ತೀರ್ಪು ನೀಡಲಾಗದ ಪ್ರೇಮಕಥೆ …


Team Udayavani, Nov 30, 2018, 6:00 AM IST

33.jpg

ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ತುಳು ಭಾಷೆಯಲ್ಲಿ ತಯಾರಾಗಿರುವ “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿ ಹೊರಬಂದಿವೆ. ಸುಮಾರು 158 ವರ್ಷಗಳ ಸುದೀರ್ಘ‌ ಕಾನೂನು ಹೋರಾಟದ ನಂತರ ತೃತಿಯ ಜಾತಿಯ ಜನರ ಪರವಾಗಿ ಹಾಗೂ ಐಪಿಸಿ ಕಾಲಂ 377 ಅನ್ವಯ ಸಲಿಂಗ ಪ್ರೀತಿ ಅಪರಾಧವಲ್ಲ ಎಂಬ ಸವೊìಚ್ಚ ನ್ಯಾಯಲಯದ ಪಂಚಪೀಠದ ತೀರ್ಪು ಇತ್ತೀಚೆಗೆ ಹೊರಬಂದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು. ಇದೇ ವೇಳೆ ನಿರ್ಲಕ್ಷಿತ ತೃತಿಯ ಲಿಂಗಿಗಳು ಮತ್ತು ಸಲಿಂಗಿಗಳ ಸಮುದಾಯದ ಜನರ ಭಾವನೆಗಳನ್ನು ಈ ಚಿತ್ರದಲ್ಲಿ ತೆರೆಮೇಲೆ ತೆರೆದಿಡಲಾಗುತ್ತಿದೆ ಎನ್ನುತ್ತದೆ ಚಿತ್ರತಂಡ. ಅಂದಹಾಗೆ, “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರಕ್ಕೆ ಟೇಶಿ ವೆಂಕಟೇಶ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಲಯನ್‌ ಎಸ್‌. ವೆಂಕಟೇಶ್‌ ಈ ಚಿತ್ರವನ್ನು ನಿರ್ಮಿಸಿದ್ದಾರೆ. 

“2012ರಲ್ಲಿ ಹಾಸನದಲ್ಲಿ ಇಬ್ಬರು ಸಲಿಂಗಿ ಹೆಣ್ಣು ಮಕ್ಕಳ ಬದುಕಿನಲ್ಲಿ ನಡೆದಿರುವ ಸತ್ಯ ಘಟನೆಯನ್ನು ಆಧರಿಸಿ ಈ ಚಿತ್ರವನ್ನು ನಿರ್ಮಿಸಲಾಗಿದ್ದು, ಈ ಚಿತ್ರಕ್ಕಾಗಿ ಸಾಕಷ್ಟು ವೈಜ್ಞಾನಿಕವಾಗಿ ಅಧ್ಯಯನ, ಪ್ರವಾಸ, ಸಂದರ್ಶನ ಮತ್ತು ಚಿತ್ರೀಕರಣಕ್ಕಾಗಿ ಮಾಡಿ ಸುಮಾರು ಆರು ವರ್ಷಗಳ ಸಮಯವನ್ನು ತೆಗೆದುಕೊಳ್ಳಲಾಗಿದೆ. ಚಿತ್ರದ ಮುಖ್ಯ ಕಥಾಹಂದರದಲ್ಲಿ ನೈಜ ಘಟನೆಯನ್ನಿಟ್ಟುಕೊಂಡು, ಉಳಿದಂತೆ ಒಂದಷ್ಟು ಕಾಲ್ಪನಿಕ ಸಂಗತಿಗಳನ್ನು  ಇಟ್ಟುಕೊಂಡು ಚಿತ್ರವನ್ನು ತೆರೆಮೇಲೆ ತರಲಾಗಿದೆ’ ಎನ್ನುತ್ತದೆ ಚಿತ್ರತಂಡ. 

“ತಂದೆ-ತಾಯಿಯಿಂದ ಜನ್ಮ ಪಡೆದಿರುವ ತೃತೀಯ ಸಮುದಾಯದವರನ್ನು ಪ್ರೀತಿಸಿ ಗೌರವಿಸವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ಈ ಎಲ್ಲಾ ವಿಚಾರಗಳನ್ನು ಅಳವಡಿಸಿಕೊಂಡಿರುವ ವಿಶಿಷ್ಟ ಹಾಗೂ ವಿಭಿನ್ನ ಸಂದೇಶವನ್ನು ಸಾರುವುದೇ ಚಿತ್ರದ ಹೂರಣವಾಗಿದೆ. ಅಡಿಬರಹದಲ್ಲಿ “ಇದು ತೀರ್ಪು ನೀಡಲಾಗದ ಪ್ರೇಮಕಥೆ’ ಎಂದು ಹೇಳಿದ್ದೇವೆ. ಅಂತಿಮವಾಗಿ ಜನರೇ ಯಾವುದು ಸರಿ, ಯಾವುದು ತಪ್ಪು ಎಂದು ಇದನ್ನು ನಿರ್ಣಯಿಸಲಿ’ ಎನ್ನುವುದು ಚಿತ್ರತಂಡದ ಮಾತು.

ಇನ್ನು ಚಿತ್ರದಲ್ಲಿ “ಬೆಸ್ಟ್‌ ಫ್ರೆಂಡ್ಸ್‌’ ಆಗಿ ಮೇಘನಾ ಮತ್ತು ದ್ರವ್ಯಾ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ಆಶಾ, ಸುಮತಿ ಪಾಟೀಲ್‌ ಮೊದಲಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಚಿತ್ರದ ಹಾಡುಗಳಿಗೆ ಆರವ್‌ ರಿಶಿಕ್‌  ಸಂಗೀತ ಸಂಯೋಜನೆಯಿದ್ದು, ಸುರೇಶ್‌ ಗುಟ್ಟಹಳ್ಳಿ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ರವಿ ಸುವರ್ಣ ಮತ್ತು ಧನುಷ್‌ ಜಯನ್‌ ಚಿತ್ರದ ದೃಶ್ಯಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಕೆ.ಆರ್‌.ಲಿಂಗರಾಜು ಸಂಕಲನ ಚಿತ್ರದಲ್ಲಿದೆ.  ಅಂಬ್ರೆಲಾ ಆಡಿಯೋಸ್‌ ಸಂಸ್ಥೆಯ ಮೂಲಕ “ಬೆಸ್ಟ್‌ ಫ್ರೆಂಡ್ಸ್‌’ ಚಿತ್ರದ ಆಡಿಯೋ ಬಿಡುಗಡೆಯಾಗಿದ್ದು, ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್‌ ಮತ್ತಿತರ ರಾಜಕೀಯ, ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ಹಾಡುಗಳು ಲೋಕಾರ್ಪಣೆಗೊಂಡವು. 

ಟಾಪ್ ನ್ಯೂಸ್

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

9-joshi

ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

ಲೋಕಸಭಾ ಚುನಾವಣೆ: ಈ ಬಾರಿ ತೆಲಂಗಾಣದಲ್ಲಿ 10ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು; ಅಭಯ ಪಾಟೀಲ

8-gadag

Gadag: ಭ್ರಷ್ಟ ಅಧಿಕಾರಿಗೆ ಬಿಸಿ ಮುಟ್ಟಿಸಿದ ಲೋಕಾಯುಕ್ತ ಅಧಿಕಾರಿಗಳು

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yuva rajkumar

Yuva Rajkumar; ಫ್ಯಾಮಿಲಿ ಡ್ರಾಮಾದಲ್ಲಿ ಯುವ ಕನಸು

lineman and dilkush cinema releasing today

Kannada Cinema; ಇಂದು ತೆರೆಗೆ ಬರುತ್ತಿದೆ ಲೈನ್ ಮ್ಯಾನ್, ದಿಲ್ ಖುಷ್

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

Somu Sound Engineer,Kerebete ; ಸಿನಿಜಾತ್ರೆಯಲ್ಲಿ ನೆಲದ ಸೊಗಡು

karataka damanaka movie

Karataka Damanaka; ಶಿವಣ್ಣ ಪ್ರಭುದೇವ ಜೊತೆಯಾಟ

ranganayaka movie releasing today

Ranganayaka Movie; ರಂಗಿನ ಕಥೆಯೊಂದಿಗೆ ರಂಗನಾಯಕ ಎಂಟ್ರಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

RC 17: ಮತ್ತೆ ಒಂದಾದ ರಂಗಸ್ಥಳಂ ತಂಡ

10-hunasagi-crime

Crime; ಹುಣಸಗಿ: ನೀರಿನ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Stock Market: ಬಾಂಬೆ ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಮಟ್ಟದ ಏರಿಕೆ

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Kollywood: ಸ್ಟೈಲಿಶ್‌ ಲುಕ್‌ನಲ್ಲಿ ಜಯಂ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.