ಟೀಸರ್‌ ಮೂಲಕ ಟ್ಯೂಬ್‌ ಬೆಳಕು

Team Udayavani, Nov 9, 2018, 6:00 AM IST

30.jpg

“ದಾರಿ ಇರುವ ಕಡೆ ಮಾತ್ರ ಹೋಗಬೇಕು. ಹಾಗೊಂದು ವೇಳೆ ದಾರಿ ತಪ್ಪಿದರೆ ಏನೆಲ್ಲಾ ಆಗುತ್ತೆ ಗೊತ್ತಾ…’?

– ಹೀಗೆ ಹೇಳಿ ಸುಮ್ಮನಾದರು ನಿರ್ದೇಶಕ ವೇಣುಗೋಪಾಲ್‌. ಅವರು ಹೇಳಿದ್ದು “ಟ್ಯೂಬ್‌ಲೈಟ್‌’ ಚಿತ್ರದ ಬಗ್ಗೆ. ಈ ಟೈಟಲ್‌
ಎಲ್ಲೋ ಕೇಳಿದಂತಿದೆಯಲ್ಲಾ ಎಂಬ ಪ್ರಶ್ನೆ ಎದುರಾಗಬಹುದು. ಕಳೆದ ನಾಲ್ಕು ವರ್ಷಗಳ ಹಿಂದೆ ಶುರುವಾದ ‌ “ಟ್ಯೂಬ್‌ಲೈಟ್‌’ ಈಗ ಬೆಳಕಿಗೆ ಬಂದಿದೆ. ನಿರ್ದೇಶಕ ವೇಣುಗೋಪಾಲ್‌, ಚಿತ್ರ¨ ‌ ಟೀಸರ್‌ ಬಿಡುಗಡೆ ಮಾಡಲೆಂದೇ ತಮ್ಮ ಚಿತ್ರತಂಡದೊಂದಿಗೆ ಮಾಧ್ಯಮ ಮುಂದೆ ಬಂದಿದ್ದರು. ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ನಿರ್ದೇಶಕ ವೇಣುಗೋಪಾಲ್‌, ಆ ಕೆಲಸಕ್ಕೆ ಗುಡ್‌ಬೈ ಹೇಳಿ, ಈ ಚಿತ್ರ ನಿರ್ದೇಶನಕ್ಕೆ ಮುಂದಾದರು. ಸಾಕಷ್ಟು ಏರಿಳಿತಗಳ ನಡುವೆ “ಟ್ಯೂಬ್‌ಲೈಟ್‌’ ಮುಗಿಸಿದ್ದಾರೆ.

ತಮ್ಮ “ಟ್ಯೂಬ್‌ಲೈಟ್‌’ ಕುರಿತು ವೇಣುಗೋಪಾಲ್‌ ಹೇಳಿದ್ದಿಷ್ಟು. “ಕಥೆ ಬಗ್ಗೆ ಹೇಳುವುದಾದರೆ, ಇಲ್ಲಿ ನಾಲ್ಕು ಪ್ರಮುಖ ಪಾತ್ರಗಳ ನಡುವೆ ಕಥೆ ಸಾಗಲಿದೆ. ದಾರಿ ಇರುವ ಕಡೆ ಮಾತ್ರ ಹೋಗಬೇಕು, ದಾರಿ ತಪ್ಪಿದರೆ ಏನಾಗುತ್ತೆ ಎಂಬುದೇ ಕಥೆಯ ಸಾರಾಂಶ. ಇಲ್ಲಿ ಸಾಕಷ್ಟು ಬದುಕಿಗೆ ಹತ್ತಿರವಾಗುವಂತಹ ವಿಷಯಗಳಿವೆ. ಚಿತ್ರ ನಾಲ್ಕು ವರ್ಷದ ಹಿಂದೆ ಶುರುವಾಗಿದ್ದು, ತಡವಾಗಲು ಅನೇಕ ಕಾರಣ. ಹಾಗೆ ಹೇಳುವುದಾದರೆ, ಲಡಾಕ್‌, ಉತ್ತರಖಾಂಡ ಸೇರಿದಂತೆ ಹಲವು ಕಡೆ ಚಿತ್ರೀಕರಿಸಲಾಗಿದೆ. ಅಲ್ಲಿ ಹೋದಾಗ, ಅಲ್ಲಿನ
ಹವಾಗುಣಕ್ಕೆ ಹೊಂದಿಕೊಂಡು ಚಿತ್ರೀಕರಣ ಮಾಡಲಾಗುತ್ತಿತ್ತು. ಹಾಗಾಗಿ ಸಮಯ ಸಾಕಷ್ಟು ಹಿಡಿಯಿತು. ಅದೂ ಒಂದು ತಡವಾಗಲು ಮುಖ್ಯ ಕಾರಣ. ಇದ್ದೊಂದು ಜರ್ನಿ ಕಥೆಯಾದ್ದರಿಂದ ಸಹಜವಾಗಿಯೇ ಸಮಯ ಬೇಕಾಯಿತು’ ಎಂಬುದು ನಿರ್ದೇಶಕರ ಮಾತು. ಚಿತ್ರದಲ್ಲಿ ಗುರುನಂದನ್‌ ಇದ್ದಾರೆ. ಅವರೊಂದಿಗೆ ಆರ್ಯನ್‌, ರೋಹಿತ್‌ ಶೆಟ್ಟಿ ಮತ್ತು ರಾಜ್‌ ಕೂಡ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. 

ಗುರುನಂದ ನ್‌ “ಟ್ಯೂಬ್‌ಲೈಟ್‌’ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದಾರಂತೆ. ಅವರು 2014ರಲ್ಲಿ ಈ ಚಿತ್ರ ಒಪ್ಪಿ ಕೆಲಸ ಶುರುಮಾಡಿದಾಗ, “ಫ‌ಸ್ಟ್‌ ರ್‍ಯಾಂಕ್‌ ರಾಜು’ ಚಿತ್ರವಿನ್ನೂ ಶುರುವಾಗಿರಲಿಲ್ಲವಂತೆ. ಗುರುನಂದನ್‌ ಇಲ್ಲಿ ಫೋಟೋಗ್ರಾಫ‌ರ್‌ ಆಗಿ ಕಾಣಿಸಿಕೊಂಡಿದ್ದು, ಒಂದು ಪ್ರಾಜೆಕ್ಟ್ ಮೇಲೆ ಅವರು ಲಡಾಕ್‌ಗೆ ಪ್ರಯಾಣ ಬೆಳೆಸುತ್ತಾರೆ. ಅವರ ಜೊತೆ ಮೂವರು ಗೆಳೆಯರೂ ಹೊರಡುತ್ತಾರೆ. ಆ ದಾರಿ ಮಧ್ಯೆ ಒಂದಷ್ಟು ಸಮಸ್ಯೆ ಎದುರಾಗುತ್ತದೆ. ಅದೇ ಚಿತ್ರ¨  ಹೈಲೈಟ್‌’ ಎಂಬುದು ಗುರುನಂದನ್‌
ಮಾತು. ಈ ಚಿತ್ರಕ್ಕೆ ಸಂಬಂಧಿಸಿದಂತೆ ವೆಂಕಟಾದ್ರಿ ಎಂಬುವವರು ಕಂಪ್ಯೂಟರ್‌ ಗೇಮ್‌ವೊಂದನ್ನು ರೂಪಿಸಿದ್ದು , ಹದಿನೈದು ಹಂತದ ಗೇಮ್‌ ಅದು ಎಂಬುದು ವಿಶೇಷ. ಆ ಪೈಕಿ ಐದು ಹಂತದ ಗೇಮ್‌ ಆಡಿ ವಿಜೇತರಾದವರಿಗೆ ಸಿನಿಮಾ ಟಿಕೆಟ್‌ ಉಚಿತ
ಎಂಬುದು ಚಿತ್ರತಂಡದ ಹೇಳಿಕೆ.

ಚಿತ್ರಕ್ಕೆ ಮನೋಹರ ಜೋಶಿ ಛಾಯಾಗ್ರಹಣವಿದೆ. ಚಿತ್ರಕ್ಕೆ ವಿವೇಕ್‌ ಚಕ್ರವರ್ತಿ ಎರಡು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಜಗನ್‌ ಚಿತ್ರಕ್ಕೆ ನಿರ್ಮಾಪಕರು. ಇನ್ನು, ಈ ಚಿತ್ರದಲ್ಲಿ ಅನುಶ್ರೀ ಮತ್ತು ಸಹನಾ ನಾಯಕಿಯರು. ಇನ್ನೊಂದು ವಿಶೇಷವೆಂದರೆ,
“ಮಠ’ ಗುರುಪ್ರಸಾದ್‌ ಇಲ್ಲೊಂದು ಕಲ್ಕಿ ಎಂಬ ಪಾತ್ರ ಮಾಡಿದ್ದಾರಂತೆ. ಒಂದರ್ಥದಲ್ಲಿ ಸಿನಿಮಾಗೆ ಅವರೇ “ಲೈಮ್‌ಲೈಟ್‌’ ಅಂತೆ. ಚಿತ್ರ ನೋಡಿದವರಿಗೆ ಲಡಾಕ್‌ಗೆ ಹೋಗಿ ಬಂದ ಅನುಭವ ಆಗೋದು ಗ್ಯಾರಂಟಿ ಎಂಬುದು ಚಿತ್ರತಂಡದ ಮಾತು. ಎಲ್ಲವೂ
ಅಂದುಕೊಂಡಂತೆ ನಡೆದರೆ, ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ “ಟ್ಯೂಬ್‌ಲೈಟ್‌’ ಆನ್‌ ಆಗುತ್ತದೆ.

ಟಾಪ್ ನ್ಯೂಸ್

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

16

ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ

1-gadaga

Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ

15

ಶರ್ಟ್‌ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

LS Polls: ಮಹಿಳಾ ಮೀಸಲಾತಿ ಕೊಟ್ಟಿದ್ದು ಮೋದಿ, ಕಾಂಗ್ರೆಸ್‌ನಿಂದ ಸುಳ್ಳಿನ ರಾಜಕಾರಣ: BYR

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.