಂದ ದೃಶ್ಯ. ಇದಕ್ಕೆ ಕಾರಣ, ಚಿತ್ರದಲ್ಲೊಂದು “ನಿನ್ನಯನ..’ ಎಂಬ ರೆಟ್ರೋ ಶೈಲಿಯ ಕಪ್ಪು ಬಿಳುಪಿನ ಹಾಡಿದೆ. ಆ ಹಾಡನ್ನು ಬಿಡುಗಡೆ ಮಾಡಿದ್ದು ಹಿರಿಯ ನಿರ್ದೇಶಕ ಭಗವಾನ್‌. ಅಂದು ಭಗವಾನ್‌ ಆ್ಯಕ್ಷನ್‌ ಹೇಳುವ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷ. ಈ ವೇಳೆ ಭಗವಾನ್‌, ತಮ್ಮ ಹಳೆಯ ನೆನಪಿಗೆ ಜಾರಿದರಲ್ಲದೆ, “ನೀ ಬಂದು ನಿಂತಾಗ..’ ಹಾಡನ್ನು ಬೆಳಗ್ಗೆ 7 ಕ್ಕೆ ಶುರುಮಾಡಿ, ಸಂಜೆ 5 ಕ್ಕೆ ಮುಗಿಸಿದ ವಿಷಯ ಹಂಚಿಕೊಂಡರು. ಇದು ಮೊದಲ ಹಾಡಿನ ವಿಷಯವಾದರೆ,

ಎರಡನೇ ಹಾಡಿನ ಬಿಡುಗಡೆ ಕೂಡ ವಿಶೇಷವಾಗಿತ್ತು. ಯಶ್‌-ರಾಧಿಕಾ ಅವರ ಜೋಡಿ ಮೇಲೊಂದು “ಅವಳ ಕಂಡಂತೆ..’ ಎಂಬ ಹಾಡಿದೆ. ಆ ಹಾಡನ್ನು ಯಶ್‌ ಅವರ ಬಳಿ ಅನುಮತಿ ಪಡೆದು, ಅವರ ಅಭಿಮಾನಿಗಳಿಂದಲೇ ಹಾಡನ್ನು ಬಿಡುಗಡೆ ಮಾಡಿಸಿದರು ನಿರ್ದೇಶಕ ಅಶ್ವಿ‌ನ್‌ ಕೊಡಂಗಿ. ವೇದಿಕೆಗೆ ಬಂದ ಯಶ್‌ ಅಭಿಮಾನಿಗಳ ಸಂಘದ ವಜ್ರಮುನಿ, ಸತೀಶ್‌, ಬಸವರಾಜ್‌ ಬಳ್ಳಾರಿ, ನಿಖೀಲ್‌ ಸೇರಿದಂತೆ ಗದಗ್‌, ಚಿಕ್ಕಮಗಳೂರಿನಿಂದ ಆಗಮಿಸಿದ್ದ ಅಭಿಮಾನಿಗಳು, ಯಶ್‌ ಹಾಗು ರಾಧಿಕಾ ಅವರ ಭಾವಚಿತ್ರ ಬಿಡುಗಡೆ ಮಾಡುವ ಮೂಲಕ ಅವರ ಕುರಿತ ಹಾಡನ್ನು ಬಿಡುಗಡೆ ಮಾಡಿದರು.

ಆ ನಂತರ “ಅಯ್ಯೋ ಅಯ್ಯೋ..’ ಎಂಬ ಎಣ್ಣೆ ಹಾಡೊಂದನ್ನು ಸಭಾಂಗಣದಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರನ್ನು ವೇದಿಕೆಗೆ ಆಹ್ವಾನಿಸಿ, ಅವರಿಂದ ಬಾಟಲ್‌ ಓಪನ್‌ ಮಾಡುವ ಮೂಲಕ ಬಿಡುಗಡೆ ಮಾಡಿಸಲಾಯಿತು. ಆ ಹಾಡಿಗೆ ಸಾಧುಕೋಕಿಲ ಹೆಜ್ಜೆ ಹಾಕಿದ್ದರಿಂದ, ಬಾಟಲ್‌ ಮೇಲೆ ಸಾಧು ಅವರ ಭಾವಚಿತ್ರ ರಾರಾಜಿಸುತ್ತಿದ್ದದ್ದು ವಿಶೇಷವಾಗಿತ್ತು. ಇದಾದ ಬಳಿಕ ವೇದಿಕೆಗೆ ಅಂಚೆಪೆಟ್ಟಿಗೆಯನ್ನೂ ತಂದಿಡಲಾಯಿತು. ಆಗಲೂ ವೇದಿಕೆಗೆ ಒಬ್ಬರನ್ನು ಆಹ್ವಾನಿಸಿ, ಅವರಿಂದ ಅದರೊಳಗಿದ್ದ ಲೆಟರ್‌ವೊಂದನ್ನು ತೆಗೆಸಿ ಜಯಂತ್‌ ಕಾಯ್ಕಿಣಿ ಅವರು ಬರೆದ “ಜೀವ ಕರೆಯೋಲೆ’ ಹಾಡನ್ನು ಬಿಡುಗಡೆ ಮಾಡಿಸಲಾಯಿತು. ಅಲ್ಲಿಗೆ ಸಮಯವೂ ಮೀರಿತ್ತು. ಚಿತ್ರದ ಬಗ್ಗೆ ಮಾತುಕತೆಗಿಂತ ಅಂದು ಹಾಡುಗಳನ್ನು ಬಿಡುಗಡೆ ಮಾಡಿಸುವುದರಲ್ಲೇ ನಿರ್ದೇಶಕರು ಸಮಯ ಕಳೆದರು.

ಸಂಗೀತ ನಿರ್ದೇಶಕ ಬಿ.ಜೆ.ಭರತ್‌ ಚಿತ್ರದಲ್ಲಿರುವ ಹಾಡುಗಳ ಬಗ್ಗೆ ಗುಣಗಾನ ಮಾಡಿದರು. ನಿರ್ದೇಶಕ ಅಶ್ವಿ‌ನ್‌ ಚಿತ್ರ ಮೂಡಿಬಂದ ಬಗೆ ವಿವರಿಸಿದರು. ನಾಯಕಿಯರಾದ ಇಶಿತಾ ವರ್ಷ ಹಾಗೂ ಸ್ನೇಹಾ ಸಿಂಗ್‌ ಪಾತ್ರ ಹಾಗೂ ಚಿತ್ರ ಬಗ್ಗೆ ಹೇಳಿಕೊಂಡರು. ಅಲ್ಲಿಗೆ ಹಾಡುಗಳ ಬಿಡುಗಡೆಗೆ ಬ್ರೇಕ್‌ ಬಿತ್ತು.

ಟಾಪ್ ನ್ಯೂಸ್

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.