ಪಂಜಾಬಿ ಹುಡುಗಿಯ ಗಾನ ಬಜಾನಾ


Team Udayavani, Mar 22, 2019, 12:30 AM IST

song-sun.jpg

ಸಂಗೀತವೆಂದರೆ ಹಾಗೆ, ಅದು ಯಾರನ್ನಾದರೂ ತನ್ನತ್ತ ಆಕರ್ಷಿಸುತ್ತದೆ. ಅದರ ಮೋಡಿಗೆ ತಲೆದೂಗದವರಿಲ್ಲ. ಆದರೆ ಕೆಲವೇ ಕೆಲವರನ್ನು ಮಾತ್ರ ಸಂಗೀತ ಸಿದ್ಧಿಸಿಬಿಡುತ್ತದೆ. ತನ್ನೊಳಗೇ ಸೇರಿಸಿಕೊಂಡು ಬಿಡುತ್ತದೆ. ಇಂತಹ ಸಂಗೀತದ ಮೂಲಕ ಸದ್ಯ ಉತ್ತರ ಭಾರತ ಮತ್ತು ಬಾಲಿವುಡ್‌ ಅಂಗಳದಲ್ಲಿ ಜೋರಾಗಿ ಹೆಸರು ಮಾಡುತ್ತಿರುವ ಹುಡುಗಿ ಸುನಂದಾ ಶರ್ಮಾ. 

ಸುನಂದಾ ಕಂಠಸಿರಿಯಲ್ಲಿ ಹೊರಬಂದ ಪಂಜಾಬಿನ “ಬಿಲ್ಲಿ ಆಹ್‌..” ಹಾಡಂತೂ ಈಕೆಗೆ ಪಂಜಾಬ್‌ ಮತ್ತು ಉತ್ತರ ಭಾರತದಲ್ಲಿ ಬಹುದೊಡ್ಡ ಸಂಖ್ಯೆಯ ಅಭಿಮಾನಿ ವರ್ಗವನ್ನೇ ಸೃಷ್ಟಿಸಿತು. ತನ್ನ ವಿಶಿಷ್ಠ ಧ್ವನಿಯ ಮೂಲಕ ಪಂಜಾಬಿ ಹಾಡುಗಳಿಗೆ ಜೀವ ತುಂಬುವ ಸುನಂದಾ ಹಾಡುಗಳನ್ನು ಆನಂದಿಸುವ, ಆಸ್ವಾಧಿಸುವ ಅಭಿಮಾನಿಗಳಿಗೆ, ಸಂಗೀತ ಪ್ರಿಯರಿಗೆ ಲೆಕ್ಕವಿಲ್ಲ. ಅದರಲ್ಲೂ ಮದುವೆ, ಮೆರವಣಿಗೆ ಹೀಗೆ  ಯಾವುದೇ ಸಂತೋಷದ ಸಮಾರಂಭಗಳಿರಲಿ, ಅಲ್ಲಿ ಸುನಂದಾ ಶರ್ಮಾ ಗೀತೆಗಳು ಇದ್ದರೇನೇ ಆ ಕಾರ್ಯಕ್ರಮಗಳು ಸಂಪೂರ್ಣವಾಗುವುದು ಎನ್ನುವಷ್ಟರ ಮಟ್ಟಿಗೆ ಸುನಂದಾ ಹಾಡುಗಳು ಜನಪ್ರಿಯವಾಗಿವೆ. 

ಇನ್ನು ಸುನಂದಾ ಶರ್ಮಾ ಅವರ “ಮ್ಯಾಡ್‌ ಫೋರ್‌ ಮ್ಯೂಸಿಕ್‌’ ವೀಡಿಯೊಗಳಂತೂ, ಈಕೆಯನ್ನು ಯಾವ ಸೆಲೆಬ್ರಿಟಿಗೂ ಕಡಿಮೆಯಿಲ್ಲದಂತೆ ಗುರುತಿಸುವಂತೆ ಮಾಡಿವೆ. ಸಾಮಾಜಿಕ ಕಳಕಳಿಯ ಉದ್ದೇಶದಿಂದ ಮಾಡಿದ ಈ ವೀಡಿಯೋಗಳಿಗೆ ಜನಸಾಮಾನ್ಯರಿಂದ, ಸಮಾಜದ ವಿವಿಧ ರಂಗದ ಗಣ್ಯರಿಂದ, ಸೆಲೆಬ್ರಿಟಿಗಳಿಂದ ದೊಡ್ಡ ಪ್ರಶಂಸೆ, ಮೆಚ್ಚುಗೆಯನ್ನು ತಂದು ಕೊಡುತ್ತಿದೆ. 

ಮೂಲತಃ ಅಮೃತ­ಸರದಲ್ಲಿ ಜನಿಸಿದ ಸುನಂದಾ ಶರ್ಮಾ, ತನ್ನ ವೃತ್ತಿ ಬದುಕನ್ನ ಆರಂಭಿಸಿದ್ದು ಮೊಹಾಲಿಯಲ್ಲಿ. 

ಬಾಲ್ಯದಿಂದಲೇ ಪಂಜಾಬ್‌ ಗೀತೆಗಳತ್ತ ಆಕರ್ಷಿತಳಾದ ಸುನಂದಾ ಅದೇ ಹಾಡುಗಳನ್ನು ತನ್ನ ವಿಶಿಷ್ಟ ಶೈಲಿಯಲ್ಲಿ ಹಾಡುವ ಮೂಲಕ ಪ್ರವರ್ಧಮಾನಕ್ಕೆ ಬಂದ ಹುಡುಗಿ. ಸದ್ಯ ಭಾರತದಲ್ಲಿ ದೆಹಲಿ, ಮುಂಬೈ, ಜಾರ್ಖಂಡ್‌ ಹೀಗೆ ಹಲವು ಕಡೆಗಳಲ್ಲಿ ನೂರಾರು ಸ್ಟೇಜ್‌ ಶೋಗಳನ್ನು ನೀಡಿರುವ ಸುನಂದಾ, ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ ಹೀಗೆ ಹಲವು ದೇಶಗಳಲ್ಲೂ ಹತ್ತಾರು ಸಂಗೀತ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡಿದ್ದಾರೆ. 

ಸುನಂದಾ ಅವರ ಬಹು ಜನಪ್ರಿಯವಾದ “ಪಟಾಕ..’, “ಜನನಿ ತೇರಾ ನಾ..’, “ಮೋರಾನಿ..’, ಮೊದಲಾದ ಸೂಪರ್‌ ಹಿಟ್‌ ಹಾಡುಗಳನ್ನು ಬಹುಶಃ ಪಂಜಾಬ್‌ ಸಂಗೀತ ರಂಗದಲ್ಲಿ ಗುನುಗದವರೇ  ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದೆ. 2018ರಲ್ಲಿ “ತೇರಾ ನಾಲ್‌ ನಾಚ್‌ನಾ…’ ಹಾಡಿನ ಮೂಲಕ ಬಾಲಿವುಡ್‌ ಸಂಗೀತ ಕ್ಷೇತ್ರಕ್ಕೂ ಅಡಿಯಿಟ್ಟಿರುವ ಸುನಂದಾ, ಒಂದೇ ಹಾಡಿನಲ್ಲಿ ಅದೆಷ್ಟೋ ನಿರ್ದೇಶಕರ ಹಾಟ್‌ ಫೇವರೆಟ್‌ ಗಾಯಕಿಯಾಗಿ ಗುರುತಿಸಿಕೊಂಡರು. ಸದ್ಯ ಸುನಂದ ಕಂಠ ಸಿರಿಯಲ್ಲಿ ಈ ವರ್ಷ ಬಾಲಿವುಡ್‌ನ‌ಲ್ಲಿ “ಸ್ಯಾಂಡಲ್‌…’ ಮತ್ತಿತರ ಚಿತ್ರದ ಗೀತೆಗಳು ಹೊರಗೆ ಬರಲು ತಯಾರಿ ನಡೆಸುತ್ತಿದ್ದು, ಅಪರೂಪದ ಗಾಯಕಿ ಸುನಂದಾ ಶರ್ಮಾ ಗೀತ ಯಾನ ಬಾಲಿವುಡ್‌ನ‌ಲ್ಲೂ ಭರ್ಜರಿಯಾಗಿ ಮುಂದುವರೆಯುವ ಲಕ್ಷಣಗಳು ಕಾಣುತ್ತಿದೆ.

ಸುನಂದಾ ಶರ್ಮಾ ಹಾಡಿಗೆ ಕೇಳುಗರು ಫಿದಾ 
ಸುನಂದಾ ಶರ್ಮಾ ಅವರ “ಮ್ಯಾಡ್‌ ಫೋರ್‌ ಮ್ಯೂಸಿಕ್‌’ ವೀಡಿಯೊ ಗಳಂತೂ, ಈಕೆಯನ್ನು ಯಾವ ಸೆಲೆಬ್ರಿಟಿಗೂ ಕಡಿಮೆಯಿಲ್ಲದಂತೆ ಗುರುತಿಸುವಂತೆ ಮಾಡಿವೆ. ಸಾಮಾಜಿಕ ಕಳಕಳಿಯ ಉದ್ದೇಶದಿಂದ ಮಾಡಿದ ಈ ವೀಡಿಯೋಗಳಿಗೆ ಜನಸಾಮಾನ್ಯ ರಿಂದ, ಸಮಾಜದ ವಿವಿಧ ರಂಗದ ಗಣ್ಯರಿಂದ, ಸೆಲೆಬ್ರಿಟಿಗಳಿಂದ ದೊಡ್ಡ ಪ್ರಶಂಸೆ, ಮೆಚ್ಚುಗೆಯನ್ನು ತಂದು ಕೊಡುತ್ತಿದೆ.

 

ಟಾಪ್ ನ್ಯೂಸ್

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Shivanna in lawyer look in Bhairathi Ranagal

Bhairathi Ranagal ಲಾಯರ್ ಶಿವಣ್ಣ; ಕುತೂಹಲ ಹೆಚ್ಚಿಸಿದ ಲುಕ್

Koti

Koti; ಡಾಲಿ ಕಣ್ಣಲ್ಲಿ ಕೋಟಿ ಕನಸು; ಪರಮ್‌ ನಿರ್ದೇಶನದ ಸಿನಿಮಾ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

Ritanya Vijay; ದುನಿಯಾ ವಿಜಯ್‌ ಮಗಳು ರಿತನ್ಯಾ ಗ್ರ್ಯಾಂಡ್ ಎಂಟ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.