ಹೊಸ ವರ್ಷಕ್ಕೆ ಹರಿಪ್ರಿಯಾ ಎಂಟು ಕನಸು

Team Udayavani, Jan 4, 2019, 12:30 AM IST

x-87.jpg

2019ರಲ್ಲಿ ಯಾವ ನಟಿಯ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದರೆ ಗಾಂಧಿನಗರ ಬೆರಳು ತೋರಿಸೋದು ಹರಿಪ್ರಿಯಾರತ್ತ. “ಏನ್‌ ಮೇಡಂ ನಿಮ್ದು, ಮೂರ್‍ನಾಲ್ಕು ಸಿನಿಮಾ ರಿಲೀಸ್‌ ಆಗುತ್ತಂತೆ’ ಎಂದರೆ, “ನಮ್ದು ಬಿಡಿ ಸಾರ್‌, ಹರಿಪ್ರಿಯಾ ಅವರದ್ದು ಈ ವರ್ಷ ಎಂಟು ಸಿನಿಮಾ ರಿಲೀಸ್‌ ಆಗುತ್ತೆ’ ಎಂದು ನಟಿಯರು ಹೇಳುವ ಮಟ್ಟಕ್ಕೆ ಹರಿಪ್ರಿಯಾ ಅವರು ಬಿಝಿಯಾಗಿದ್ದಾರೆ. ಈ ವರ್ಷ ಹರಿಪ್ರಿಯಾ ನಟಿಸಿದ ಬರೋಬ್ಬರಿ ಎಂಟು ಸಿನಿಮಾಗಳು ತೆರೆಕಾಣುತ್ತಿವೆ. “ಕುರುಕ್ಷೇತ್ರ’, “ಬೆಲ್‌ ಬಾಟಮ್‌’, “ಸೂಜಿದಾರ’, “ಎಲ್ಲಿದ್ದೇ ಇಲ್ಲಿ ತನಕ’, “ಡಾಟರ್‌ ಆಫ್ ಪಾರ್ವಮ್ಮ’, “ಬಿಚ್ಚುಗತ್ತಿ’, “ಕನ್ನಡ್‌ ಗೊತ್ತಿಲ್ಲ’ ಹಾಗೂ “ಕಥಾಸಂಗಮ’ ಚಿತ್ರಗಳಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಇದು ಈಗಾಗಲೇ ಹರಿಪ್ರಿಯಾ ಒಪ್ಪಿಕೊಂಡು ನಟಿಸಿರುವ ಹಾಗೂ ನಟಿಸುತ್ತಿರುವ ಚಿತ್ರಗಳು. ಇದರಲ್ಲಿ ಬಹುತೇಕ ಎಲ್ಲಾ ಚಿತ್ರಗಳು ಈ ವರ್ಷವೇ ತೆರೆಕಾಣಲಿದ್ದು, ಹರಿಪ್ರಿಯಾ ಖುಷಿಯನ್ನು ಹೆಚ್ಚಿಸಲಿವೆ. 

ಹರಿಪ್ರಿಯಾ ಖುಷಿಯಾಗಿರಲು ಕಾರಣ ಕೇವಲ ಸಂಖ್ಯೆಯಷ್ಟೇ ಅಲ್ಲ, ಬದಲಾಗಿ ಎಂಟು ಸಿನಿಮಾಗಳಲ್ಲಿ ಸಿಕ್ಕಿರುವ ಎಂಟು ವಿಭಿನ್ನ ಪಾತ್ರಗಳು ಸಿಕ್ಕಿವೆ. “ಕುರುಕ್ಷೇತ್ರ’ದಲ್ಲಿ ದರ್ಶನ್‌ ಜೊತೆ ನೃತ್ಯಾಗಾರ್ತಿಯಾದರೆ, “ಬೆಲ್‌ ಬಾಟಮ್‌’ನಲ್ಲಿ ಕುಸುಮ ಎಂಬ 80ರ ದಶಕದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. “ಸೂಜಿದಾರ’ದಲ್ಲಿ ಸೂಕ್ಷ್ಮ ಸಂವೇದನೆಯ ಪಾತ್ರವಾದರೆ, “ಡಾಟರ್‌ ಆಫ್ ಪಾರ್ವತಮ್ಮ’ದಲ್ಲಿ ಖಡಕ್‌ ತನಿಖಾಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಒಂದು ಸಿನಿಮಾಕ್ಕಿಂತ ಇನ್ನೊಂದು ಸಿನಿಮಾದಲ್ಲಿ ಅವರ ಪಾತ್ರ ಭಿನ್ನವಾಗಿದೆ. ಈ ನಂಬಿಕೆಯೊಂದಿಗೆ ಹರಿಪ್ರಿಯಾ ಎದುರು ನೋಡುತ್ತಿದ್ದಾರೆ. “ಈ ವರ್ಷ ನನ್ನ ಎಂಟು ಸಿನಿಮಾಗಳು ಬಿಡುಗಡೆಯಾಗುತ್ತವೆ ಎಂದು ನಾನು ಖುಷಿಪಡುತ್ತಿಲ್ಲ. ಬದಲಾಗಿ ಬಿಡುಗಡೆಯಾಗುತ್ತಿರುವ ಅಷ್ಟೂ ಸಿನಿಮಾಗಳಲ್ಲೂ ನನ್ನ ಪಾತ್ರ ಭಿನ್ನವಾಗಿದೆ ಎಂಬ ಖುಷಿ ಇದೆ. ಪ್ರತಿ ಪಾತ್ರವನ್ನು ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಹರಿಪ್ರಿಯಾ ಮಾತು. ಹರಿಪ್ರಿಯಾ ಅವರಿಗೆ 2018 ಕೂಡಾ ತುಂಬಾ ಖುಷಿ ಕೊಟ್ಟ ವರ್ಷವಂತೆ. “ಕಳೆದ ವರ್ಷ ಆರಂಭದಲ್ಲೇ ನನ್ನ ತೆಲುಗು ಸಿನಿಮಾ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಹಿಟ್‌ ಆಯಿತು. ಆ ನಂತರ ಬಿಡುಗಡೆಯಾದ ಚಿತ್ರಗಳ ಬಗ್ಗೆಯೂ ಮೆಚ್ಚುಗೆ ಸಿಕ್ಕಿತು. ಜೊತೆಗೆ ಸಾಕಷ್ಟು ಪಾತ್ರಗಳು ಹುಡುಕಿಕೊಂಡು ಬಂದುವು. ಈ ವರ್ಷ ಕೂಡಾ ಅದೇ ನಿರೀಕ್ಷೆಯಲ್ಲಿದ್ದೇನೆ. ಹಾಗಂತ ನಾನು ಯಾವುದನ್ನು ಪ್ಲ್ರಾನ್‌ ಮಾಡಿಲ್ಲ. ಬಂದಿದ್ದನ್ನು ಬಂದಂತೆ ಸ್ವೀಕರಿಸುತ್ತಿದ್ದೇನೆ’ ಎನ್ನುವುದು ಹರಿಪ್ರಿಯಾ ಮಾತು.

ಹೊಸ ವರ್ಷದಲ್ಲಿ ಹರಿಪ್ರಿಯಾ ಹೊಸ ಆಯಾಮವೊಂದಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಅದು ಬರವಣಿಗೆ. ಹೌದು, ಹರಿಪ್ರಿಯಾ ಬರವಣಿಗೆಯತ್ತ ಮನಸ್ಸು ಮಾಡಿದ್ದಾರೆ. ಈಗಾಗಲೇ ಬರವಣಿಗೆ ಆರಂಭಿಸಿದ್ದಾರೆ. “ಬರವಣಿಗೆ ಮಾಡಬೇಕೆಂಬುದು ನನ್ನ ಬಹುವರ್ಷಗಳ ಕನಸು. ಅದನ್ನು ಈಗ ಆರಂಭಿಸಿದ್ದೇನೆ. ಅದು ಎಲ್ಲಿಗೆ ಕರೆದುಕೊಂಡು ಹೋಗುತ್ತೋ ನೋಡಬೇಕು’ ಎನ್ನುವ ಹರಿಪ್ರಿಯಾ, “ಬಿಚ್ಚುಗತ್ತಿ’ ಚಿತ್ರಕ್ಕಾಗಿ ಕುದುರೆ ಸವಾರಿ ಕೂಡಾ ಕಲಿಯುತ್ತಿದ್ದಾರೆ. ಇನ್ನು, ಹರಿಪ್ರಿಯಾಗೆ ಬಿಡುವಿನ ವೇಳೆಯಲ್ಲಿ ಫ್ಯಾಮಿಲಿ ಜೊತೆ ಟೂರ್‌ ಹೋಗುವುದೆಂದರೆ ತುಂಬಾ ಇಷ್ಟವಂತೆ. ಈ ಮೂಲಕ ರಿಫ್ರೆಶ್‌ ಆಗುತ್ತಾರಂತೆ. 

ಟಾಪ್ ನ್ಯೂಸ್

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.