ಅಚಾತುರ್ಯದ ಸುತ್ತ ಗಿಲ್‌


Team Udayavani, Nov 9, 2018, 6:00 AM IST

29.jpg

ಚಿತ್ರರಂಗಕ್ಕೆ ಬರಬೇಕು ಎಂಬ ಹೊಸ ಪ್ರತಿಭೆಗಳು ಇತ್ತೀಚೆಗೆ ಮೊದಲು ಮುಖ ಮಾಡುವುದು ಕಿರುಚಿತ್ರಗಳತ್ತ. ತಮ್ಮ
ಪ್ರತಿಭೆಯನ್ನು ಒರೆಗೆ ಹಚ್ಚಲು ಕಿರುಚಿತ್ರಗಳು ಉತ್ತಮ ವೇದಿಕೆಯಾಗುತ್ತಿವೆ. ಇತ್ತೀಚೆಗೆ ಕಿರುಚಿತ್ರದ ಮೂಲಕವೇ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಭರವಸೆ ಮೂಡಿಸಿ ದೊಡ್ಡ ಚಿತ್ರಗಳನ್ನು ನಿರ್ಮಿಸಲು ಮುಂದಾಗಿರುವ ಹೊಸಪ್ರತಿಭೆಗಳ ಉದಾಹರಣೆಗಳು ಚಿತ್ರರಂಗದಲ್ಲಿ ಸಾಕಷ್ಟು ಸಿಗುತ್ತವೆ. ಈ ಸಾಲಿಗೆ ಈಗ ಮತ್ತೂಂದು ಕಿರುಚಿತ್ರ ಸೇರ್ಪಡೆಯಾಗುತ್ತಿದೆ. ಅದರ ಹೆಸರು “ದಿ ಗಿಲ್ಟ್’. 

“ಬೆಂದಕಾಳೂರು ಪಿಕ್ಚರ್’ ಎಂಬ ಸಂಸ್ಥೆಯ ಮೂಲಕ ಚಿತ್ರರಂಗದ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಂಡ, ಸಮಾನ ಮನಸ್ಕರು – ಸಮಾನ ವಯಸ್ಕರು ಸೇರಿಕೊಂಡು “ದಿ ಗಿಲ್ಟ್’ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಸುಮಾರು ಮೂರು ವರ್ಷಗಳ ಹಿಂದೆ ಆರಂಭವಾದ “ಬೆಂದಕಾಳೂರು ಪಿಕ್ಚರ್’ ಸಂಸ್ಥೆ ಪ್ರತಿಭಾವಂತ ಯುವಕರ ತಂಡವನ್ನು ಕಟ್ಟಿಕೊಂಡು, ಕಿರುಚಿತ್ರಗಳು, ವೆಬ್‌ ಸೀರಿಸ್‌ಗಳ ನಿರ್ಮಾಣದಲ್ಲಿ ತೊಡಗಿಕೊಂಡಿದೆ. ಇದರ ಜತೆಗೆ ಬೇರೆ ಸಂಸ್ಥೆಗಳ, ತಂಡಗಳ ಚಿತ್ರ ನಿರ್ಮಾಣ ಕಾರ್ಯಕ್ಕೂ ಕೈ ಜೋಡಿಸುತ್ತಿದೆ.

ಸಣ್ಣ ಅಚಾತುರ್ಯದಿಂದ ನಡೆದ ಘಟನೆಗಳು ಹೇಗೆ ಜೀವಕ್ಕೆ ಕುತ್ತು ತರಲಿವೆ. ಇದರಿಂದ ಹೇಗೆಲ್ಲ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಂಬುದು “ದಿ ಗಿಲ್ಟ್’ ಕಿರುಚಿತ್ರದ ಕಥೆಯ ಒಂದು ಎಳೆ. ಸುಮಾರು ಹತ್ತು ನಿಮಿಷ ಅವಧಿಯ ಈ ಕಿರುಚಿತ್ರ ಕೇವಲ ನಾಲ್ಕು ಪಾತ್ರಗಳ ಸುತ್ತ ನಡೆಯುತ್ತದೆ. “ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಅಮೃತಾ ನಾಯಕ್‌ ಈ ಕಿರುಚಿತ್ರದ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಕಿರುತೆರೆ ನಟ ನವೀನ್‌ ವಿಕ್ಟರ್‌, ಅಶ್ವಿ‌ನ್‌ ಹಾಸನ್‌ ಮತ್ತಿತರರು
ಚಿತ್ರದ ಇತರ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಹಿಂದೆ ಪ್ರಥಮಬಾರಿಗೆ ಮಲ್ಟಿಫ್ಲೆಕ್ಸ್‌ನಲ್ಲಿ ತೆರೆಕಂಡಿದ್ದ “ಇಂಡಿಪೆಂಡೆಂಟ್‌’, “ನೆವರ್‌ ಎಂಡ್‌’ ಮೊದಲಾದ ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಧೀರಜ್‌ ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕೇವಲ ಒಂದು ದಿನದಲ್ಲಿ ಈ ಕಿರುಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಗುಣಮಟ್ಟದಲ್ಲಿ ಕೊರತೆಯಾಗಬಾರದು ಎಂಬ ಕಾರಣಕ್ಕೆ ಚಿತ್ರ ನಿರ್ಮಾಣದಲ್ಲಿ ಬಳಸುವ ಅತ್ಯಾಧುನಿಕ ಕ್ಯಾಮರ, 
ಮತ್ತಿತರ ಪರಿಕರಗಳನ್ನೆ ಇಲ್ಲಿ ಬಳಸಿಕೊಳ್ಳಲಾಗಿದೆ. ಇನ್ನು “ದಿ ಗಿಲ್ಟ್’ ಕಿರುಚಿತ್ರವನ್ನು ನೋಡಿ ಮೆಚ್ಚಿರುವ ನಟ ಶ್ರೀಮುರಳಿ ಇದನ್ನು ತಮ್ಮ ಅಧಿಕೃತ ಯೂ-ಟ್ಯೂಬ್‌ ಚಾನಲ್‌ ಮೂಲಕ ಬಿಡುಗಡೆ ಮಾಡಿ, ತಂಡಕ್ಕೆ ಶುಭ ಹಾರೈಸಿದ್ದಾರೆ. ಇನ್ನು “ದಿ ಗಿಲ್ಟ್’ ಕಿರುಚಿತ್ರಕ್ಕೆ ಪ್ರೇಕ್ಷಕರಿಂದ, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೇ ಖುಷಿಯಲ್ಲಿ ತಂಡ ಶಾರ್ಟ್‌ ಫಿಲಂನಿಂದ ಫಿಚರ್‌ ಫಿಲಂನತ್ತ ಗಮನ ಹರಿಸಿದ್ದು, ಚಿತ್ರದ ಪ್ರೀ ಪ್ರೊಡಕ್ಷನ್‌ ಕೆಲಸಗಳನ್ನು ಆರಂಭಿಸಿದೆ.

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.