ಆಹಾ ಇಲಿಯ ಮದುವೆಯಂತೆ!


Team Udayavani, Mar 21, 2019, 12:30 AM IST

kan-ili.jpg

ಆರ್ಥಿಕ ಪರಿಸ್ಥಿತಿ ಹದಗೆಟ್ಟರೂ, ಹವಾಮಾನ ವೈಪರೀತ್ಯ ಉಂಟಾದರೂ ಜನಜೀವನ ಪರಿಸ್ಥಿತಿ ಅಸ್ತವ್ಯಸ್ತಗೊಳ್ಳಬಹುದು. ಅಂಗಡಿ, ಆಸ್ಪತ್ರೆ, ಕಚೇರಿಗಳು ಸರಿಯಾಗಿ ತೆರೆಯದೇ ಇರಬಹುದು. ಶಾಲೆಗಳಿಗೆ ರಜೆ ಘೋಷಿಸಬಹುದು. ಆದರೆ ಎಂಥ ಸಂದರ್ಭದಲ್ಲೂ ಮುಚ್ಚದೆ ನಡೆದುಕೊಂಡುಹೋಗುವ ವ್ಯವಹಾರವೆಂದರೆ ಮದುವೆಯದು. ವರ್ಷಪೂರ್ತಿ ನಡೆಯುತ್ತಲೇ ಇರುತ್ತದೆ. ಎಲ್ಲಾದರೂ ಇಲಿಗಳಲ್ಲಿ ಮದುವೆಯಾಗುವ ಪದ್ಧತಿ ಏನಾದರೂ ಇದ್ದರೆ ದಿನಕ್ಕೆ ಸಾವಿರಾರು ಮದುವೆಗಳು ನಡೆಯುತ್ತಿದ್ದವು. ಅದೇಕೆ ಅಂತೀರಾ? ನಮ್ಮಲ್ಲಿ  ವಯಸ್ಸಿಗೆ ಬಂದ ಹುಡುಗ ಹುಡುಗಿಯನ್ನು ಮದುವೆ ಮಾಡುತ್ತಾರಲ್ಲ, ಅದೇ ರೀತಿ ವಯಸ್ಸಿಗೆ ಬಂದ ಇಲಿಗಳ ನಡುವೆ ಮದುವೆ ಮಾಡುವುದೇ ಆದರೆ ಇಲಿಗಳಿಗೆ 3- 4 ತಿಂಗಳಾಗುತ್ತಲೇ ಮದುವೆ ಮಾಡಬೇಕಾಗಿ ಬರುತ್ತದೆ. ಅಯ್ಯೋ ನಮ್ಮಲ್ಲಿ 20 ವರ್ಷ ದಾಟಿರುತ್ತದೆ ಇಲಿಗಳಿಗ್ಯಾಕೆ ಅಷ್ಟು ಬೇಗ ಮದುವೆ ಎನ್ನಲಾಗುವುದಿಲ್ಲ, ಏಕೆಂದರೆ ಅವುಗಳ ಜೀವಿತಾವಧಿಯೇ ಕಡಿಮೆ ಎನ್ನುವುದನ್ನು ಮರೆಯಬಾರದು. ಅಲ್ಲದೆ ಇಲಿಗಳಿಗೆ 3- 4 ತಿಂಗಳಾಗುತ್ತಲೇ ಸಂತಾನೋತ್ಪತ್ತಿ ಮಾಡುವ ಸಾಮರ್ಥ್ಯವನ್ನು ಹೊಂದುತ್ತವೆ.

ದಕ್ಷಿಣ ಆಫ್ರಿಕಾದಲ್ಲಿ ಟ್ರೋಫಿ ಹಂಟರ್‌ಗಳು!
ಮನುಷ್ಯನಿಂದ ಜೀವ ವೈವಿಧ್ಯ ಮತ್ತು ಪ್ರಕೃತಿ ಎಂಥೆಂಥ ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತಿದೆ ಎಂಬುದರ ಕುರಿತು ಹೆಚ್ಚೇನೂ ಹೇಳಬೇಕಿಲ್ಲ. ಇಲ್ಲಿ ಹೇಳಲು ಹೊರಟಿರುವ ಸುದ್ದಿ ತಿಳಿದು ಅಚ್ಚರಿ, ಕೋಪ ಎಲ್ಲವೂ ಏಕಕಾಲಕ್ಕೆ ಉಂಟಾದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ. ದಕ್ಷಿಣ ಆಪ್ರಿಕಾದಲ್ಲಿ ಸಿಂಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸಲಾಗುತ್ತಿದೆ. ಇದರಲ್ಲಿ ಕೃತ್ರಿಮ ಯೋಚನೆ ಏನೂ ಕಾಣುವುದಿಲ್ಲ. ಆದರೆ ಈ ಸಿಂಹಗಳನ್ನು ಬೆಳೆಸುತ್ತಿರುವುದು ಬೇಟೆಯಾಡಲು ಎನ್ನುವ ಸಂಗತಿ ಆತಂಕಕಾರಿಯಾದುದು. ಮೋಜಿಗಾಗಿ, ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಬೇಟೆಯಾಡುವವರನ್ನು “ಟ್ರೋಫಿ ಹಂಟರ್’ ಎಂದು ಕರೆಯುತ್ತಾರೆ. ದಕ್ಷಿಣ ಆಪ್ರಿಕಾದಲ್ಲಿ ಸಿಂಹಗಳನ್ನು ಬೇಟೆಗಾಗಿ ಸಾಕುತ್ತಿರುವುದರಿಂದ ಜಗತ್ತಿನ ಅನೇಕ ಮಂದಿ ಟ್ರೋಫಿ ಹಂಟರ್‌ಗಳು ಅದರತ್ತ ಆಕರ್ಷಿತರಾಗುತ್ತಿದ್ದಾರೆ. ಶಾಟ್‌ ಗನ್‌, ಹ್ಯಾಂಡ್‌ ಗನ್‌, ಸಿಂಹ ಬೇಟೆಗಾಗಿ ಬಳಕೆಯಾಗುತ್ತಿರುವ ಆಯುಧಗಳು. ಇದಲ್ಲದೆ ಕೆಲ ಮಂದಿ ಕ್ರಾಸ್‌ ಬೋ(ಬಿಲ್ಲು ಬಾಣ) ಬಳಸಿಯೂ ಸಿಂಹಗಳನ್ನು ಬೇಟೆಯಾಡುತ್ತಾರಂತೆ. ಆದಿಮಾನವನಿಂದ ಬಹಳ ದೂರ ಸಾಗಿ ಬಂದಿರುವ ನಾವು ಇಂದಿಗೂ ಮೃಗೀಯ ಪ್ರವೃತ್ತಿಯನ್ನು ಬಿಟ್ಟಿಲ್ಲ ಎನ್ನುವುದು ಇಂಥ ಘಟನೆಗಳಿಂದ ಸಾಬೀತಾಗುತ್ತದೆ.

– ಹರ್ಷವರ್ಧನ್‌ ಸುಳ್ಯ

ಟಾಪ್ ನ್ಯೂಸ್

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

ಪಿಯು ಮೌಲ್ಯಮಾಪನಕ್ಕೆ ವಿರೋಧ

Second PU ಮೌಲ್ಯಮಾಪನಕ್ಕೆ ವಿರೋಧ

1-24-tuesday

Daily Horoscope: ಹಿತವಾದುದನ್ನು ಮಾತ್ರ ಆರಿಸಿಕೊಳ್ಳುವುದು ವಿವೇಕಿಗಳ ಲಕ್ಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.