ಲಂಬೋದರನ ವೇದಿಕೆಯಲ್ಲಿ ಯೋಗಿ ಕನಸು


Team Udayavani, Jan 11, 2019, 12:30 AM IST

q-20.jpg

“ನನ್ನ ಕೆರಿಯರ್‌ನಲ್ಲಿ ಇದು ಕಂಬ್ಯಾಕ್‌ ಸಿನಿಮಾ…’
– ಹೀಗೆ ಹೇಳುತ್ತಲೇ, “ಈ ಚಿತ್ರ ನನಗಷ್ಟೇ ಅಲ್ಲ, ಸಿನಿಮಾದಲ್ಲಿ ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಗೆಲುವು ಕೊಡುತ್ತೆ ಎಂಬ ನಂಬಿಕೆ ನನಗಿದೆ’ ಎಂದು ನಟ ಯೋಗಿ ಹೇಳುತ್ತಾ ಹೋದರು. ಅವರು ಹೇಳಿದ್ದು “ಲಂಬೋದರ’ ಚಿತ್ರದ ಬಗ್ಗೆ. ಈ ವಾರ ರಾಜ್ಯಾದ್ಯಂತ ಚಿತ್ರ ತೆರೆಗೆ ಬರುತ್ತಿದೆ. ಚಿತ್ರತಂಡದ ಜೊತೆ ಆಗಮಿಸಿದ್ದ ಯೋಗಿ ತಮ್ಮ ಪಾತ್ರ ಕುರಿತು ಹೇಳಿಕೊಂಡರು. “ಇದುವರೆಗೆ ಸಾಕಷ್ಟು ಚಿತ್ರಗಳಲ್ಲಿ ಹಲವು ಪಾತ್ರ ನಿರ್ವಹಿಸಿದ್ದೇನೆ. ಇಲ್ಲಿ ವಿಶೇಷ ಪಾತ್ರ ಮಾಡಿದ್ದು ಖುಷಿ ಕೊಟ್ಟಿದೆ. ಇದೊಂದು ಮನರಂಜನಾತ್ಮಕ ಚಿತ್ರ. ನಗಿಸುವ ಪಾತ್ರ ತುಂಬ ಕಷ್ಟ. ಇಲ್ಲಿ ಕಲಿತುಕೊಳ್ಳಲು ಸಾಕಷ್ಟು ವಿಷಯಗಳಿತ್ತು. ನಿರ್ದೇಶಕ ಕೃಷ್ಣರಾಜ್‌ ಜೊತೆ ಹೊಸ ಅನುಭವ ಆಯ್ತು. ಅವರಿಗೆ ಏನೆಲ್ಲಾ ಬೇಕೋ ಅದು ಬರುವವರೆಗೂ ಬಿಡುತ್ತಿರಲಿಲ್ಲ. ಡೈಲಾಗ್‌ ಡೆಲಿವರಿ ವಿಷಯದಲ್ಲಂತೂ ಹೊಸತನ ತುಂಬಿದೆ. ಒಂದು ವರ್ಷದ ಬಳಿಕ ನನ್ನ ಚಿತ್ರ ಬಿಡುಗಡೆಯಾಗುತ್ತಿದೆ. ಎರಡು ಗಂಟೆ ಕುಳಿತು ಚಿತ್ರ ನೋಡುವ ಜನರಿಗೆ ಎಲ್ಲೂ ಮೋಸ ಆಗಲ್ಲ. ಇಲ್ಲಿ ಹಾಸ್ಯದ ಜೊತೆ ಸಂಬಂಧಗಳ ಮೌಲ್ಯ ಕುರಿತ ವಿಷಯಗಳೂ ಇವೆ. ಈಗಾಗಲೇ ಟ್ರೇಲರ್‌ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. “ಲಂಬೋದರ’ ನನ್ನ ಕೆರಿಯರ್‌ನಲ್ಲಿ ವಿಶೇಷ ಚಿತ್ರವೂ ಹೌದು, ಕಂಬ್ಯಾಕ್‌ ಚಿತ್ರವೂ ಹೌದು’ ಎನ್ನಲು ಮರೆಯಲಿಲ್ಲ ಯೋಗಿ.

ನಿರ್ದೇಶಕ ಕೃಷ್ಣರಾಜ್‌ಗೆ ಚಿತ್ರ ಬಿಡುಗಡೆಯಾಗುತ್ತಿರುವುದಕ್ಕೆ ಖುಷಿಯಾಗಿದೆಯಂತೆ. ಈಗಾಗಲೇ ಟ್ರೇಲರ್‌ಗೆ ಸಿಕ್ಕ ಮೆಚ್ಚುಗೆ ಅವರಿಗೆ ಮತ್ತಷ್ಟು ಧೈರ್ಯ ಹೆಚ್ಚಿಸಿದೆಯಂತೆ. “ಇಲ್ಲಿ ಹಾಸ್ಯದ ಜೊತೆ ಫ್ಯಾಮಿಲಿ ಸೆಂಟಿಮೆಂಟ್‌ ಕೂಡ ಇದೆ. ಯೋಗಿ ಅವರಿಗೆ ಮಾಸ್‌ ಫೀಲ್‌ ಇದೆ. ಆದರೆ, “ಲಂಬೋದರ’ ಹೊಸ ಫೀಲ್‌ ಕೊಡುವ ಚಿತ್ರವಾಗಲಿದೆ. ಇಲ್ಲಿ ಎಲ್ಲಾ ಪ್ಯಾಕೇಜ್‌ ಕೂಡ ಇದೆ. ಸ್ಕೂಲ್‌ ಎಪಿಸೋಡ್‌ನಿಂದ ಹಿಡಿದು, ಕಾಲೇಜ್‌, ಲವ್‌ ಆಗುವ ತನಕದ ವಿಷಯ ಇಲ್ಲಿದೆ. ಸುಮಾರು 150 ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದೇವೆ’ ಅಂದರು ನಿರ್ದೇಶಕರು.

ಅರುಣಾ ಬಾಲರಾಜ್‌ ಅವರಿಲ್ಲಿ ಅಮ್ಮನ ಪಾತ್ರ ಮಾಡಿದ್ದಾರಂತೆ. ಅವರೇ ಹೇಳುವಂತೆ, “ಅಮ್ಮನ ಪಾತ್ರ ಇಲ್ಲಿದ್ದರೂ ಅದು ಮಾಮೂಲು ಪಾತ್ರವಂತೂ ಅಲ್ಲ. ಸಂಬಂಧಗಳ ಮೌಲ್ಯಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ನಿರ್ದೇಶಕ ಮತ್ತು ಅವರ ತಂಡದ ಶ್ರಮದಿಂದ ಒಳ್ಳೆಯ ಚಿತ್ರವಾಗಿದೆ. ಯೋಗಿಗೆ ಇಲ್ಲಿ ಪೊರಕೆ ಏಟು ಜಾಸ್ತಿ ಬಿದ್ದಿದೆ ಎನ್ನುತ್ತಲೇ ಹಾಗೊಂದು ನಗು ಹೊರಹಾಕಿ ಸುಮ್ಮನಾದರು ಅರುಣಾ ಬಾಲರಾಜ್‌.

ನಿರ್ಮಾಪಕ ರಾಘವೇಂದ್ರ ಭಟ್‌ಗೆ ಚಿತ್ರ ಚೆನ್ನಾಗಿ ಮೂಡಿಬಂದ ತೃಪ್ತಿ ಇದೆಯಂತೆ. ಕನ್ನಡಿಗರು ಒಳ್ಳೆಯ ಚಿತ್ರವನ್ನು ಕೈ ಬಿಡುವುದಿಲ್ಲ ಎಂಬ ನಂಬಿಕೆಯಲ್ಲೇ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡರು. ಹಾಸ್ಯ ಕಲಾವಿದ ಧರ್ಮಣ್ಣ, ಸಿದ್ದು ತಮ್ಮ ತಮ್ಮ ಪಾತ್ರಗಳ ಕುರಿತು ವಿವರ ಕೊಟ್ಟರು.

ಟಾಪ್ ನ್ಯೂಸ್

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

mamata

EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

Kasaragod ವಿವಿಪ್ಯಾಟ್‌ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ವ್ಯಂಗ್ಯ

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್‌

kejriwal 2

ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್‌ಗೆ ಕೇಜ್ರಿವಾಲ್‌ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

1-weweqwe

Globant; ಮನೆಯಿಂದಲೇ 30,000 ಮಂದಿ ಕೆಲಸ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.