CONNECT WITH US  

ಮಶ್ರೂಮ್‌ ಸ್ನ್ಯಾಕ್ಸ್‌

ಬೇಕಾಗುವ ಸಾಮಗ್ರಿ
.ಒಂದು ಪ್ಯಾಕೆಟ್‌ ಅಣಬೆ
.ಚಿಕ್ಕದಾಗಿ ಕತ್ತರಿಸಿದ ಶುಂಠಿ ಒಂದೂವರೆ ಚಮಚ
.2 ಚಮಚ ಎಣ್ಣೆ
.1/ 4 ಚಮಚ ಜೀರಿಗೆ
. 1/2 ಚಮಚ ಕೆಂಪು ಮೆಣಸಿನ ಪುಡಿ
.ಸ್ವಲ್ಪ ಅರಿಸಿನ ಪುಡಿ
.ರುಚಿಗೆ ತಕ್ಕ ಉಪ್ಪು

ಮಾಡುವ ವಿಧಾನ
ಎಣ್ಣೆಯನ್ನು ಬಿಸಿ ಮಾಡಿ ಜೀರಿಗೆಯನ್ನು ಹಾಕಬೇಕು. ಅನಂತರ ಕತ್ತರಿಸಿದ ಶುಂಠಿ ಹಾಕಿ ಬಿಸಿ ಮಾಡಬೇಕು. ಶುಚಿ ಮಾಡಿ ಅಣಬೆ, ಮೆಣಸಿನ ಪುಡಿ , ಸ್ವಲ್ಪ ಅರಿಸಿನ ಪುಡಿ ರುಚಿಗೆ ತಕ್ಕ ಉಪ್ಪು ಹಾಕಿ ಸೌಟ್‌ನಿಂದ ತಿರುವುತ್ತಾ ಎಣ್ಣೆಯಲ್ಲಿಯೇ ಬೇಯಿಸಬೇಕು. ಈ ರೀತಿ ಮಾಡಿದರೆ ರುಚಿಕರವಾದ ಮಶ್ರೂಮ್‌ ಸ್ನ್ಯಾಕ್ಸ್‌ ರೆಡಿ. 

ಇಂದು ಹೆಚ್ಚು ಓದಿದ್ದು

Trending videos

Back to Top