ಭಾಷಾ ಕಲಿಕೆಯಿಂದ ಜ್ಞಾನಾಭಿವೃದ್ಧಿ 


Team Udayavani, Jan 30, 2019, 7:13 AM IST

30-january-11.jpg

ಭಾಷೆ ಇಂದು ಸಂವಹನದ ಜತೆಗೆ ಜ್ಞಾನಾಭಿವೃದ್ಧಿಯ ಮಾಧ್ಯಮ. ಹಾಗಾಗಿ ನಮ್ಮ ಮಾತೃ ಭಾಷೆ ಜತೆಗೆ ವ್ಯಾವಹಾರಿಕ, ಪ್ರಚಲಿತ ಭಾಷೆಗಳನ್ನು ಕಲಿತು ನಮ್ಮ ಸಂವಹನವನ್ನು ವೃದ್ಧಿಸಿಕೊಳ್ಳುವ ಮುಖೇನ ಭಾಷಾ ಜ್ಞಾನವನ್ನು ಸಾಧಿಸಿಕೊಂಡು ಸ್ವಾವಲಂಬಿಯಾಗುವುದು ಇಂದಿನ ಅವಶ್ಯ.

ಭಾಷೆ ಎಂಬುದು ಕೇವಲ ಸಂಭಾಷಣೆಯ, ವಿಷಯ ಸಂವಹನದ ಮಾಧ್ಯಮವಷ್ಟೇ ಅಲ್ಲ. ಜ್ಞಾನಾಭಿವೃದ್ಧಿ ಮಾಡುವ ಮಾಧ್ಯಮವೂ ಹೌದು. ನಮ್ಮ ಸುತ್ತಲಿನ ನೈಜ ಪ್ರಪಂಚವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯವಸ್ಥೆ. ನಮಗೆ ತಿಳಿದಿರುವ ಭಾಷೆಯೊಂದಿಗೆ ಇತರ ರೊಡನೆ ಸಂವಹಿಸಲು ಅಗತ್ಯವಿರುವ ಇನ್ನಿತರ ಭಾಷೆ ಗಳನ್ನು ಕಲಿಯುವ ಉತ್ಸಾಹ ಪ್ರತಿಯೊಬ್ಬರಲ್ಲೂ ಇರಬೇಕು.

ಮಾತೃ ಭಾಷೆಯಲ್ಲದ ಇತರ ಭಾಷೆಗಳನ್ನು ಕಲಿಯುವುದು ಇಂದಿನ ದಿನಗಳಲ್ಲಿ ಅವಶ್ಯವಾದ ಚಟು ವಟಿಕೆ. ಬಹುಭಾಷಾ ಸಮಾಜದಲ್ಲಿ ಇತರ ಭಾಷೆಗಳ ಜ್ಞಾನ ಹಾಗೂ ಬಳಕೆ ಸಾಮಾನ್ಯ. ಶಿಕ್ಷಣ ಪಡೆದ ಪ್ರತಿ ಯೊಬ್ಬನಲ್ಲೂ ತನ್ನ ನಾಡಭಾಷೆ, ರಾಷ್ಟ್ರಭಾಷೆ ಮತ್ತು ಅಂತಾರಾಷ್ಟ್ರೀಯ ಭಾಷೆಯ ಅರಿವಿರಬೇಕು. ಅದು ಇಂದಿನ ಆವಶ್ಯಕತೆಯೂ ಹೌದು. ಮಾತೃಭಾಷೆಯ ಕಡೆಗಣನೆ ಹಾಗೂ ಇತರ ಭಾಷೆಗಳ ಅತಿಯಾದ ಓಲೈಕೆ ತಪ್ಪು. ಆದರೆ ವೃತ್ತಿ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಇತರ ಭಾಷೆಗಳ ಕಲಿಯುವಿಕೆ ಬಹಳ ಮುಖ್ಯವಾಗಿದೆ.

ಪ್ರಸ್ತುತ ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂಗ್ಲಿಷ್‌ ಸ್ಪೀಕಿಂಗ್‌, ಕೋಚಿಂಗ್‌ ತರಗತಿ, ಫ್ರೆಂಚ್, ಜರ್ಮನ್‌,ಅರಬಿಕ್‌ ಸಹಿತ ಇನ್ನಿತರ ಭಾಷೆಗಳ ತರಗತಿ ಗಳು ಆರಂಭಗೊಂಡಿವೆ. ಇತರ ದೇಶಗಳ ಭಾಷೆಗಳನ್ನು ಕಲಿಯಲು ವಿದ್ಯಾರ್ಥಿಗಳು ದುಬಾರಿ ಫೀಸ್‌ ನೀಡಿ ತರಗತಿಗಳಿಗೆ ಸೇರಿಕೊಳ್ಳುತ್ತಿದ್ದಾರೆ. ವಿದೇಶಿ ಭಾಷೆಗಳ ಕಲಿಕೆ ಇಂದಿನ ಅನಿವಾರ್ಯತೆಯೂ ಹೌದು. ದೇಶದಲ್ಲಿ ಇಲ್ಲಿನ ಕಂಪೆನಿಗಳಿಗಿಂತಲೂ ವಿದೇಶಿ ಕಂಪೆನಿಗಳು ಹೆಚ್ಚಿವೆ. ಅಂತಹ ಕಂಪೆನಿಗಳಲ್ಲಿ ಉತ್ತಮ ವೇತನದೊಂದಿಗೆ ಉದ್ಯೋಗ ದೊರಕಬೇಕಾದರೆ ಆ ಕಂಪೆನಿಯಲ್ಲಿ ಸಂವಹಿಸಲು ಅಗತ್ಯವಿರುವ ಭಾಷೆ ಗಳನ್ನು ಕಲಿಯಬೇಕಾಗಿದೆ. ವಿದ್ಯಾಭ್ಯಾಸವಾದ ಬಳಿಕ ಯಾವ ಕಂಪೆನಿಯಲ್ಲಿ ಕರ್ತವ್ಯ ನಿರ್ವಹಿಸಬೇಕು ಆ ಕಂಪೆನಿಯ ಆವಶ್ಯಕತೆಗಳಿಗೆ ತಕ್ಕುದಾಗಿ ನಾವು ಸಿದ್ಧರಿರಬೇಕಾಗುತ್ತದೆ. ಆ ನಿಟ್ಟಿನಲ್ಲಿ ಪದವಿ ತರಗತಿಗಳಲ್ಲಿ ಹೆಚ್ಚುವರಿ ಭಾಷಾ ಕಲಿಕಾ ತರಗತಿಗಳಿಗೆ ಮಕ್ಕಳನ್ನು ಸೇರಿಸುವ ಬಗ್ಗೆ ಪೋಷಕರು ಚಿಂತಿಸುತ್ತಾರೆ. ಮಾತೃಭಾಷೆಯೊಂದಿಗೆ ಇತರ ಭಾಷೆಗಳನ್ನು ಕಲಿಯುವುದು ಜ್ಞಾನಾಭಿವೃದ್ಧಿ ಹಾಗೂ ವ್ಯವಹಾರ ಕ್ಷೇತ್ರದಲ್ಲಿ ಮನ್ನಣೆ ಪಡೆಯಲು ಅವಶ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಇಂತಹ ತರಗತಿಗಳನ್ನು ಆರಂಭಿಸಿರುವುದು ಮೆಚ್ಚಲೇಬೇಕಾದ ವಿಚಾರವಾಗಿದೆ.

ಇತರ ಭಾಷಾ ಕಲಿಕೆಯ ಲಾಭ?
ಮಾತೃಭಾಷೆ ತುಳು, ಕನ್ನಡ, ಕೊಂಕಣಿ ಅಥವಾ ಇನ್ಯಾವುದೇ ಭಾಷೆಯಾಗಿರಬಹುದು. ಆದರೆ ಸಮಾಜದ ವಿವಿಧ ಸ್ತರಗಳಲ್ಲಿ ಬದುಕಬೇಕಾಗಿರುವುದರಿಂದ ಸಾಮಾನ್ಯ ಭಾಷೆಗಳನ್ನು ಬಳಸಬೇಕಾಗಿದೆ. ಪ್ರಸ್ತುತ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕಾಗುತ್ತದೆ. ಪ್ರಾಥಮಿಕ ಶಾಲಾ ಹಂತದಿಂದ ಉದ್ಯೋಗಾವಕಾಶ ಲಭಿಸುವವರೆಗೂ ವಿವಿಧ ಹಂತಗಳಲ್ಲಿ ಆಂಗ್ಲಭಾಷೆ ಹಾಗೂ ಇತರ ಭಾಷೆಗಳ ಬಳಕೆ ಕಡ್ಡಾಯವಾಗಿರುವುದರಿಂದ ಅದನ್ನು ಕಲಿಯುವುದು ಎಲ್ಲರ ಕರ್ತವ್ಯ. ಮಾತೃಭಾಷೆಗೆ ಪ್ರಾಮುಖ್ಯತೆ ನೀಡಿ ಆವಶ್ಯಕ ತೆಗಳಿಗಾಗಿ ಇತರ ಭಾಷೆಗಳನ್ನು ಕಲಿಯು ವುದು ಉತ್ತಮ ನಡೆ. ತಾಂತ್ರಿಕತೆ, ಉದ್ಯೋಗ ಗಳಲ್ಲಿ ಸ್ಪರ್ಧೆ ಇವೆಲ್ಲದರ ನಡುವೆ ಅದಕ್ಕೆ ಆವಶ್ಯಕತೆ ಇರುವ ಭಾಷೆಗಳನ್ನು ಕಲಿಯ ಬೇಕಾಗುತ್ತದೆ. ಆಂಗ್ಲ ಭಾಷೆಯಲ್ಲಿ ನೈಪುಣ್ಯತೆ ಯನ್ನು ಪಡೆದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಸ್ವಾವಲಂಬಿಗಳಾಗಿ ಬದುಕ ಬಹುದು ಎಂಬ ಚಿತ್ರಣ ಈಗಾಗಲೇ ಎಲ್ಲರಲ್ಲೂ ಮೂಡಿದೆ. ಅದಕ್ಕೆ ತಕ್ಕುದಾಗಿ ಶೈಕ್ಷಣಿಕ ಸಂಸ್ಥೆಗಳು ಇಂಗ್ಲಿಷ್‌ ಮಾತ್ರ ವಲ್ಲದೆ ಫ್ರೆಂಚ್, ಸ್ಪೇನಿಶ್‌ ಸೇರಿದಂತೆ ಇನ್ನಿತರ ಭಾಷೆಗಳ ತರಗತಿಗಳನ್ನು ನಡೆಸುತ್ತಿವೆ. ನಮ್ಮ ದೇಶದ ಭಾಷೆ ಕಲಿಯುವುದಕ್ಕಿಂತಲೂ ವಿದೇಶಗಳಲ್ಲಿ ಪ್ರಚಲಿತದಲ್ಲಿರುವ ಅನೇಕ ಭಾಷೆಗಳನ್ನು ಕಲಿಯುವ ಉತ್ಸಾಹದಲ್ಲಿ ಇಂದಿನ ಯುವ ಜನತೆ ಇದೆ.

ಇತರ ಭಾಷೆಗಳ ಕಲಿಕೆಗೆ ಪ್ರೋತ್ಸಾಹ
ಮಾತೃಭಾಷೆ, ರಾಷ್ಟ್ರಭಾಷೆ ಹಾಗೂ ಆಂಗ್ಲಭಾಷೆಗಳು ಇಂದಿನ ಆವಶ್ಯಕತೆಗಳಲ್ಲಿ ಪ್ರಮುಖ ಸ್ಥಾನ ಪಡೆದು ಕೊಂಡಿರುತ್ತವೆ. ಆ ಕಾರಣಕ್ಕೆ ಪೋಷಕರು, ಶಿಕ್ಷಕರು ವಿದ್ಯಾರ್ಥಿಗೆ ಭಾಷಾ ಕಲಿಕೆಗೆ ಹೆಚ್ಚು ಪ್ರೋತ್ಸಾಹ ನೀಡು ತ್ತಾರೆ. ಶಾಲಾ ಹಂತದಲ್ಲಿ ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯನ್ನು ಕಲಿಸಲಾಗುತ್ತದೆ. ಪದವಿಯ ಬಳಿಕ ತಮ್ಮ ಐಚ್ಛಿಕ ಭಾಷೆಯನ್ನು ಕಲಿಯುವ ಆವಶ್ಯಕತೆ ಇರುತ್ತದೆ. ಅದಕ್ಕಾಗಿ ಶಿಕ್ಷಣ ಸಂಸ್ಥೆಗಳಲ್ಲಿ ಕೋಚಿಂಗ್‌ ಕ್ಲಾಸ್‌ಗಳು, ನಗರದ ವಿವಿಧ ಭಾಗಗಳಲ್ಲಿ ಹಲವು ಕೋಚಿಂಗ್‌ ಕ್ಲಾಸ್‌ಗಳು ಇದ್ದು, ಅಲ್ಲಿ ತಮಗೆ ಬೇಕಾದ ಭಾಷೆಗಳನ್ನು ಕಲಿಯುವ ಅವಕಾಶ ಇದೆ.

ಮಾತೃಭಾಷೆಗೆ ಪ್ರಥಮ ಆದ್ಯತೆ
ಮಗು ಜನನದ ಬಳಿಕ ತನ್ನ ಸುತ್ತಮುತ್ತ ಇರುವ ಜನರು ಮಾತನಾಡುವ ಭಾಷೆಯ ಬಗೆಗೆ ಹೆಚ್ಚು ಗಮನ ನೀಡುತ್ತದೆ. ಅದ ರಲ್ಲೂ ಹೆತ್ತವರು ಮಗುವಿನಲ್ಲಿ ಯಾವ ಭಾಷೆಯಲ್ಲಿ ಸಂವಹನ ನಡೆಸುತ್ತಾರೆಯೋ ಅದನ್ನೇ ಮಗು ತನ್ನ ಮೊದಲ ಭಾಷೆಯಾಗಿ ಸ್ವೀಕರಿಸುತ್ತದೆ. ನಮ್ಮ ಆವಶ್ಯಕತೆಗಳಿಗಾಗಿ ಹಲವು ಭಾಷೆಗಳನ್ನು ಕಲಿತುಕೊಂಡರೂ ಮಾತೃಭಾಷೆಗೆ ಮೊದಲ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಆ ಬಳಿಕ ಕಲಿತ ಅನೇಕ ಭಾಷೆಗಳು ಮಾತೃಭಾಷೆಯ ಬಳಿಕ ಸ್ಥಾನ ಪಡೆದುಕೊಳ್ಳಬೇಕು. ತಮ್ಮ ವ್ಯವಹಾರ, ಸ್ವ – ಅಭಿವೃದ್ಧಿಯ ದೃಷ್ಟಿಯಲ್ಲಿ ಕಲಿತ ಭಾಷೆಗಳು ನಮ್ಮ ಔದ್ಯೋಗಿಕ ಉನ್ನತಿಯಲ್ಲಿ ಸಹಕರಿಸಿದರೆ, ಮಾತೃಭಾಷೆಗಳು ನಮ್ಮ ನಾಡಿನ ಮೇಲಿನ ಪ್ರೀತಿಯನ್ನು ಬಿಂಬಿಸುತ್ತವೆ.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.