CONNECT WITH US  

ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರಾಯೋಗಿಕ ಅಧ್ಯಯನ ಅಗತ್ಯ

ಪರಿಣತರ ಪಂಚಾಯ್ತಿ 

ಡಾ| ಬಿ. ಮುರಳೀಧರ ರಾವ್‌,
ರಸಾಯನಶಾಸ್ತ್ರ ಪ್ರಾಧ್ಯಾಪಕ, ಪ್ರಾಂಶುಪಾಲ ಗೋವಿಂದದಾಸ ಕಾಲೇಜು ಸುರತ್ಕಲ್‌

. ಬದುಕಿಗೂ ರಸಾಯನ ಶಾಸ್ತ್ರಕ್ಕೂ ಇರುವ ಸಾಮ್ಯತೆಗಳೇನು?
ಮನುಷ್ಯನಲ್ಲಿ ಯಾವ ರೀತಿ ವಿವಿಧ ಗುಣಗಳಿರುತ್ತೆಯೋ, ಅದೇ ರೀತಿ ರಸಾಯನ ಶಾಸ್ತ್ರಗಳಲ್ಲಿಯೂ ವಿವಿಧ ಗುಣಗಳಿಗೆ. ನ್ಯಾಚುರಲ್‌ ಮತ್ತು ಸಿಂಥೆಟಿಕ್‌ ಎಂಬ ಎರಡು ಪ್ರಕಾರಗಳನ್ನು ರಸಾಯನಶಾಸ್ತ್ರದಲ್ಲಿ ಕಾಣಬಹುದು.

. ರಸಾಯನಶಾಸ್ತ್ರ ಕಲಿಕಾ ವಿಧಾನಗಳಲ್ಲಿ ಏನಾದರೂ ಬದಲಾವಣೆಯಾಗಬೇಕು ಎಂದೆನಿಸುತ್ತಾ?
ರಸಾಯನ ಶಾಸ್ತ್ರ ಕಲಿಕಾ ವಿಧಾನಗಳಲ್ಲಿ ಪ್ರಾಯೋಗಿಕ ವಿಚಾರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಕಾಲೇಜುಗಳ ಕೊಠಡಿಯೊಳಗೆ ಕಲಿಸಿಕೊಡುತ್ತಿರುವ ಪಠ್ಯಕ್ರಮ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳ ಬೆಳವಣಿಗೆಗೆ ಪ್ರಾಯೋಗಿಕ ಅಧ್ಯಯನವೂ ಮುಖ್ಯವಾಗಿದೆ.

. ಸ್ಪರ್ಧಾತ್ಮಕ ಪರೀಕ್ಷೆಗಳು ರಸಾಯನ ಶಾಸ್ತ್ರ ಕಲಿಕೆಗೆ ಹೇಗೆ ಪೂರಕವಾಗಬಲ್ಲದು?
ಸ್ಪರ್ಧಾತ್ಮಕ ಪರೀಕ್ಷೆಗಳು ಮಾತ್ರ ರಸಾಯನಶಾಸ್ತ್ರ ಕಲಿಕೆಗೆ ಪೂರಕವಾಗುವುದಿಲ್ಲ. ಅಲ್ಲದೆ, ಯಾವುದೇ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಆಧಾರದಲ್ಲಿ ಮಾತ್ರ ಅಳೆಯಲು ಸಾಧ್ಯವಿಲ್ಲ.

. ರಸಾಯನ ಶಾಸ್ತ್ರ ಪಠ್ಯಕ್ರಮದಲ್ಲಿ ಆಗಬೇಕಾದ ಬದಲಾವಣೆಗಳೇನು?
ರಸಾಯನಶಾಸ್ತ್ರ ಪಠ್ಯಕ್ರಮದಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ವಿದ್ಯಾರ್ಥಿಗಳು ಕೂಡ ಈ ಕ್ಷೇತ್ರದ ಬೆಳವಣಿಗೆಗೆ ಸಂಬಂಧಿಸಿದಂತೆ ತಿಳಿದುಕೊಳ್ಳಬೇಕು. ವಿದ್ಯಾರ್ಥಿಗಳನ್ನು ಯಾವುದಾದರೂ ಕೈಗಾರಿಕಾ ಪ್ರದೇಶಗಳಿಗೆ ಪ್ರವಾಸ ಹೋಗಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿಯುವಂತಾಗಬೇಕು.

. ರಸಾಯನ ಶಾಸ್ತ್ರ ಕಲಿಕೆ, ಬಳಕೆ ಸರಿಯಾದ ಕ್ರಮದಲ್ಲಿ ಆಗುತ್ತಿದೆಯೇ?
ಇಂದಿನ ಕೆಲ ಕಾಲೇಜುಗಳಲ್ಲಿ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕ ಉಪಕರಣಗಳಿರುವುದಿಲ್ಲ. ಅಲ್ಲದೆ ಈ ಕ್ಷೇತ್ರದಲ್ಲಿ ವರ್ಷದಿಂದ ವರ್ಷಕ್ಕೆ ಹೊಸ ಹೊಸ ಸಂಶೋಧನೆಗಳಾಗುತ್ತಿದ್ದು, ವಿದ್ಯಾರ್ಥಿಗಳು ಇದನ್ನು ಅನುಸರಿಕೊಂಡು ಸಂದರ್ಭಕ್ಕೆ ತಕ್ಕಂತೆ ಅಪ್‌ಡೇಟ್‌ ಅಗಬೇಕು.

. ಟೆಕ್ನಾಲಜಿ ಯುಗದಲ್ಲಿ ನಾವಿರುವಾಗ ರಸಾಯನಶಾಸ್ತ್ರದ ಮುಂದಿನ ಭವಿಷ್ಯವೇನು?
ರಸಾಯನಶಾಸ್ತ್ರಕ್ಕೆ ಭವಿಷ್ಯವಿದೆ. ಇದು ಮಾನವನ ಜೀವನಕ್ಕೆ ಸಂಬಂಧಪಟ್ಟದ್ದಾಗಿದೆ. ದಿನಂಪ್ರತಿ ನಾವು ಉಪಯೋಗಿಸುವ ಅನೇಕ ವಸ್ತುಗಳಲ್ಲಿಯೂ ರಸಾಯನಶಾಸ್ತ್ರದ ಉಪಯೋಗವಿದೆ.

ಇಂದು ಹೆಚ್ಚು ಓದಿದ್ದು

Trending videos

Back to Top