CONNECT WITH US  

'ಮಾಜಿ ಮುಖ್ಯಮಂತ್ರಿ'ಗಳಿಂದ ಗೋಲ್‌ಮಾಲ್‌

ಪ್ರಸ್ತುತ ತುಳುಚಿತ್ರರಂಗ ವಿಭಿನ್ನ ಕಥೆ- ಕಲಾವಿದರ ಮೂಲಕ ಗಮನಸೆಳೆಯುತ್ತಿದ್ದು, ಈಗ 'ಮಾಜಿ ಮುಖ್ಯಮಂತ್ರಿ' ಎಂಬ ತುಳು ಸಿನೆಮಾವೊಂದು ಸೆಟ್ಟೇರಲು ಅಣಿಯಾಗುತ್ತಿದ್ದು, ಹಗರಣವೊಂದರ ಸುತ್ತ ನಡೆಯುವ ಘಟನಾವಳಿಯೇ ಇದರ ಪ್ರಮುಖ ಕಥಾವಸ್ತು. ವಿಶೇಷವೆಂದರೆ ತುಳುನಾಡಿನ ನಿಜ ಜೀವನದ ರಾಜಕಾರಣಿಗಳನ್ನೇ ಕಲಾವಿದರನ್ನಾಗಿ ಚಿತ್ರದಲ್ಲಿ ಬಳಸಿಕೊಳ್ಳಲು ಚಿತ್ರ ತಂಡ ನಿರ್ಧರಿಸಿದೆ. ಆಗಸ್ಟ್‌ ಆರಂಭದಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದ್ದು, ಈಗಾಗಲೇ ಹೆಚ್ಚಿನ ಜನಪ್ರತಿನಿಧಿಗಳಲ್ಲಿ ಚಿತ್ರದ ಅಭಿನಯದ ಕುರಿತು ಮಾತುಕತೆ ನಡೆದಿದ್ದು, ಯಾವುದೂ ಅಂತಿಮಗೊಂಡಿಲ್ಲ.

ಮಾಜಿ ಸಚಿವರು, ಸಚಿವರು, ಮಾಜಿ ಶಾಸಕರು, ಹಾಲಿ ಶಾಸಕರು, ಕಾರ್ಪೊರೇಟರ್‌ಗಳು, ಜಿ.ಪಂ.ಅಧ್ಯಕ್ಷರು, ಸದಸ್ಯರು ಹೀಗೆ ಬಹುತೇಕ ಜನಪ್ರತಿನಿಧಿಗಳಲ್ಲಿ ಮಾತುಕತೆ ನಡೆದಿದೆ. ಕಲಾವಿದರಿಗಿಂತಲೂ ಹವ್ಯಾಸಿ ಕಲಾವಿದರು ಇಲ್ಲಿ ಪ್ರಮುಖ ಆಕರ್ಷಣೆಯಾಗಲಿದ್ದಾರೆ. ಚಿತ್ರವನ್ನು ತ್ರಿಶೂಲ್‌ ಶೆಟ್ಟಿ ನಿರ್ದೇಶನ ಮಾಡುತ್ತಿದ್ದು, ಈಗಾಗಲೇ ಲೊಕೇಶನ್‌ ಗಳು ಫಿಕ್ಸ್‌ ಆಗಿದ್ದು, ಆಗಸ್ಟ್‌ನಲ್ಲಿ ಚಿತ್ರೀಕರಣ ಆರಂಭಗೊಳ್ಳಲಿದೆ.

ಅವಿಭಜಿತ ದ.ಕ. ಜಿಲ್ಲೆಯ ಜನಪ್ರತಿನಿಧಿಗಳು ಒಂದಲ್ಲ ಒಂದು ರೀತಿಯಲ್ಲಿ ಕಲಾವಿದರೇ ಆಗಿರುತ್ತಾರೆ. ಜತೆಗೆ ನಾಟಕ, ಯಕ್ಷಗಾನಗಳನ್ನು ನೋಡಿ ಅಭಿನಯವನ್ನು ತಿಳಿದುಕೊಂಡಿರುತ್ತಾರೆ. ಹೀಗಾಗಿ ಅವರನ್ನು ಸಿನೆಮಾದಲ್ಲಿ ಅಭಿನಯಿಸುವಂತೆ ಮಾಡುವುದು ದೊಡ್ಡ ವಿಚಾರವಲ್ಲ ಎನ್ನುವುದು ಚಿತ್ರದ ನಿರ್ಮಾಪಕ ರಾಜೇಶ್‌ ಬ್ರಹ್ಮಾವರ ಅವರ ಅಭಿಪ್ರಾಯ.

'ಜ್ಯೋತಿ ಸರ್ಕಲ್‌' ವಿಭಿನ್ನ ಕಾನ್ಸೆಪ್ಟ್
ರಾಜೇಶ್‌ ಬ್ರಹ್ಮಾವರ ಅವರು ಮತ್ತೊಂದು ಸಿನೆಮಾವೊಂದನ್ನು ನಿರ್ಮಿಸುತ್ತಿದ್ದು, 15 ದಿನಗಳಲ್ಲಿ ಅವರ 'ಜ್ಯೋತಿ ಸರ್ಕಲ್‌' ತುಳುಚಿತ್ರದ ಶೂಟಿಂಗ್‌ ಆರಂಭಗೊಳ್ಳಲಿದೆ. ಕಾಮಿಡಿ ಕಾನ್ಸೆಪ್ಟ್ನ್ನು ಬಿಟ್ಟು ಕೋಸ್ಟಲ್‌ವುಡ್‌ನ‌ಲ್ಲಿ ಈ ಚಿತ್ರ ಡಿಫರೆಂಟ್‌ ಆಗಿ ಮೂಡಿಬರಲಿದೆ ಎಂಬುದು ನಿರ್ಮಾಪಕರ ಮಾತು.

ಚಿತ್ರಕ್ಕೆ ಕಲಾವಿದರ ಆಯ್ಕೆ ಬಹುತೇಕ ಪೂರ್ಣಗೊಂಡಿದ್ದು, ನಾಯಕ- ನಾಯಕಿಯರು ಯಾರೆಂದು ಇನ್ನೂ ಅಂತಿಮಗೊಂಡಿಲ್ಲ. ಚಿತ್ರವನ್ನು ರಾಜೇಶ್‌ ಬಂದ್ಯೋಡು ನಿರ್ದೇಶನ ಮಾಡುತ್ತಿದ್ದು, ಕನ್ನಡದ ಸ್ಟಾರ್‌ ಕಲಾವಿದರನ್ನು ಚಿತ್ರಕ್ಕೆ ತರುವ ಆಲೋಚನೆ ಇದೆ. ಆದರೆ ಯಾವುದೂ ಕೂಡ ಇನ್ನೂ ಅಂತಿಮಗೊಂಡಿಲ್ಲ ಎಂದು ಬ್ರಹ್ಮಾವರ್‌ ಅಭಿಪ್ರಾಯಿಸುತ್ತಾರೆ.

ಇಂದು ಹೆಚ್ಚು ಓದಿದ್ದು

Trending videos

Back to Top