ಹೀಗೂ ಮಾಡಬಹುದು ಕೋಲ್ಡ್  ಕಾಫಿ !


Team Udayavani, Oct 6, 2018, 2:48 PM IST

6-october-12.gif

ಕಾಫಿ ಎಂದರೆ ಯಾರಿಗೆ ತಾನೇ ಪ್ರಿಯವಲ್ಲ. ಒಂದು ಕಪ್‌ ಕುಡಿ ದರೆ ಮತ್ತೂಂದು ಕಪ್‌ ಬೇಕೆನಿಸುವಷ್ಟು ಸ್ವಾದ ಹೊಂದಿರುವ ಕಾಫಿಯೂ ಈಗ ಕೋಲ್ಡ್‌ ಕಾಫಿಯಾಗಿ, ವಿವಿಧ ಫ್ಲೇವರ್‌ ಗಳಲ್ಲಿ ಲಭ್ಯವಿವೆ. ಹೊಟೇಲ್‌, ಕಾಫಿ ಡೇಯಲ್ಲಿ ಮಾತ್ರ ಸಿಗುವ ವಿವಿಧ ಫ್ಲೇವರ್‌ನ ಕೋಲ್ಡ್‌ ಕಾಫಿಯನ್ನು ಮಾಡುವುದು ಸುಲಭ. ಇದನ್ನು ಮಾಡುವ ಕಲೆ ರೂಪಿಸಿಕೊಂಡರೆ ಮನೆಗೆ ಅತಿಥಿಗಳು ಬಂದಾಗ, ನಿಮಗೂ ಕುಡಿಯಬೇಕೆಂದಿನಿಸಿದಾಗ ಮಾಡಿ ಸವಿಯಬಹುದು.

ಬಿಸಿಲಿನಿಂದ ದಣಿದು ಮನೆಗೆ ಬಂದಾಗ, ತಂಪುತಂಪಾದ ಪಾನೀಯ ಕುಡಿಯಬೇಕೆಂದೆನಿಸಿದಾಗ ಮನೆ ಮಂದಿಗೆ, ಅತಿಥಿಗಳಿಗೆ ಕೋಲ್ಡ್‌ ಕಾಫಿ ಮಾಡಿಕೊಟ್ಟರೆ ಎಲ್ಲರೂ ಫ‌ುಲ್‌ ಖುಷ್‌ ಆಗುವುದು ಮಾತ್ರ ಸುಳ್ಳಲ್ಲ.

ಕೋಲ್ಡ್‌ ಕಾಫಿಯಲ್ಲಿ ನಾನಾ ಫ್ಲೇವರ್‌ ಗಳಿದ್ದರೂ ಎಲ್ಲದರ ಟೇಸ್ಟ್‌ ಸೂಪರ್‌ ಆಗಿಯೇ ಇರುತ್ತದೆ. ಮಕ್ಕಳಂತೂ ಇದನ್ನು ಖುಷಿಯಿಂದ ಸವಿಯುತ್ತಾರೆ. ಸುಲಭವಾಗಿ ಕಡಿಮೆ ಸಮಯದಲ್ಲಿ ಮಾಡಬಹುದಾದ ಕೋಲ್ಡ್‌ ಕಾಫಿಯಿಂದ ಸಮಯದ ಉಳಿತಾಯನೂ ಆಗುತ್ತೆ. ಎಷ್ಟೇ ತುರ್ತು ಸಂದರ್ಭವಿದ್ದರೂ ಮಾಡಿ ಕುಡಿಯಬಹುದು. 

ಮೊದಲಿಗೆ ಇನ್‌ ಸ್ಟೆಂಟ್‌ ಕಾಫಿ ಪೌಡರ್‌ನಿಂದ ಅಥವಾ ಸ್ಟ್ರಾಂಗ್‌ ಕಾಫಿ ಡಿಕಾಕ್ಷನ್‌ ಮಾಡಿಟ್ಟುಕೊಳ್ಳಿ. ಜತೆಗೆ ಕಾಫಿಗೆ ಬೇಕಾದಷ್ಟು ಸಕ್ಕರೆ ಅಥವಾ ಸಕ್ಕರೆ ಪೌಡರ್‌ ಬೆರೆಸಿ, ಕುದಿಸಿ ತಣಿಯಲು ಬಿಡಿ. ಹಾಲನ್ನು ಕಾಯಿಸಿ ಫ್ರಿಜ್‌ ನಲ್ಲಿಟ್ಟಿರಿ. ಬೇಕಾದಾಗ, ಬೇಕಾದಷ್ಟು ಕಾಫಿ ಡಿಕಾಕ್ಷನ್‌ ಗೆ ತಂಪಾದ ಹಾಲನ್ನು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಹಾಲು ಹೆಚ್ಚು ಕೋಲ್ಡ್‌ ಇಲ್ಲದೇ ಇದ್ದರೆ ಐಸ್‌ ಕ್ಯೂಬ್‌ ಗಳನ್ನೂ ಸೇರಿಸಬಹುದು. 

ಹೀಗೆ ಸಿದ್ಧಪಡಿಸಿದ ಕೋಲ್ಡ್‌ ಕಾಫಿಯನ್ನು ಗ್ಲಾಸ್‌ ನಲ್ಲಿ ಹಾಕಿ ಸರ್ವ್‌ ಮಾಡಬಹುದು. ಗಾಜಿನ ಲೋಟದಲ್ಲಿ ಇದನ್ನು ಸರ್ವ್‌ ಮಾಡುವುದರಿಂದ ನೋಡುವಾಗಲೇ ಇದು ಹೆಚ್ಚು ಖುಷಿ ಕೊಡುತ್ತದೆ.

ಕೋಲ್ಡ್‌ ಕಾಫಿಗೆ ಫ್ಲೇವರ್‌ ಬೇಕಿ ದ್ದರೆ ಕರಗಿಸಿದ ಚಾಕೊಲೆಟ್‌ ಅನ್ನು ಗಾಜಿನ ಲೋಟದೊಳಗೆ ಸುತ್ತಲೂ ಸವರಿ. ಬಳಿಕ ಅದಕ್ಕೆ ಕೋಲ್ಡ್‌ ಕಾಫಿ ಹಾಕಬೇಕು. ಈಗ ಇದರ ಮೇಲೆ ನೊರೆ ನಿಂತಿರುತ್ತದೆ. ಅನಂತರ ಫ್ಲೇವರ್‌ ಬೇಕಿದ್ದರೆ ಚಾಕೋಲೇಟ್‌, ಓರಿಯೋ ಬಿಸ್ಕೆಟ್‌ ಪೌಡರ್‌, ಡ್ರೈಫ್ರು ಟ್ಸ್‌ನ ಪೌಡರ್‌ ಗಳನ್ನು ಹಾಕಿ ಕೊಂಡರೆ ಕೋಲ್ಡ್‌ ಕಾಫಿಯ ಸ್ವಾದ ಮತ್ತಷ್ಟು ಹೆಚ್ಚಾಗುತ್ತದೆ. ಇಷ್ಟೇ ಅಲ್ಲದೇ ನಿಮಗಿಷ್ಟವಾದ ಐಸ್‌ ಕ್ರೀಮ್‌ ಹಾಕಿಕೊಂಡು ಕೂಡ ಕಾಫಿ ಕುಡಿಯಬಹುದು. ವಿವಿಧ ಬಣ್ಣದ ಕ್ರೀಮ್‌ ಗಳಿಂದ ಕಾಫಿಯ ಮೇಲೆ ಅಲಂಕರಿಸಿದರೆ ಕಾಫಿಯ ಸೌಂದರ್ಯದೊಂದಿಗೆ ಸ್ವಾದವೂ ಹೆಚ್ಚುತ್ತದೆ.

ಇಷ್ಟೇ ಅಲ್ಲದೇ ಡ್ರೈಫ್ರುಟ್ಸ್‌ನ ತುಣುಕು, ಬ್ರೆಡ್‌ ಸ್ಲೈಸ್‌ ಗಳನ್ನೂ ಈ ಕಾಫಿಯೊಳಗೆ ಸೇರಿಸಬಹುದು. ಒಟ್ಟಿನಲ್ಲಿ ಕಾಫಿಯ ಸ್ವಾದ ಹೆಚ್ಚಲು ಹೊಸ ಹೊಸ ಫ್ಲೇವರ್‌ ಗಳನ್ನು ಮನೆಯಲ್ಲೇ ಟ್ರೈ ಮಾಡಿ ನೋಡಬಹುದು. ವಿಭಿನ್ನ ಮತ್ತು ವಿಶೇಷ ಸ್ವಾದ ಹೊಂದಿರುವ ಈ ಕೋಲ್ಡ್‌ ಕಾಫಿ ಮನೆ ಮಂದಿಯ, ಅತಿಥಿಗಳ ಮನಗೆಲ್ಲುವುದು ಗ್ಯಾರಂಟಿ.

 ಭರತ್‌ ರಾಜ್‌ ಕರ್ತಡ್ಕ

ಟಾಪ್ ನ್ಯೂಸ್

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Nomination: ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಿದ ಪ್ರಿಯಂಕಾ ಜಾರಕಿಹೊಳಿ‌

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.